AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶಿಗೆ ತೆರಳುವ ರಾಜ್ಯದ ಯಾತ್ರಿಕರಿಗೆ 5 ಸಾವಿರ ರೂ. ಸಹಾಯಧನ: ಹೊಸ ನಿಯಮ ಹೇರಿದ ಸರ್ಕಾರ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಕಾಶಿ ಕಾರಿಡಾರ್​ ಅನ್ನು ಉತ್ತೇಜಿಸುವ ನಿಟ್ಟಿನಲ್ಲಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ "ಕಾಶಿ ಯಾತ್ರೆ" ಯೋಜನೆ ಅಡಿಯಲ್ಲಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ನೀಡಲು ಆರಂಭಿಸಿತ್ತು. ಈ ಹಣವನ್ನು ಪಡೆಯಲು ಷರತ್ತುಗಳು ಅನ್ವಯವಾಗುತ್ತವೆ.

ಕಾಶಿಗೆ ತೆರಳುವ ರಾಜ್ಯದ ಯಾತ್ರಿಕರಿಗೆ 5 ಸಾವಿರ ರೂ. ಸಹಾಯಧನ: ಹೊಸ ನಿಯಮ ಹೇರಿದ ಸರ್ಕಾರ
ಕಾಶಿ
ವಿವೇಕ ಬಿರಾದಾರ
|

Updated on: Nov 08, 2023 | 7:38 AM

Share

ಬೆಂಗಳೂರು ನ.07: ಕಾಶಿ ಯಾತ್ರೆ (Kashi Yatra) ಕೈಗೊಂಡು 5 ಸಾವಿರ ರೂ. ಸಹಾಯಧನ ಪಡೆಯಲು ಇಚ್ಚಿಸುವ ಕರ್ನಾಟಕದ ಯಾತ್ರಾರ್ಥಿಗಳಿಗೆ (Pilgrims) ರಾಜ್ಯ ಸರ್ಕಾರ (Karnataka Government) ಹೊಸ ನಿಯಮವನ್ನು ಪರಿಚರಿಸಿದೆ. ಹೌದು ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಕಾಶಿ ವಿಶ್ವನಾಥ ದೇವಸ್ಥಾನದ 5 ಕಿಮೀ ವ್ಯಾಪ್ತಿಯೊಳಗೆ ಜಿಯೋಟ್ಯಾಗ್ ಸೆಲ್ಫಿ ತೆಗೆದುಕೊಂಡು, ಅದನ್ನು ಸರ್ಕಾರದ ಅಪ್ಲಿಕೇಶನ್ ಅಥವಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಕಾಶಿ ಕಾರಿಡಾರ್​ ಅನ್ನು ಉತ್ತೇಜಿಸುವ ನಿಟ್ಟಿನಲ್ಲಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ “ಕಾಶಿ ಯಾತ್ರೆ” ಯೋಜನೆ ಅಡಿಯಲ್ಲಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ನೀಡಲು ಆರಂಭಿಸಿತ್ತು. ಈ ಹಣವನ್ನು ಪಡೆಯಲು ಷರತ್ತುಗಳು ಅನ್ವಯವಾಗುತ್ತವೆ.

ಯಾತ್ರಾರ್ಥಿಗಳು ಸಹಾಯಧನ ಪಡೆಯಲು ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್‌, ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೇಟ್ (ರಿಟರ್ನ್‌ ಟಿಕೆಟ್‌), ಛಾಯಾಚಿತ್ರ, ಪೂಜಾ ರಶೀದಿ, ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ ಮತ್ತು ವೋಟರ್​ ಐಡಿ ಅಥವಾ ಆಧಾರ್ ಕಾರ್ಡ್​ ಅಥವಾ ರೇಷನ್​ ಕಾರ್ಡ್​ಅನ್ನು ಮುಜರಾಯಿ ಇಲಾಖೆಯ ಅಪ್ಲಿಕೇಶನ್ ಅಥವಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮತ್ತು ಅರ್ಜಿ ಸಲ್ಲಿಸುವವರು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ (ಏಪ್ರಿಲ್‌ 1 ಕ್ಕೆ) 18 ವರ್ಷ ಪೂರ್ಣಗೊಂಡಿರಬೇಕು.

ಇದನ್ನೂ ಓದಿ: Kashi Yatra: ಕಾಶಿ ಯಾತ್ರೆಗೆ ಹೋಗಲು ನೋಂದಾಯಿಸಿಕೊಳ್ಳುವುದು ಹೇಗೆ? ಸಬ್ಸಿಡಿಗಾಗಿ ನೀಡಬೇಕಾದ ದಾಖಲೆಗಳೇನು? ಇಲ್ಲಿದೆ ಮಾಹಿತಿ

ಈ ಹಿಂದೆ, ಯಾತ್ರಿಕರು ವಾರಣಾಸಿಯಲ್ಲಿರುವ ಕರ್ನಾಟಕ ರಾಜ್ಯ ಅತಿಥಿ ಗೃಹದ ವ್ಯವಸ್ಥಾಪಕರು ದೃಢೀಕರಿಸಿದ ಬಯೋಮೆಟ್ರಿಕ್ ಮೂಲಕ ದೃಢೀಕರಿಸಿದ ಪ್ರಮಾಣಪತ್ರ ಅಥವಾ ದೇವಾಲಯದ ದರ್ಶನ ಟಿಕೆಟ್ ಅನ್ನು ಒದಗಿಸುವ ಮೂಲಕ 5,000 ರೂ.ಗಳ ಒಂದು ಬಾರಿ ಸಬ್ಸಿಡಿಯನ್ನು ಪಡೆದುಕೊಳ್ಳುತ್ತಿದ್ದರು.

ಸೆಲ್ಫಿ ಪ್ರಕ್ರಿಯೆಯು ದೀರ್ಘ ಸರತಿ ಸಾಲಿನಲ್ಲಿ ನಿಂತು ದೃಢೀಕರಿಸಿದ ಪ್ರಮಾಣಪತ್ರಗಳನ್ನು ಪಡೆಯುವ ಹರಸಾಹಸದ ಕೆಲಸವನ್ನು ತಪ್ಪಿಸುತ್ತದೆ. ಜೊತೆಗೆ ಸುಳ್ಳು ದಾಖಲೆಗಳಿಗೆ ಕಡಿವಾಣ ಬೀಳುತ್ತದೆ. ಕರ್ನಾಟಕ ಸರ್ಕಾರವು ಒಂದು ಆರ್ಥಿಕ ವರ್ಷದಲ್ಲಿ 30,000 ಭಕ್ತರಿಗೆ ರೂ 5,000 ಸಬ್ಸಿಡಿ ನೀಡುತ್ತದೆ. ಇಲ್ಲಿಯವರೆಗೆ, ಸರಾಸರಿ ಶೇ 60 ರಷ್ಟು ಯಾತ್ರಾರ್ಥಿಗಳು ಇದರ ಲಾಭ ಪಡೆದಿದ್ದಾರೆ.

ಕೈಲಾಸ ಮಾನಸ ಸರೋವರಕ್ಕೆ ಮೊದಲ ಬಾರಿಗೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ 30,000 ರೂಪಾಯಿಗಳನ್ನು ಮತ್ತು ಮೊದಲ ಬಾರಿಗೆ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಭಕ್ತರಿಗೆ 20,000 ರೂಪಾಯಿಗಳನ್ನು ಸರ್ಕಾರ ನೀಡುತ್ತದೆ. ಕಳೆದ ವರ್ಷ ಇಲ್ಲಿಯವರೆಗೆ ಕೇವಲ ಇಬ್ಬರು ಕೈಲಾಸ ಮಾನಸ ಸರೋವರ ಸಬ್ಸಿಡಿಯನ್ನು ಪಡೆದುಕೊಂಡಿದ್ದಾರೆ ಮತ್ತು 1,863 ಭಕ್ತರು ಚಾರ್​ಧಾಮ್ ಸಬ್ಸಿಡಿ ಸೌಲಭ್ಯ ಪಡೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ