ಚಿತ್ರದುರ್ಗದಲ್ಲಿ ರಣಭೀಕರ ಬರಗಾಲ: ಸರ್ಕಾರ ಇದುವರೆಗೂ ಗೋಶಾಲೆ ತೆರೆದಿಲ್ಲ, ರೈತರ ಆಕ್ರೋಶ

ಚಿತ್ರದುರ್ಗ ಜಿಲ್ಲೆಯಲ್ಲಿ ರಣಭೀಕರ ಬರಗಾಲವಿದೆ. ಜಾನುವಾರುಗಳು ಸಮರ್ಪಕ ನೀರು-ಮೇವು ಸಿಗದೆ ಮೂಕ ವೇದನೆಗೆ ಸಿಲುಕಿವೆ. ಆದ್ರೆ, ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಸರ್ಕಾರ ಈವರೆಗೆ ಗೋಶಾಲೆ ತೆರೆಯದೇ ಇರುವುದು ರೈತಾಪಿ ವರ್ಗದಲ್ಲಿ ಆಕ್ರೋಶ ಮೂಡಿಸಿದೆ.

ಚಿತ್ರದುರ್ಗದಲ್ಲಿ ರಣಭೀಕರ ಬರಗಾಲ: ಸರ್ಕಾರ ಇದುವರೆಗೂ ಗೋಶಾಲೆ ತೆರೆದಿಲ್ಲ, ರೈತರ ಆಕ್ರೋಶ
ಬರಗಾಲ - ಚಿತ್ರದುರ್ಗದಲ್ಲಿ ಸರ್ಕಾರ ಇದುವರೆಗೂ ಗೋಶಾಲೆ ತೆರೆದಿಲ್ಲ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಸಾಧು ಶ್ರೀನಾಥ್​

Updated on: Nov 25, 2023 | 1:27 PM

ಕೋಟೆನಾಡು ಚಿತ್ರದುರ್ಗದಲ್ಲಿ (chitradurga) ರಣಭೀಕರ ಬರಗಾಲ ಆವರಿಸಿದೆ. ಜಾನುವಾರುಗಳಿಗೆ ನೀರು ಮೇವಿನ ಕೊರತೆ ಹೇಳ ತೀರದಾಗಿದೆ. ಜಾನುವಾರುಗಳ ( cattle) ಸಾವು -ನೋವಿಗೀಡಾಗುವ ಸಂದರ್ಭ ಎದುರಾಗಿದೆ. ಆದ್ರೂ, ಸಹ ಜಿಲ್ಲಾಡಳಿತ ಈವರೆಗೆ ಗೋಶಾಲೆ (goshala) ತೆರೆಯದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ವರದಿ ಇಲ್ಲಿದೆ. ಸಮರ್ಪಕ ನೀರು-ಮೇವು ಸಿಗದ ಜಾನುವಾರುಗಳ ಮೂಕ ವೇದನೆ. ಬರ ಪೀಡಿತ ಜಿಲ್ಲೆ ಎಂದು ಘೋಷಿಸಿರುವ ಸರ್ಕಾರದಿಂದಲೇ ( karnataka government) ಗೋಶಾಲೆ ತೆರೆಯದೆ ನಿರ್ಲಕ್ಷ. ಕೂಡಲೇ ಗೋಶಾಲೆ ತೆರೆಯುವಂತೆ ರೈತರಿಂದ ಆಗ್ರಹ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ.

ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ರೈತಾಪಿ ವರ್ಗ ಕೃಷಿ ಕಾಯಕದ ಜತೆಗೆ ಜಾನುವಾರು ಸಾಕಣೆಯನ್ನೂ ಪ್ರಮುಖ ಕಸುಬಾಗಿಸಿಕೊಂಡಿದ್ದಾರೆ. ಆದ್ರೆ, ಈ ವರ್ಷ ರಣಭೀಕರ ಬರಗಾಲದ ಪರಿಣಾಮ ಒಂದು ಕಡೆ ಬೆಳೆ ನಾಶವಾಗಿದೆ. ಮತ್ತೊಂದು ಕಡೆ ಜಾನುವಾರು, ಕುರಿ-ಮೇಕೆಗೆ ಸಮರ್ಪಕ ನೀರು-ಮೇವು ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಂಪ್ರದಾಯಿಕ ದೇವರ ಎತ್ತುಗಳಿರುವ ಚಳ್ಳಕೆರೆ ಭಾಗದಲ್ಲಿನ ಖಾಸಗಿ ಗೋಶಾಲೆಗಳಲ್ಲೂ ಸಮಸ್ಯೆ ಎದುರಾಗಿದೆ. ಮೂಕ ಪ್ರಾಣಿಗಳು ನೀರು -ಮೇವಿಲ್ಲದೆ ಸಾವು-ನೋವಿಗೀಡಾಗುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಆದ್ರೆ, ಸರ್ಕಾರ ಮಾತ್ರ ಬರ ಪೀಡಿತ ಜಿಲ್ಲೆ ಎಂದು ಮೂರ್ನಾಲ್ಕು ತಿಂಗಳ ಹಿಂದೆಯೇ ಘೋಷಿಸಿದೆಯಾದ್ರೂ ಗೋಶಾಲೆ ತೆರೆಯುವ ಕೆಲಸ ಮಾತ್ರ ಮಾಡಿಲ್ಲ. ಹೀಗೆ ನಿರ್ಲಕ್ಷ ಧೋರಣೆ ಮುಂದುವರೆದರೆ ರೈತರು ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

Also Read: ಮುಜರಾಯಿ ಇಲಾಖೆ ದೇವಸ್ಥಾನಗಳ ಗೋಶಾಲೆ ಗೋವುಗಳು ನರಕಯಾತನೆ ಅನುಭವಿಸುತ್ತಿವೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ!

ಇನ್ನು ಜಿಲ್ಲೆಯಲ್ಲಿ 2019ರ ಜಾನುವಾರು ಗಣತಿ ಪ್ರಕಾರ 3ಲಕ್ಷ 38ಸಾವಿರ 907 ದನ ಎಮ್ಮೆಗಳಿವೆ. 17ಲಕ್ಷ 37ಸಾವಿರ 145 ಕುರಿ ಮೇಕೆಗಳನ್ನು ಸಾಕಣೆ ಮಾಡಲಾಗಿದೆ. ಆದ್ರೆ, ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾದ ಪರಿಣಾಮ ಜಾನುವಾರುಗಳು, ಕುರಿ-ಮೇಕೆಗೆ ನೀರು ಮೇವು ಸಮರ್ಪಕವಾಗಿ ಸಿಗದಂತಾಗಿದೆ. ಅನೇಕರು ಜಾನುವಾರು ಸಮೇತ ಗೂಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ಕೂಡಲೇ ಗೋಶಾಲೆ ತೆರೆಯುವಂತೆ ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರನ್ನು ಪ್ರಶ್ನಿಸಿದಾಗ ಈಗಾಗಲೇ ಜಿಲ್ಲಾಡಳಿತ ಹೋಬಳಿಗೊಂದರಂತೆ ಜಿಲ್ಲೆಯಲ್ಲಿ 22ಗೋಶಾಲೆ ತೆರೆಯಲು ಸಿದ್ಧತೆ ನಡೆಸಿದೆ. ಸುಮಾರು 28ಸಾವಿರ ಮೆಟ್ರಿಕ್ ಟನ್ ಮೇವು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು 2ವಾರದೊಳಗೆ ಗೋಶಾಲೆಗಳನ್ನು ತೆರೆದು ನೀರು-ಮೇವು ಪೂರೈಸಲಾಗುವುದು ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಬಾಬುರತ್ನ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ರಣಭೀಕರ ಬರಗಾಲ ಎದುರಾಗಿದೆ. ಜಾನುವಾರುಗಳು ಸಮರ್ಪಕ ನೀರು-ಮೇವು ಸಿಗದೆ ಮೂಕ ವೇದನೆಗೆ ಸಿಲುಕ ಪರಿಸ್ಥಿತಿ ನಿರ್ಮಾಣ ಆಗಿದೆ. ಆದ್ರೆ, ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಸರ್ಕಾರ ಈವರೆಗೆ ಗೋಶಾಲೆ ತೆರೆಯದೇ ಇರುವುದು ರೈತಾಪಿ ವರ್ಗದಲ್ಲಿ ಆಕ್ರೋಶ ಮೂಡಿಸಿದೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಶೀಘ್ರ ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?