ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚಿಗೆ ಮಾತನಾಡದೆ, ಇದು ಮೌನವಾಗಿರುವ ಕಾಲ ಎಂದು ಹೇಳಿದ್ದಾರೆ.
ಚಿತ್ರದುರ್ಗ, ಅಕ್ಟೋಬರ್ 07: ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚಿತ್ರದುರ್ಗದ ಮುರುಘಾಶ್ರೀ (Chitradurga Murugha Shri) ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವೇಶ, ಮುರುಘೇಶನ ಆರ್ಶಿವಾದದಿಂದ ನಾನು ಬಂಧನದಿಂದ ಬಿಡುಗಡೆ ಆಗಿದ್ದೇನೆ. ಹೆಚ್ಚಿಗೆ ಹೇಳುವುದಕ್ಕೆ ಇದು ಸಕಾಲವಲ್ಲ, ಇದು ಮೌನವಾಗಿರುವ ಕಾಲ. ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ, ಸ್ವಾಮೀಜಿಗಳಿಗೆ ಸಹನೆ ಮುಖ್ಯ. ನಾನು ಜೈಲು ಸೇರಿದ ಬಳಿಕ ನಾಲ್ಕು ನೂರು ಪುಸ್ತಕ ಓದಿರುವೆ. 5 ಪುಸ್ತಕ ಬರೆದಿರುವೆ, ಐದು ಪುಸ್ತಕ ಒಮ್ಮೆಯೇ ಬಿಡುಗಡೆ ಮಾಡುವೆ ಎಂದು ಹೇಳಿದ್ದಾರೆ. ಬಳಿಕ ಕಾರಿನಲ್ಲಿ ದಾವಣಗೆರೆಯತ್ತ ತೆರಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.