Chitradurga: ಪೆಟ್ರೋಲ್ ಬೆಲೆ ಏರಿದ್ದೇ ಏರಿದ್ದು, ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹೆಚ್ಚಾಗುತ್ತಿದೆ! ರಾತ್ರಿ ಹಾಕಿಸಿದ ಪೆಟ್ರೋಲ್ ಬೆಳಗಾಗುವುದರೊಳಗೆ ಕಳ್ಳರ ಪಾಲು

petrol theft: ಚಿತ್ರದುರ್ಗದಲ್ಲಿ ಬೈಕ್ ಮತ್ತು ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Chitradurga: ಪೆಟ್ರೋಲ್ ಬೆಲೆ ಏರಿದ್ದೇ ಏರಿದ್ದು, ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹೆಚ್ಚಾಗುತ್ತಿದೆ! ರಾತ್ರಿ ಹಾಕಿಸಿದ ಪೆಟ್ರೋಲ್ ಬೆಳಗಾಗುವುದರೊಳಗೆ ಕಳ್ಳರ ಪಾಲು
ಪೆಟ್ರೋಲ್ ಬೆಲೆ ಏರಿದ್ದೇ ಏರಿದ್ದು, ಪೆಟ್ರೋಲ್ ಕಳ್ಳರ ಸಂಖ್ಯೆಯೂ ಹಚ್ಚಾಗುತ್ತಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 30, 2023 | 4:28 PM

ಪೆಟ್ರೋಲ್ ದರ ಹೆಚ್ಚಾದ ಬಳಿಕ ಪೆಟ್ರೋಲ್ ಗೂ ಕಳ್ಳರು ಕನ್ನ ಹಾಕುತ್ತಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಂತೂ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಿದೆ. ಹೀಗಾಗಿ, ರಾತ್ರಿ ಹಾಕಿಸಿದ ಪೆಟ್ರೋಲ್ ಬೆಳಗಾಗೋದರಲ್ಲಿ ಕಳ್ಳರ ಪಾಲಾಗುತ್ತಿದ್ದು (petrol theft) ದುರ್ಗದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದರೂ, ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ (negligence). ಈ ಕುರಿತು ವರದಿ ಇಲ್ಲಿದೆ. ಪೆಟ್ರೋಲ್ ಕಳ್ಳರ ಹಾವಳಿಯಿಂದ ದುರ್ಗದ ಜನ ಕಂಗಾಲಾಗಿದ್ದಾರೆ. ಏಕಾಏಕಿ ಪೆಟ್ರೋಲ್ ಇಲ್ಲದಾಗಿ ಬೈಕ್ ತಳ್ಳುವ ದುಃಸ್ಥಿತಿ ಏರ್ಪಟ್ಟಿದೆ. ಪೆಟ್ರೋಲ್ ಕಳ್ಳರು ಮತ್ತು ಪೊಲೀಸರ ವಿರುದ್ಧ (chitradurga police) ಸಾರ್ವಜನಿಕರು ಹಿಡಿಶಾಪ ಹಾಕುವುದಷ್ಟೇ ಕಾಯಕವಾಗಿದೆ. ಈ ಸನ್ನಿವೇಶಗಳೆಲ್ಲಾ ಕಂಡು ಬಂದಿರುವುದು ಚಿತ್ರದುರ್ಗ ನಗರದ ದವಳಗಿರಿ ಬಡಾವಣೆ ಮತ್ತು ಬಿವಿಕೆಎಸ್ ಲೇಔಟ್ ನಲ್ಲಿ.

ಹೌದು, ಅನೇಕ ದಿನಗಳಿಂದ ಚಿತ್ರದುರ್ಗ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಿದೆ. ಮನೆಯ ಕಾಂಪೌಡ್ ಒಳಗೆ ನಿಲ್ಲಿಸಿದ ಬೈಕ್ ಗಳಲ್ಲಿರುವ ಪೆಟ್ರೋಲ್ ಅನ್ನು ಕಳ್ಳರು ರಾತೋರಾತ್ರಿ ಕದಿಯುತ್ತಿದ್ದಾರೆ. ಹೀಗಾಗಿ, ಜನರು ಬೈಕಲ್ಲಿ ಪೆಟ್ರೋಲ್ ಇದೆ ಎಂದೇ ಭಾವಿಸಿ ಯಾವುದೋ ಊರಿಗೆ ಹೊರಟರೆ ಮಾರ್ಗ ಮಧ್ಯದಲ್ಲೇ ಪೆಟ್ರೋಲ್ ಖಾಲಿಯಾಗಿ ಜನರು ಹೈರಾಣಾಗುವಂತಹ ಸ್ಥಿತಿ ನಿರ್ಮಾಣ ಆಗಿದೆ.

ಈ ಭಾಗದಲ್ಲಿನ ಬಾರ್ ಗಳಲ್ಲಿ ಕುಡಿಯುವ ಕೆಲವರು ಅಮಲಿನಲ್ಲೇ ರಾತ್ರಿ ವೇಳೆ ಓಡಾಡುತ್ತ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದಾರೆ. ಬೈಕ್ ಗಳ ಕಳ್ಳತನಗಳೂ ನಡೆದಿವೆ. ಪೆಟ್ರೋಲ್ ಕಳ್ಳತನದಿಂದ ಒಂದು ಕಡೆ ಜನ ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ಕಳ್ಳತನ ಹಾವಳಿ ಹೆಚ್ಚಾಗಿ ಅನಾಹುತಗಳು ಸಂಭವಿಸಿದರೇನು ಗತಿ ಎಂಬ ಆತಂಕವೂ ಜನರಲ್ಲಿ ಮೂಡಿದೆ.

ಇನ್ನು ಆರೇಳು ತಿಂಗಳುಗಳಿಂದಲೂ ನಗರದ ವಿವಿಧೆಡೆ ಪೆಟ್ರೋಲ್ ಕಳ್ಳತನ ನಡೆಯುತ್ತಿವೆ. ಹೀಗಾಗಿ, ಕೆಲವರು ಮನೆ ಬಳಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದ್ರೂ ಸಹ ಪೆಟ್ರೋಲ್ ಕಳ್ಳರ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ, ಪೊಲೀಸರ ನಿರ್ಲಕ್ಷ್ಯದಿಂದಾಗಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬೈಕ್ ಮತ್ತು ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಪರಿಣಾಮ ನಗರದ ವಿವಿಧ ಬಡಾವಣೆಯ ಜನರಲ್ಲಿ ಕಳ್ಳರ ಹಾವಳಿ ಭೀತಿ ಸೃಷ್ಟಿಸಿದೆ. ಹೀಗಾಗಿ, ಪೊಲೀಸ್ ಇಲಾಖೆ ಬೈಕ್ ಮತ್ತು ಪೆಟ್ರೋಲ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಳ್ಳರ ಹಾವಳಿಗೆ ಬ್ರೇಕ್ ಹಾಕಬೇಕೆಂಬುದು ಜನರ ಆಗ್ರಹವಾಗಿದೆ.

ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್