Sign In

By signing in or creating an account, you agree with Associated Broadcasting Company's Terms & Conditions and Privacy Policy.

Murugha Mutt Case: ಜೈಲಾ? ಬೇಲಾ?: ಇಂದು ಹೈಕೋರ್ಟ್‍ನಲ್ಲಿ ಮುರುಘಾ ಶ್ರೀ ಭವಿಷ್ಯ ನಿರ್ಧಾರ

Murugha Mutt Case: ಫೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕರ್ನಾಟಕ ಹೈಕೋರ್ಟ್ , ಮುರುಘಾಮಠದ ಮುರುಘಾಶ್ರೀ ಜಾಮೀನು ಅರ್ಜಿ ಬಗ್ಗೆ ಆದೇಶ ಪ್ರಕಟಸಲಿದೆ. ಹೀಗಾಗಿ ಶ್ರೀಗಳಿಗೆ ಜೈಲಾ? ಬೇಲಾ ಎನ್ನುವ ಕುತೂಹಲ ಮೂಡಿಸಿದೆ.

Murugha Mutt Case: ಜೈಲಾ? ಬೇಲಾ?: ಇಂದು ಹೈಕೋರ್ಟ್‍ನಲ್ಲಿ ಮುರುಘಾ ಶ್ರೀ ಭವಿಷ್ಯ ನಿರ್ಧಾರ
ಡಾ. ಶಿವಮೂರ್ತಿ ಶರಣ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 08, 2023 | 7:28 AM

ಬೆಂಗಳೂರು, (ನವೆಂಬರ್ 08): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಪ್ರಕರಣದಲ್ಲಿ(pocso case) ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ(shivamurthy murugha sharan) ಜಾಮೀನು ಸಿಗುತ್ತಾ? ಅಥವಾ ಜೈಲೇ ಗತಿಯಾಗಿತ್ತಾ ಎನ್ನುವುದು ಇಂದು ನಿರ್ಧಾರವಾಗಲಿದೆ. ಕರ್ನಾಟಕ ಹೈಕೋರ್ಟ್ ನಲ್ಲಿಂದು ಮುರುಘಾಮಠದ ಮುರುಘಾಶ್ರೀ ಜಾಮೀನು ಅರ್ಜಿ ಬಗ್ಗೆ ಆದೇಶ ಪ್ರಕಟಸಲಿದೆ. ಹೀಗಾಗಿ ಶ್ರೀಗಳಿಗೆ ಜೈಲಾ? ಬೇಲಾ ಎಂದು ಭಕ್ತರ ಚಿತ್ತ ಹೈಕೋರ್ಟ್​ನತ್ತೆ ನೆಟ್ಟಿದೆ.

2022ರ ಸೆಪ್ಟೆಂಬರ್ 1ರಿಂದ ಜೈಲಿನಲ್ಲಿರುವ ಮುರುಘಾಶ್ರೀ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಮುರುಘಾಶ್ರೀ ಪರ ವಕೀಲರು ಹೈಕೋರ್ಟ್​ ಮೆಟ್ಟಲೇರಿದ್ದು, ಇಂದು ಶ್ರೀಗಳ ಭವಿಷ್ಯ ನಿರ್ಧಾರವಾಗಲಿದೆ.

ಏನಿದು ಪ್ರಕರಣ

ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಕದ ತಟ್ಟಿದ್ದರು.ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಅದಾದ ನಂತರ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದ್ದು, ಬಳಿಕ ಫೋಕ್ಸೋ ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ