AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತ, ಇಸ್ಲಾಂ ಈ ವಿಷಯಗಳಲ್ಲಿ ಒಂದೇ ಎಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!

ಹಿಂದೂ ಧರ್ಮ, ಗಣಪತಿ ಪೂಜೆ ವಿರುದ್ಧ ಈ ಹಿಂದೆ ಕೆಲವು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದೀಗ ಮತ್ತೊಂದು ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಲಿಂಗಾಯತ ಧರ್ಮ ಮತ್ತು ಇಸ್ಲಾಂನಲ್ಲಿ ಒಂದೇ ರೀತಿಯ ಅಂಶಗಳಿವೆ ಎಂದು ಅವರು ಹೇಳಿದ್ದಾರೆ. ಸ್ವಾಮೀಜಿ ಹೇಳಿಕೆಯ ವಿವರ ಇಲ್ಲಿದೆ.

ಲಿಂಗಾಯತ, ಇಸ್ಲಾಂ ಈ ವಿಷಯಗಳಲ್ಲಿ ಒಂದೇ ಎಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ!
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಗಣಪತಿ ಶರ್ಮಾ
|

Updated on: Sep 05, 2024 | 7:49 AM

Share

ಚಿತ್ರದುರ್ಗ, ಸೆಪ್ಟೆಂಬರ್ 5: ಲಿಂಗಾಯತ ಮತ್ತು ಇಸ್ಲಾಂಗಳಲ್ಲಿ ಕೆಲವು ಒಂದೇ ರೀತಿಯ ಅಂಶಗಳಿವೆ. ಉಭಯ ಧರ್ಮಗಳಲ್ಲಿ ಸಾಮ್ಯತೆಗಳಿವೆ ಎಂದು ತರಳಬಾಳು ಶಾಖಾ ಮಠದ ಪೀಠಾಧಿಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತ ಹಾಗೂ ಇಸ್ಲಾಂ ಕುರಿತ ಸ್ವಾಮೀಜಿ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರಿಂದ ವಿರೋಧವೂ ವ್ಯಕ್ತವಾಗಿದೆ.

ಚಿತ್ರದುರ್ಗದ ತಾರಾಸು ರಂಗಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್‌ ವತಿಯಿಂದ ಆಯೋಜಿಸಲಾಗಿದ್ದ ಕುರಾನ್‌ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆಯಾಗಿದ್ದರೂ ಕೆಲವು ಒಂದೇ ರೀತಿಯ ಅಂಶಗಳನ್ನು ಹೊಂದಿವೆ ಎಂದಿದ್ದಾರೆ.

ಲಿಂಗಾಯತ ಧರ್ಮ ಬಹು ದೇವರುಗಳ ಆರಾಧನೆ ಮತ್ತು ಮೂರ್ತಿ ಪೂಜೆಯನ್ನು ನಿರಾಕರಿಸುತ್ತದೆ. ಆದರೆ ಅದು ಇಷ್ಟಲಿಂಗ ಪೂಜೆಯನ್ನು ಪ್ರತಿಪಾದಿಸುತ್ತದೆ. ಅದೇ ರೀತಿ ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಕೂಡ ಮೂರ್ತಿ ಪೂಜೆ ಬೇಡವೆಂಬ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಿಗ್ರಹಗಳನ್ನು ಪೂಜಿಸಬೇಡಿ, ಅಲ್ಲಾಗೆ ಮಾತ್ರ ನಡೆದುಕೊಳ್ಳಿ ಎಂದು ಮುಸ್ಲಿಮರನ್ನು ಪೈಗಂಬರ್ ಕೇಳಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.

ಒಬ್ಬನೇ ದೇವರ ಹಲವು ಹೆಸರುಗಳ ಸಿದ್ಧಾಂತವನ್ನು ಅನೇಕರು ಪ್ರಚಾರ ಮಾಡಿದ್ದಾರೆ. ದೇವರು ಒಬ್ಬನೇ. ಆದರೆ ಜನರು ಇನ್ನೂ ತಮ್ಮ ನಡುವೆ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ತಮ್ಮ ಸುತ್ತಲೂ ಬೇಲಿಗಳನ್ನು ರಚಿಸುತ್ತಿದ್ದಾರೆ. ಹಾಗಾಗಿ ವಿಚಾರವಾದಿಗಳು ಇಂತಹ ಗೋಡೆ, ತಡೆಗೋಡೆಗಳನ್ನು ಕೆಡವಿ ಪರಸ್ಪರ ಪ್ರೀತಿಸುವ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದಾರೆ. ಹಿಂದೂ ಎಂಬುದು ಧರ್ಮವೇ ಅಲ್ಲ, ಅದೊಂದು ಆನೈತಿಕ ಹಾಗೂ ಅನಾಚಾರ ಎಂದು ಹೇಳುವ ಮೂಲಕ ಅವರು ಹಿಂದೊಮ್ಮೆ ಚರ್ಚೆಗೆ ಗ್ರಾಸವಾಗಿದ್ದರು.

ಇದನ್ನೂ ಓದಿ: ದಸರಾ ಉದ್ಘಾಟಕರ ಬಗ್ಗೆ ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದ್ದಿಷ್ಟು?

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಮನೆ ಕಾರ್ಯಕ್ರಮಗಳಲ್ಲಿ ಗಣಪತಿ ಪೂಜೆ ಮಾಡುವುದು ಮೌಢ್ಯದ ಆಚರಣೆ ಎಂದು ಅವರು ಹೇಳಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!