ದುರ್ಗದ ಜಿಲ್ಲಾಸ್ಪತ್ರೆಯಲ್ಲಿ ರಕ್ತ ಸಂಗ್ರಹವೂ ಇಲ್ಲ, ರಕ್ತ ಪೂರೈಕೆಯೂ ಇಲ್ಲ: ಬಡ ರೋಗಿಗಳಿಂದ ಹಿಡಿಶಾಪ

chitradurga district hospital blood bank: ಚಿತ್ರದುರ್ಗ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ ಎಂಬಂತಾಗಿದೆ. ಅಲ್ಲಿ ರಕ್ತ ನಿಧಿ ಕೇಂದ್ರ ಇದೆಯಾದ್ರೂ ರಕ್ತ ಲಭ್ಯವಿಲ್ಲ. ಅಧಿಕಾರಿಗಳ ಬೇಜವಬ್ದಾರಿನತದಿಂದ ರಕ್ತನಿಧಿ ಕೇಂದ್ರವೇ ಸ್ಥಗಿತವಾಗಿದೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.

ದುರ್ಗದ ಜಿಲ್ಲಾಸ್ಪತ್ರೆಯಲ್ಲಿ ರಕ್ತ ಸಂಗ್ರಹವೂ ಇಲ್ಲ, ರಕ್ತ ಪೂರೈಕೆಯೂ ಇಲ್ಲ: ಬಡ ರೋಗಿಗಳಿಂದ ಹಿಡಿಶಾಪ
ದುರ್ಗದ ಜಿಲ್ಲಾಸ್ಪತ್ರೆಯಲ್ಲಿ ರಕ್ತ ಸಂಗ್ರಹವೂ ಇಲ್ಲ, ರಕ್ತ ಪೂರೈಕೆಯೂ ಇಲ್ಲ
Edited By:

Updated on: May 15, 2024 | 10:20 AM

ಅದು ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ ಎಂಬಂತಾಗಿದೆ. ಅಲ್ಲಿ ರಕ್ತ ನಿಧಿ ಕೇಂದ್ರ (blood bank) ಇದೆಯಾದ್ರೂ ರಕ್ತ ಮಾತ್ರ ಲಭ್ಯವಿಲ್ಲ. ಅಧಿಕಾರಿಗಳ ಬೇಜವಬ್ದಾರಿನತದಿಂದ ರಕ್ತನಿಧಿ ಕೇಂದ್ರವೇ ಸ್ಥಗಿತವಾಗಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ. ಸೂಕ್ತ ನಿರ್ವಹಣೆ, ಯಂತ್ರೋಪಕರಣಗಳ ಕೊರತೆ ಹಿನ್ನೆಲೆಯಿಂದಾಗಿ ಕಳೆದ 10 ದಿನಗಳಿಂದ ರಕ್ತ ನಿಧಿ ಕೇಂದ್ರ ಸ್ಥಗಿತಗೊಂಡಿದೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಈ ದೃಶ್ಯಗಳು ಕಂಡು ಬರುವುದು ಚಿತ್ರದುರ್ಗ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ (chitradurga district hospital) ಆವರಣದಲ್ಲಿನ ರಕ್ತನಿಧಿ ಕೇಂದ್ರದಲ್ಲಿ. ಹೌದು, ಇದು ಸುಮಾರು 500 ಯುನಿಟ್ ಸಾಮರ್ಥ್ಯವಿರುವ ರಕ್ತ ಸಂಗ್ರಹ ಕೇಂದ್ರವಾಗಿದೆ.

ಪ್ರತಿ ತಿಂಗಳು ಸುಮಾರು 400 ಯುನಿಟ್ ರಕ್ತ ನೀಡಲಾಗುತ್ತದೆ. ಆದ್ರೆ, ಸೂಕ್ತ ನಿರ್ವಹಣೆ ಮತ್ತು ಯಂತ್ರೋಪಕರಣಗಳ ಕೊರತೆ ಪರಿಣಾಮ 10 ದಿನಗಳಿಂದ ರಕ್ತ ನಿಧಿ ಕೇಂದ್ರ ಸ್ಥಗಿತಗೊಂಡಿದೆ. ಹೀಗಾಗಿ, ರಕ್ತ ಸಂಗ್ರಹವೂ ಇಲ್ಲ, ರಕ್ತ ಪೂರೈಕೆಯೂ (No blood collection, no blood supply) ಇಲ್ಲವಾಗಿದೆ. ರಕ್ತದ ಅಗತ್ಯ ಬಿದ್ದಾಗ ಖಾಸಗಿ ಆಸ್ಪತ್ರೆಯ ರಕ್ತನಿಧಿಗಳ ಮೊರೆ ಹೋಗುವ ಅನಿವಾರ್ಯತೆ ಸೃಷ್ಠಿ ಆಗಿದೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಮಾತ್ರ ಸ್ಪಷ್ಟ ಮಾಹಿತಿ ನೀಡದೆ ಬೇಜವಾಬ್ದಾರಿತನ ತೋರುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read: ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!

ಇನ್ನು ರಕ್ತ ನಿಧಿ ಕೇಂದ್ರದಲ್ಲಿ ಅಗತ್ಯ ಸೌಲಭ್ಯ, ನಿರ್ವಹಣೆ, ಯಂತ್ರೋಪಕರಣ ಕೊರತೆಯ ನ್ಯೂನತೆಗಳು ಕಂಡು ಬಂದಿವೆ. ಹೀಗಾಗಿ, ಔಷಧ ನಿಯಂತ್ರಣ ಇಲಾಖೆ ರಕ್ತನಿಧಿ ಕೇಂದ್ರದ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಸ್ ಪಿ ರವೀಂದ್ರ ಅವ್ರನ್ನು ಕೇಳಿದ್ರೆ ಅಗತ್ಯ ಯಂತ್ರೋಪಕರಣಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಇಲಾಖೆ ರಕ್ತನಿಧಿ ಕೇಂದ್ರದ ಕಾರ್ಯ ಚಟುವಟಿಕೆ ಸ್ಥಗಿತಕ್ಕೆ ಸೂಚಿಸಿತ್ತು. ಸದ್ಯ ನ್ಯೂನತೆ ಸರಿಪಡಿಸಲಾಗಿದ್ದು ಮೇ 21ಕ್ಕೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು ಯಥಾಸ್ಥಿತಿಗೆ ಮರಳುವ ಭರವಸೆಯಿದೆ ಎಂದಿದ್ದಾರೆ.

Also Read: PF Bonus Scheme- 20 ವರ್ಷಕ್ಕಿಂತ ಹೆಚ್ಚು ಕಾಲ ಭವಿಷ್ಯ ನಿಧಿ ಕಟ್ಟಿದ್ದರೆ ನೀವು ಬೋನಸ್ ಹಣ​ ಪಡೆಯಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿರುವ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಸದ್ಯ ಸ್ಥಗಿತಗೊಂಡಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ, ಇನ್ನಾದ್ರೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಜಿಲ್ಲಾಸ್ಪತ್ರೆಗೆ ಸೂಕ್ತ ಸರ್ಜರಿ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ