Murugha Mutt Case: ಇಂದು ಮುರುಘಾಶ್ರೀ ಬಿಡುಗಡೆ ಸಾಧ್ಯವಿಲ್ಲ ಎಂದ ಸರ್ಕಾರಿ ವಕೀಲ

Murugha Mutt Case: ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪೋಕ್ಸೋ ಕೇಸ್​ನಲ್ಲಿ ಮುರುಘಾಶ್ರೀಗೆ ಜಾಮೀನು ಹಿನ್ನೆಲೆ ಆದೇಶ ಕಾಪಿಯನ್ನು ಚಿತ್ರದುರ್ಗ ಕೋರ್ಟ್​ಗೆ ಸಲ್ಲಿಕೆ ಮಾಡಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸರ್ಕಾರಿ ವಕೀಲ ಜಗದೀಶ್, ಇಂದು ಮುರುಘಾಶ್ರೀ ಬಿಡುಗಡೆ ಸಾಧ್ಯವಿಲ್ಲ ಎಂದಿದ್ದಾರೆ.

Murugha Mutt Case: ಇಂದು ಮುರುಘಾಶ್ರೀ ಬಿಡುಗಡೆ ಸಾಧ್ಯವಿಲ್ಲ ಎಂದ ಸರ್ಕಾರಿ ವಕೀಲ
ಚಿತ್ರದುರ್ಗದ ಮುರುಘಾಶ್ರೀ, ಸರ್ಕಾರಿ ವಕೀಲ ಜಗದೀಶ್​
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 15, 2023 | 5:16 PM

ಚಿತ್ರದುರ್ಗ, ನವೆಂಬರ್​​​ 15: ಇಂದು ಮುರುಘಾಶ್ರೀ (Murugha Shree) ಬಿಡುಗಡೆ ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲ ಜಗದೀಶ್​ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಇದೆ. ಹಾಗಾಗಿ ಜಾಮೀನು ಮಂಜೂರಾಗಿಲ್ಲ. ನಾಳೆವರೆಗೆ ಮುರುಘಾಶ್ರೀ ಬಾಡಿ ವಾರೆಂಟ್ ನಲ್ಲಿರುತ್ತಾರೆ. ನಾಳೆ ಕೋರ್ಟ್​ನಲ್ಲಿ ಈ ಬಗ್ಗೆ ವಾದ ಮಂಡನೆ ನಡೆಯಲಿದೆ. ಬಳಿಕ ಕೋರ್ಟ್ ಮುರುಘಾಶ್ರೀ ಪ್ರಕರಣದ ಬಗ್ಗೆ ಆದೇಶ ನೀಡಲಿದ್ದಾರೆ.

ಮೊದಲ ಕೇಸ್​ನಲ್ಲಿ ಜಾಮೀನು ಬಗ್ಗೆ ಮುರುಘಾಶ್ರೀ ಪರ ವಕೀಲರು ಕಾರಾಗೃಹಕ್ಕೆ ಆದೇಶ ಕಾಪಿ ನೀಡಬಹುದು. ನಾವು ಸಹ ಎರಡನೇ ಕೇಸಲ್ಲಿ ಬಾಡಿ ವಾರೆಂಟ್ ಇರುವುದನ್ನು ಸಲ್ಲಿಸುತ್ತೇವೆ. ನಾಳೆ ಮುರುಘಾಶ್ರೀ ವಿಸಿ ಮೂಲಕ ಕೋರ್ಟ್​ನಲ್ಲಿ ವಾದ ವಿವಾದ ನಡೆಯಲಿದೆ. ಕಾನೂನು ಪ್ರಕಾರ ನಾವು ಬಾಡಿ ವಾರೆಂಟ್ ಕೇಳಿದ್ದೇವೆ. ನ್ಯಾಯಂಗ, ಪೊಲೀಸ್ ಇಲಾಖೆಗೆ ಯಾವುದೇ ದುರುದ್ದೇಶ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾಮೀನು ಸಿಕ್ಕರೂ ಮುರುಘಾಶ್ರೀಗೆ ಶಿಕ್ಷೆ ಆಗೇ ಆಗುತ್ತೆ: ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ

ಮೊದಲ ಫೋಕ್ಸೋ ಕೇಸಲ್ಲಿ ಜಾಮೀನು ಹಿನ್ನೆಲೆ ಚಿತ್ರದುರ್ಗದ ಮುರುಘಾಶ್ರೀಗೆ ಇಂದೂ ಬಿಡುಗಡೆ ಭಾಗ್ಯವಿಲ್ಲ. ಇಂದೇ ಮುರುಘಾಶ್ರೀ ಬಿಡುಗಡೆ ಆಗುತ್ತಾರೆ ಎಂದು ಮುರುಘಾಶ್ರೀ ಪರ ವಕೀಲ ಸಂದೀಪ ಪಾಟೀಲ್​ ಹೇಳಿದ್ದರು.

ಮೊದಲ ಪೋಕ್ಸೋ ಕೇಸ್​ನಲ್ಲಿ ಮುರುಘಾಶ್ರೀಗೆ ಜಾಮೀನು ಹಿನ್ನೆಲೆ ಹೈಕೋರ್ಟ್ ಜಾಮೀನು ಆದೇಶ ಕಾಪಿಯನ್ನು ಚಿತ್ರದುರ್ಗ ಕೋರ್ಟ್​ಗೆ ಸಲ್ಲಿಕೆ ಮಾಡಲಾಗಿದೆ. ಏಳು ಷರತ್ತು ವಿಧಿಸುವ ಮೂಲಕ ಹೈಕೋರ್ಟ್​ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ: Murugha Mutt Case: ಜೈಲಾ? ಬೇಲಾ?: ಇಂದು ಹೈಕೋರ್ಟ್‍ನಲ್ಲಿ ಮುರುಘಾ ಶ್ರೀ ಭವಿಷ್ಯ ನಿರ್ಧಾರ

ಶ್ಯೂರಿಟಿ ಬಾಂಡ್​, ಪಾಸ್​ಪೋರ್ಟ್​ ನ್ಯಾಯಾಲಯಕ್ಕೆ ಸಲ್ಲಿಕೆ ಹಿನ್ನೆಲೆ ಆದೇಶ ಕಾಪಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಪರಿಶೀಲನೆ ಮಾಡಿದೆ. ಮೊದಲ ಕೇಸ್​​ನಲ್ಲಿ ಜಾಮೀನು ನೀಡಿದ್ದನ್ನು ಕೋರ್ಟ್ ಸಮ್ಮತಿಸಿದೆ.

ಚಿತ್ರದುರ್ಗ ಕೋರ್ಟ್ ಆದೇಶ ಕಾಪಿ ಕಾರಾಗೃಹಕ್ಕೆ ಸಲ್ಲಿಕೆ ಸಾಧ್ಯತೆ ಇದೆ. ಒಂದು ವೇಳೆ ಇಂದೇ ಕಾರಾಗೃಹಕ್ಕೆ ಅಧಿಕೃತ ಆದೇಶ ಕಾಪಿ ಸಲ್ಲಿಸಿದರೆ ಚಿತ್ರದುರ್ಗದ ಮುರುಘಾಶ್ರೀಗೆ ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತಿದೆ.

2ನೇ ಪೋಕ್ಸೋ ಪ್ರಕರಣದ ವಿಚಾರಣೆ ನಾಳೆಗೆ ಮುಂದೂಡಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ನಾಳೆ ಸರ್ಕಾರಿ ವಕೀಲ ಜಗದೀಶ್‌ ವಾದ ಮಂಡನೆ ಮಾಡಿಲಿದ್ದಾರೆ.  2ನೇ ಪೋಕ್ಸೋ ಪ್ರಕರಣದಲ್ಲಿ ಬಾಡಿ ವಾರಂಟ್‌ ಹಿನ್ನೆಲೆ ನ್ಯಾಯಾಂಗ ಬಂಧನವಾಗಿ ವಿಸ್ತರಿಸಲು ಮನವಿ ಬಗ್ಗೆ ವಾದ ಮಂಡನೆ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್