ಚಿತ್ರದುರ್ಗ: ಮಠಗಳ ಅನುದಾನದಲ್ಲಿ ಸರ್ಕಾರ ಕಮಿಷನ್ ಪಡೆದ ಆರೋಪಕ್ಕೆ ಸಂಬಂಧಿಸಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ಚಿತ್ರದುರ್ಗದ ಬೋವಿ ಮಠದಲ್ಲಿ ಶ್ರೀಗಳಿಂದ ಸುದ್ದಿಗೋಷ್ಠಿ ನಡೆದಿದ್ದು ಒಕ್ಕೂಟದ ಅಧ್ಯಕ್ಷ ಕಾಗಿನೆಲೆ ಮಠದ ನಿರಂಜನಾನಂದಪುರಿ ಶ್ರೀ, ಪ್ರ.ಕಾರ್ಯದರ್ಶಿ ಶಿವಶರಣ ಮಾದಾರ ಚನ್ನಯ್ಯ, ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ, ಬೋವಿ ಮಠದ ಇಮ್ಮಡಿಸಿದ್ಧರಾಮೇಶ್ವರ ಶ್ರೀ, ಕುಂಚಿಟಿಗ ಮಠದ ಶಾಂತವೀರ ಶ್ರೀ, ಭಗೀರಥ ಮಠದ ಪುರುಷೋತ್ತಮಾನಂದಪುರಿ ಶ್ರೀ, ಮಾಚಿದೇವ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಗಾಣಿಗ ಮಠದ ಬಸವಕುಮಾರ್ ಶ್ರೀ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು.
ಮಠಗಳಿಗೆ ಸರ್ಕಾರ ನೀಡಿದ ಅನುದಾನದಲ್ಲಿ ಪರ್ಸೆಂಟೇಜ್ ಆರೋಪಕ್ಕೆ ಸಂಬಂಧಿಸಿ ದಿಂಗಾಲೇಶ್ವರ ಶ್ರೀಗಳ ಹೇಳಿಕೆ ಬಗ್ಗೆ ಒಕ್ಕೂಟ ಪ್ರತಿಕ್ರಿಯೆ ನೀಡಿದೆ. ಸಮುದಾಯದ ಪ್ರಗತಿಗೆ ಸರ್ಕಾರದಿಂದ ಅನುದಾನ ಪಡೆದಿದ್ದೇವೆ. ಬಿಎಸ್ವೈ ಸರ್ಕಾರದಿಂದ ಈವರೆಗೂ ಅನುದಾನ ಪಡೆದಿದ್ದೇವೆ. ಆದ್ರೆ ನಾವು ಯಾರಿಗೂ ಪರ್ಸೆಂಟೇಜ್ ನೀಡಿಲ್ಲ. ಸರ್ಕಾರ, ಅಧಿಕಾರಿಗಳು ಯಾರೂ ಸಹ ಪರ್ಸೆಂಟೇಜ್ ಬೇಡಿಕೆಯಿಟ್ಟಲ್ಲ. ಸರ್ಕಾರದ ಅನುದಾನ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ತಿಳಿಸಿದ್ದಾರೆ.
ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರವಾದದ್ದು. ಸರ್ಕಾರ, ಜನಪ್ರತಿನಿಧಿ, ಅಧಿಕಾರಿಗಳು ಪರ್ಸೆಂಟೇಜ್ ಕೇಳಿಲ್ಲ ಎಂದು ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಪರ್ಸೆಂಟೇಜ್ ಕೊಟ್ಟು ಅನುದಾನ ಪಡೆಯುವ ಸ್ಥಿತಿಯಿಲ್ಲ. ಅಂತಹ ಪರಿಸ್ಥಿತಿ ಬಂದರೆ ನಮಗೆ ಅದರ ಅಗತ್ಯವೂ ಇಲ್ಲ. ಭಕ್ತರು ನೀಡಿದ ಕಾಣಿಕೆಯಲ್ಲೇ ಮಠ, ಸಮಾಜದ ಅಭಿವೃದ್ಧಿಯಾಗುತ್ತೆ ಎಂದರು.
ಇದನ್ನೂ ಓದಿ: ಕೊವಿಡ್: ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ; ನಿಯಮ ಉಲ್ಲಂಘಿಸಿದರೆ ₹500 ದಂಡ
Jet Airways: ಮತ್ತೆ ಹಾರಾಟ ನಡೆಸಲು ರೆಕ್ಕೆ ಬಿಚ್ಚುವುದಕ್ಕೆ ಸಜ್ಜಾಗಿದೆ ಜೆಟ್ ಏರ್ವೇಸ್