ಮೇಕೆದಾಟು ಹೋರಾಟಕ್ಕೆ ಸರ್ಕಾರದಿಂದ ಕಡಿವಾಣ ಆರೋಪ
ತುರ್ತು ಪರಿಸ್ಥಿತಿ ವೇಳೆ ಕೆಲವರು ಪ್ರಯತ್ನ ಮಾಡಿರಬಹುದು. ನಾವು ಎಲ್ಲರ ಎಲ್ಲಾ ಹಕ್ಕುಗಳನ್ನು ಗೌರವಿಸುತ್ತೇವೆ. ಕೊವಿಡ್ ಕಾರಣಕ್ಕೆ ಒಂದಷ್ಟು ನಿಯಂತ್ರಣಕ್ಕೆ ಒಳಪಡಬೇಕು. ಜೀವ ಹೋದರೂ ನಿಲ್ಲಿಸಲ್ಲ ಅಂದರೆ ತಡೆಯುವವರು ಯಾರು? ಯಾರದ್ದೋ ಹೋರಾಟ ನಿಲ್ಲಿಸಲು ಕೊವಿಡ್ ಬಂದಿದ್ದಲ್ಲ. ಸಿಎಂ ಸ್ಥಾನದಲ್ಲಿದ್ದವರು, ಸಿಎಂ ಆಗುತ್ತೀವಿ ಎನ್ನುವವರು ಇದನ್ನು ಗಮನಿಸಲಿ ಎಂದು ಮೇಕೆದಾಟು ಹೋರಾಟಕ್ಕೆ ಸರ್ಕಾರದಿಂದ ಕಡಿವಾಣ ಆರೋಪಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಸಿದ್ಧರಾಮಯ್ಯ ಅವರ ಶೈಲಿಯಲ್ಲಿ ಅವರು ಮಾತಾಡುತ್ತಾರೆ. 144 ಸೆಕ್ಷನ್ ಹಾಕಿದ್ರೂ ಪಾದಯಾತ್ರೆ ಮಾಡುತ್ತೆವೆಂದರೆ ಅವರೇ ತೀರ್ಮಾನಿಸಲಿ. ತುಂಬಾ ಜನ ಬುದ್ಧಿವಂತರು ಬೇರೆಯವರಿಗೆ ಬುದ್ಧಿ ಇಲ್ಲ ಅಂದುಕೊಂಡಿರುತ್ತಾರೆ. ಅದು ಅವರವರ ಮಾನಸಿಕತೆಗೆ ಸಂಬಂಧಪಟ್ಟ ವಿಚಾರ ಎಂದು ಕಟೀಲ್ಗೆ ರಾಜಕೀಯ ಬುದ್ಧಿ ಬೆಳೆದಿಲ್ಲ ಎಂದಿದ್ದ ಸಿದ್ಧರಾಮಯ್ಯಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:
ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಮೇಕೆದಾಟು: ಸರ್ವಪಕ್ಷ ನಿಯೋಗ ಕರೆದೊಯ್ದರೆ ಮೋದಿ ಹತ್ರ ನಾನು ಮಾತಾಡ್ತೇನಿ- ಸಿದ್ದರಾಮಯ್ಯ ಘೋಷಣೆ