Kashi Yatra: ಕಾಶಿ ಯಾತ್ರೆಗೆ ಹೋಗಲು ನೋಂದಾಯಿಸಿಕೊಳ್ಳುವುದು ಹೇಗೆ? ಸಬ್ಸಿಡಿಗಾಗಿ ನೀಡಬೇಕಾದ ದಾಖಲೆಗಳೇನು? ಇಲ್ಲಿದೆ ಮಾಹಿತಿ

ಈ ಕಾಶಿ ಯಾತ್ರಾ ಯೋಜನೆಗಾಗಿ ಆನ್‌ಲೈನ್ ಫಾರ್ಮ್​​ನ್ನು ಭರ್ತಿ ಮಾಡಲು ಬಯಸುವ ಅರ್ಜಿದಾರರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್​​ಗಳಾದ itms.kar.nic.in ಮತ್ತು sevasindhuservices.karnataka.gov.in ಭೇಟಿ ನೀಡಿ.

Kashi Yatra: ಕಾಶಿ ಯಾತ್ರೆಗೆ ಹೋಗಲು ನೋಂದಾಯಿಸಿಕೊಳ್ಳುವುದು ಹೇಗೆ? ಸಬ್ಸಿಡಿಗಾಗಿ ನೀಡಬೇಕಾದ ದಾಖಲೆಗಳೇನು? ಇಲ್ಲಿದೆ ಮಾಹಿತಿ
ಕಾಶಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 15, 2022 | 4:33 PM

ಬೆಂಗಳೂರು: ಕರ್ನಾಟಕದಿಂದ ಕಾಶಿಗೆ ಭಾರತ್‌ ಗೌರವ್‌ (Bharat Gaurav Train) ರೈಲು ಯೋಜನೆ ಪ್ರಾರಂಭವಾಗಲಿದೆ ಎಂದು ಈ ಹಿಂದೆ ಮಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ತಿಳಿಸಿದ್ದರು. ಸದ್ಯ ಈಗ ಕಾಶಿ ಯಾತ್ರೆ (Kashi Yatra) ತೆರಳುವ ಯಾತ್ರಾರ್ಥಿಗಳಿಗೆ 5,000 ರೂ. ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರಿಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುವುದು. 5 ಸಾವಿರ ರೂ. ನೇರ ನಗದು ವರ್ಗಾವಣೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ (ಜುಲೈ 14) ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಯು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೀರ್ಥಯಾತ್ರೆ ಕೈಗೊಳ್ಳಲು ಸುಮಾರು 30,000 ಯಾತ್ರಾರ್ಥಿಗಳಿಗೆ ತಲಾ ₹ 5,000 ನಗದು ಸಹಾಯವನ್ನು ನೀಡಲಾಗುವುದು ಎಂದು ಕರ್ನಾಟಕದ ಧಾರ್ಮಿಕ ದತ್ತಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಈ ಯೋಜನೆಗೆ ₹ 7 ಕೋಟಿವರೆಗೆ ಮೀಸಲಿಟ್ಟಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾಶಿ ಯಾತ್ರೆಗೆ ಹೇಗೆ, ಯಾರೆಲ್ಲ ಹೋಗಬಹುದು ಮತ್ತು ಹೇಗೆ ನೋಂದಣಿ ಮಾಡಬೇಕು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ನೋಂದಣಿ ಹೇಗೆ?

ಈ ಕಾಶಿ ಯಾತ್ರಾ ಯೋಜನೆಗಾಗಿ ಆನ್‌ಲೈನ್ ಫಾರ್ಮ್​​ನ್ನು ಭರ್ತಿ ಮಾಡಲು ಬಯಸುವ ಅರ್ಜಿದಾರರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್​​ಗಳಾದ itms.kar.nic.in ಮತ್ತು sevasindhuservices.karnataka.gov.in ಮೂಲಕ ಯಾತ್ರಿಗಳು ಸಬ್ಸಿಡಿಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಕಾಶಿ ಯಾತ್ರಾ ಯೋಜನೆ ಅರ್ಹತಾ ಮಾಹಿತಿ:

ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ಅರ್ಜಿದಾರರು ಈ ಅರ್ಹತಾ ಮಾನದಂಡವನ್ನು ಅನುಸರಿಸಬೇಕಾಗುತ್ತದೆ.

  • ಕರ್ನಾಟಕದ ನಿವಾಸಿಗಳು ಮಾತ್ರ ಈ ಪ್ರಯೋಜಗೆ ಅರ್ಹರು.
  • ಮತದಾರರ ಗುರುತಿನ ಚೀಟಿ, ಆಧಾರ್ ಅಥವಾ ಪಡಿತರ ಚೀಟಿ ಹೊಂದಿರಬೇಕು
  • ಅಭ್ಯರ್ಥಿಗಳು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
  • ಈ ಹಿಂದೆ ಸಬ್ಸಿಡಿ ಸ್ವೀಕರಿಸುವವರು ಈ ಭಾರಿ ಅರ್ಹರಲ್ಲ.

ಅಗತ್ಯವಿರುವ ದಾಖಲೆಗಳು:

  • ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಕರ್ನಾಟಕ ಮೂಲದ ನಿವಾಸದ ಪುರಾವೆ
  • ಆಧಾರ್ ಕಾರ್ಡ್, ವೋಟರ್ ಐಡಿ, ಇತ್ಯಾದಿ.
  • ಪಾಸ್ಪೋರ್ಟ್ ಗಾತ್ರದ ಫೋಟೋ.
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ವಿವರಗಳು
  • ಕೋವಿಡ್ ಲಸಿಕೆ ಪ್ರಮಾಣಪತ್ರ ಮತ್ತು ಇತ್ತೀಚಿನ ಕೋವಿಡ್ ಋಣಾತ್ಮಕ ವರದಿ ಹೊಂದಿರಬೇಕು.

ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಮೂಲಭೂತ ಸೌಕರ್ಯಗಳಿಗೆ ರೈಲ್ವೇಯ ಅಧೀನ ಸಂಸ್ಥೆಯ ಜೊತೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ