ಇಂದು ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ: ಜೈಲಾ ಅಥವಾ ಆಸ್ಪತ್ರೆ ಇಂದು ನಿರ್ಧಾರ!

ಎಂಜೋಗ್ರಾಮ್ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್​​ಗೆ ಮಾಡುವಂತೆ ಮನವಿ ಮಾಡಲಾಗಿದೆ. ಆಸ್ಪತ್ರೆಗೆ ಶಿಫ್ಟ್ ಬಗ್ಗೆಯೂ ಇಂದು ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ.

ಇಂದು ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ: ಜೈಲಾ ಅಥವಾ ಆಸ್ಪತ್ರೆ ಇಂದು ನಿರ್ಧಾರ!
ಮುರುಘಾಶ್ರೀ
Edited By:

Updated on: Sep 12, 2022 | 7:37 AM

ಚಿತ್ರದುರ್ಗ: ಪೋಕ್ಸೋ ಕೇಸ್​ನಲ್ಲಿ ಮುರುಘಾಶ್ರೀಗಳು ಜೈಲು ಸೇರಿದ್ದು, ಜಿಲ್ಲೆಯ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​​ನಲ್ಲಿ ಇಂದು ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆ ಬಳಿಕ ಮುರುಘಾಶ್ರೀಗೆ ಬೇಲಾ, ಜೈಲಾ, ಆಸ್ಪತ್ರೆನಾ? ಇಂದು ನಿರ್ಧಾರವಾಗಲಿದೆ. ಸೆ.14ರವರೆಗೆ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರೊನರಿ ಎಂಜೋಗ್ರಾಮ ಪರೀಕ್ಷೆ, ಚಿಕಿತ್ಸೆ ಬಗ್ಗೆಯೂ ವಿಚಾರಣೆ ನಡೆಯಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಮುರುಘಾಶ್ರೀ ಪರ ವಕೀಲರು ಮನವಿ ಮಾಡಿದ್ದು, ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೋರ್ಟ್ ಸೂಚಿಸಿತ್ತು. ಎಂಜೋಗ್ರಾಮ್ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್​​ಗೆ ಮಾಡುವಂತೆ ಮನವಿ ಮಾಡಲಾಗಿದೆ. ಆಸ್ಪತ್ರೆಗೆ ಶಿಫ್ಟ್ ಬಗ್ಗೆಯೂ ಇಂದು ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ. ಮುರುಘಾಶ್ರೀ ಹೆಲ್ತ್ ರಿಪೋರ್ಟ್ ಆಧಾರದ ಮೇಲೆ ಕೋರ್ಟ್ ಸೂಚನೆ ನೀಡಲಿದೆ ಎನ್ನಲಾಗುತ್ತಿದೆ.

ಸೊಳ್ಳೆ ಕಾಟದಿಂದ ಕಂಗಾಲಾದ ಮುರುಘಾಶ್ರೀ

ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀಗೆ ರಾತ್ರಿ ಸೊಳ್ಳೆ ಕಾಟದಿಂದ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಮೂರ್ನಾಲ್ಕು ಸಲ  ಮುರುಘಾಶ್ರೀ ಎದ್ದೆದ್ದು ಕುಳಿತಿದ್ದಾರೆ. ಬೆಳಗ್ಗೆ 6ಗಂಟೆಗೆ ಎದ್ದು ಕುಳಿತಿದ್ದು, ವಾಕಿಂಗ್ ತೆರಳಲು ಮುಂದಾದ ಮುರುಘಾಶ್ರೀಗೆ ಸಿಬ್ಬಂದಿ ನಿರಾಕರಿಸಿದ್ದಾರೆ. ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಚಿತ್ರನ್ನ ಸೇವಿಸಿದ್ದು, ಮಧ್ಯಾಹ್ನ ಮತ್ತು ರಾತ್ರಿ ಮುದ್ದೆ, ಚಪಾತಿ, ಅನ್ನ, ಸಾರು ಜೈಲೂಟವನ್ನೇ ಮುರುಘಾಶ್ರೀ ಸೇವಿಸುತ್ತಿದ್ದಾರೆ. ಬೆಳಗ್ಗೆ 11ಗಂಟೆಗೆ ಜೈಲಿನ ಲೈಬ್ರರಿಯಲ್ಲಿ ಓದಿದ್ದು, ಮಧ್ಯಾಹ್ನ  4 ಗಂಟೆಯಿಂದ ಜೈಲಿನಲ್ಲೇ ಕುಳಿತು ಮುರುಘಾಶ್ರೀ ಡೈರಿ ಬರೆದಿದ್ದಾರೆ.

5ನೇ ಆರೋಪಿ ಗಂಗಾಧರಯ್ಯ ಪೊಲೀಸರಿಗೆ ಶರಣು

ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರಾಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪ್ರಸ್ತುತ ಜೈಲಿನಲ್ಲಿದ್ದಾರೆ. ಈ ಪ್ರಕರಣದ 5ನೇ (A5) ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ (ಸೆ 6) ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಡಿವೈಎಸ್​ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಸಿ, ತನಿಖಾಧಿಕಾರಿ ಸೂಚಿಸಿದಾಗ ಬರಲು ಸೂಚನೆ ನೀಡಿದ್ದಾರೆ.

2ನೇ ಆರೋಪಿ ಮಹಿಳಾ ವಾರ್ಡನ್​ಳನ್ನು ಸೆ.8ರವರೆಗೆ ಪೊಲೀಸ್ ಕಸ್ಟಡಿಗೆ

ಇನ್ನೂ ಪ್ರಕರಣದ 2ನೇ ಆರೋಪಿ ಮಹಿಳಾ ವಾರ್ಡನ್​ಳನ್ನು ಸೆ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಶಿವಮೊಗ್ಗ ಜೈಲಿನಲ್ಲಿದ್ದ ಮಹಿಳಾ ವಾರ್ಡನ್​ಳನ್ನು ಚಿತ್ರದುರ್ಗ ಪೊಲೀಸರು ​ಏಳು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಪೊಲೀಸರು ಮಹಿಳಾ ವಾರ್ಡನ್​ಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:36 am, Mon, 12 September 22

TV9 Web

TV9 Kannada

Read More
Loading...
Unable to load recommendations.
Follow Us