ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು?

| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2025 | 6:07 PM

ಚಿತ್ರದುರ್ಗದ ಮುರುಘಾ ಮಠದ ಬಸವ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ 35 ಕೋಟಿ ರೂ ಅನುದಾನ ನೀಡಿದೆ. ಆದರೆ, ಹಣದ ದುರುಪಯೋಗ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತದ ತನಿಖಾ ವರದಿಯ ಪ್ರಕಾರ, 26 ಕೋಟಿಗೂ ಹೆಚ್ಚು ರೂ. ಖರ್ಚಾಗಿದೆ, ಆದರೆ ಉಳಿದ ಹಣದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು?
ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು?
Follow us on

ಚಿತ್ರದುರ್ಗ, ಫೆಬ್ರವರಿ 26: ಜಿಲ್ಲೆಯ ಶ್ರೀ ಮುರುಘಾ ಮಠದ (Murugha Matha) ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿಗೆ ರಾಜ್ಯ ಸರ್ಕಾರ ನೀಡಿದ 35 ಕೋಟಿ ರೂ. ಅನುದಾನ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಸಂಕಷ್ಟ ಸಾಧ್ಯತೆ ಎನ್ನಲಾಗುತ್ತಿದೆ.

ಹಣ ದುರುಪಯೋಗ ಬಗ್ಗೆ ಮಾಜಿ ಸಚಿವ ಏಕಾಂತಯ್ಯ ದೂರು ಹಿನ್ನೆಲೆ ಎಡಿಸಿ ಕುಮಾರಸ್ವಾಮಿ, PWD ಅಧಿಕಾರಿಗಳನ್ನೊಳಗೊಂಡಿದ್ದ ತನಿಖಾ ಸಮಿತಿ ವರದಿ ಸಿದ್ಧಪಡಿಸಿದೆ. ಸರ್ಕಾರದ ಅನುದಾನ ಅನುಷ್ಠಾನ ಬಗ್ಗೆ ಸ್ಪಷ್ಟತೆ ಇಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗೆ ಇಂದು ವರದಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು

ಇದನ್ನೂ ಓದಿ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಚಿತ್ರದುರ್ಗ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಮಾನತಿನಲ್ಲಿಡುವಂತೆ ಒತ್ತಾಯ
ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರು ಬೇಕು: ಸರ್ಕಾರಕ್ಕೆ ಮನವಿ ಸಲ್ಲಿಸಲು ಭಕ್ತರ ಸಭೆ ನಿರ್ಧಾರ
Chitradurga News: ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; 5ನೇ ಆರೋಪಿ ಗಂಗಾಧರಯ್ಯ ಪೊಲೀಸರಿಗೆ ಶರಣು

ಮುರುಘಾಮಠದ ಹಿಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಿಸಲು ಅಂದಾಜು ರೂ.2802 ಕೋಟಿ ರೂ. ವೆಚ್ಚದ ಅಂದಾಜು ವೆಚ್ಚ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದಿಂದ ರೂ.35.00 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಈವರೆಗೆ 26 ಕೋಟಿ 35 ಲಕ್ಷ 33 ಸಾವಿರ 503 ರೂ. ಬಳಕೆ ಆಗಿದೆ. ಉಳಿದ ಹಣ ಖರ್ಚಿನ ಬಗ್ಗೆ ಮಠದವರಿಗೆ ಅಧಿಕೃತ ದಾಖಲೆ ಕೇಳಿದ್ದೇವೆ. ಆದರೆ ಈವರೆಗೆ ಮಠದವರು ಅಧಿಕೃತ ದಾಖಲೆ ನೀಡಿಲ್ಲ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ತನಿಖೆ ನಡೆಸಿ ತೀರ್ಮಾನ ಕೈಗೊಳ್ಳಬಹುದೆಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಶಿವಮೂರ್ತಿ ಶರಣರ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ: ಚಿತ್ರದುರ್ಗದಲ್ಲಿ ಮಠದ ಭಕ್ತರ ಸಭೆ, ಚೆಕ್ ಸಹಿಗೆ ಅವಕಾಶ ನಿರಾಕರಿಸಿದ ಹೈಕೋರ್ಟ್

ಇನ್ನು ಶ್ರೀ ಜಗಜ್ಯೋತಿ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಾಣ ಕಾರ್ಯ ಕಳೆದ 10 ವರ್ಷಗಳಿಂದ ಯೋಜನೆ ಮಂದಗತಿಯಲ್ಲಿ ಸಾಗುತ್ತಿದ್ದು, ಸರ್ಕಾರದಿಂದ ಈಗಾಗಲೇ ಬಿಡುಗಡೆಯಾಗಿ ಖರ್ಚಾಗಿರುವ ಹಣವು ಸಮರ್ಪಕವಾಗಿ ವಿನಿಯೋಗಿಸದೇ ಇರುವುದರಿಂದ ಬಸವ ಪುತ್ಥಳಿಯ ಕಾಮಗಾರಿ ಫಲಪ್ರದಾವಾಗದಿರುವುದು ಕಂಡುಬಂದಿರುತ್ತದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.