45 ಲಕ್ಷ ರೂ. ನೋಟುಗಳಿಂದ ದುರ್ಗಾ ದೇವಿಗೆ ಅಲಂಕಾರ! ಬೆರಗಾದ ಭಕ್ತರು

45 ಲಕ್ಷ ರೂ. ನೋಟುಗಳಿಂದ ದುರ್ಗಾ ದೇವಿಗೆ ಅಲಂಕಾರ! ಬೆರಗಾದ ಭಕ್ತರು

ಸುಷ್ಮಾ ಚಕ್ರೆ
|

Updated on: Oct 07, 2024 | 9:30 PM

ನವರಾತ್ರಿಯನ್ನು ಹಲವು ಕಡೆ ಬಹಳ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಈ 9 ದಿನಗಳ ಕಾಲವೂ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಆದರೆ, ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ದಸರಾ ಪ್ರಯುಕ್ತ ದುರ್ಗಾ ಮಾತೆಗೆ 45 ಲಕ್ಷ ರೂ. ಬೆಲೆಯ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಈ ವಿಶೇಷ ಅಲಂಕಾರವನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ.

ನಲಗೊಂಡ: ನವರಾತ್ರಿ ಉತ್ಸವದ ಅಂಗವಾಗಿ 4ನೇ ದಿನವಾದ ಇಂದು ತೆಲಂಗಾಣದ ನಲಗೊಂಡದಲ್ಲಿ ದೇವಿಯ ಮಂಟಪವನ್ನು 45 ಲಕ್ಷ ರೂಪಾಯಿ ನೋಟುಗಳಿಂದ ಅಲಂಕರಿಸಲಾಗಿತ್ತು. ಶ್ರೀ ಲಲಿತಾ ತ್ರಿಪುರ ಸುಂದರಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡ ದೇವಿಗೆ ಜನರು ಭಕ್ತಿಭಾವ ಮೆರೆದರು. 100, 200, 500 ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ಮಾಲೆಗಳಲ್ಲಿ ಕಟ್ಟಿ ದೇವಿಯ ಕೊರಳಿಗೆ ಹಾರ ಹಾಕಲಾಯಿತು. ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್‌ನಲ್ಲಿ ಆರ್ಯ ವೈಶ್ಯ ಸಮುದಾಯದವರು ಈ ರೀತಿ ಈ ಬಾರಿ ದೇವಿಯ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ