Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ರಾಜ್ಯದಲ್ಲಿ ಇನ್ನೂ 48 ಗಂಟೆ ಕಾಲ ಭಾರೀ ಗಾಳಿ ಸಹಿತ ಮಳೆ ; ಹವಾಮಾನ ಇಲಾಖೆ ಮೂನ್ಸೂಚನೆ

ಅರಬ್ಬಿ ಸಮುದ್ರದಲ್ಲಿ‌ ಮೇಲ್ಮೈ ಸುಳಿಗಾಳಿ ಹಿನ್ನೆಲೆ  ರಾಜ್ಯದಲ್ಲಿ ಇನ್ನೂ 48 ಗಂಟೆ ಕಾಲ ಭಾರಿ ಗಾಳಿ ಸಹಿತ ಮಳೆಯಾಗುವ ಸಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

Karnataka Rain: ರಾಜ್ಯದಲ್ಲಿ ಇನ್ನೂ 48 ಗಂಟೆ ಕಾಲ ಭಾರೀ ಗಾಳಿ ಸಹಿತ ಮಳೆ ; ಹವಾಮಾನ ಇಲಾಖೆ ಮೂನ್ಸೂಚನೆ
ಕರ್ನಾಟಕದಲ್ಲಿ ಭಾರೀ ಮಳೆImage Credit source: Twitter
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 15, 2022 | 4:37 PM

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ‌ (Arabian Sea) ಮೇಲ್ಮೈ ಸುಳಿಗಾಳಿ ಹಿನ್ನೆಲೆ  ರಾಜ್ಯದಲ್ಲಿ ಇನ್ನೂ 48 ಗಂಟೆ ಕಾಲ ಭಾರಿ ಗಾಳಿ ಸಹಿತ ಮಳೆಯಾಗುವ (Rain) ಸಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department), ಮೂನ್ಸೂಚನೆ ನೀಡಿದೆ. ಕರಾವಳಿ (Coastal)  ಭಾಗದ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ. ಸದ್ಯ ಕರಾವಳಿಯಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 45-55 ಕಿ.ಮೀ ವರೆಗೂ ತಲುಪುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಇನ್ನು ಎರಡು ದಿನ ಮಳೆ ಇರಲಿದ್ದು ಆರೆಂಜ್ ಅಲರ್ಟ್ ಘೋಷಿಸಿದ್ದು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗೇ ಉತ್ತರ ಒಳನಾಡಿಗು ಕೂಡ ಯಲ್ಲೋ ಅಲರ್ಟ್‌ ಘೋಷಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರುತ್ತದ್ದು, ಕೆಲವೊಮ್ಮೆ ಭಾರಿ  ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರು, ನಿಲ್ಲದ ಮಳೆ ಅವಾಂತರ

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತರು, ಮಳೆಯ ಅವಾಂತರ ಮಾತ್ರ ನಿಲ್ಲುತ್ತಿಲ್ಲ. ನಿರಂತರ ಮಳೆಗೆ ಒಂದಾದ ಮೇಲೊಂದರಂತೆ ಮನೆಗಳು ಕುಸಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೂವಿನಮನೆ ಗ್ರಾಮದಲ್ಲಿ ಮನೆಗಳ ಗೋಡೆ ಕುಸಿತಗೊಂಡಿವೆ.

ಮನೆಯ ಗೋಡೆ ಪಕ್ಕದಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಮಂಜುನಾಥ ಮತ್ತು ಗೋವಿಂದ ಎಂಬುವವರಿಗೆ ಸೇರಿದ ಎರಡು ಮನೆಗಳು ಕುಸಿದಿದ್ದು, ಅಂದಾಜು ಐದು ಲಕ್ಷ ರೂಪಾಯಿ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಗರಗ ಗ್ರಾಮದಲ್ಲಿ ನಿರಂತರ ಮಳೆಗೆ ಕುಸಿದುಬಿದ್ದ ಮನೆ

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಿರಂತರ ಮಳೆಗೆ ಮನೆ  ಕುಸಿದುಬಿದ್ದಿದೆ. ಮಡಿವಾಳಪ್ಪ ಗೋವನಕೊಪ್ಪ ಎಂಬುವರ ಮನೆ ಕುಸಿತಗೊಂಡಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 4:36 pm, Fri, 15 July 22

ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್