ಚಿತ್ರದುರ್ಗದ DRDOದಲ್ಲಿ ಚಾಲಕರಹಿತ ವಿಮಾನ ಯಶಸ್ವಿ ಹಾರಾಟ: ಟ್ವೀಟ್ ಮೂಲಕ‌ ಅಭಿನಂದನೆ ಸಲ್ಲಿಸಿದ ಸಚಿವ ರಾಜನಾಥ್‌ ಸಿಂಗ್, ಪ್ರಲ್ಹಾದ್ ಜೋಶಿ

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDOನ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ವಿಮಾನ‌ ಯಶಸ್ವಿಯಾಗಿ ಹಾರಾಡಿದೆ.

ಚಿತ್ರದುರ್ಗದ DRDOದಲ್ಲಿ ಚಾಲಕರಹಿತ ವಿಮಾನ ಯಶಸ್ವಿ ಹಾರಾಟ:  ಟ್ವೀಟ್ ಮೂಲಕ‌ ಅಭಿನಂದನೆ ಸಲ್ಲಿಸಿದ ಸಚಿವ ರಾಜನಾಥ್‌ ಸಿಂಗ್, ಪ್ರಲ್ಹಾದ್ ಜೋಶಿ
ಚಿತ್ರದುರ್ಗದ DRDOದಲ್ಲಿ ಚಾಲಕರಹಿತ ವಿಮಾನ ಯಶಸ್ವಿ ಹಾರಾಟ
Updated By: ಆಯೇಷಾ ಬಾನು

Updated on: Jul 01, 2022 | 6:00 PM

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ವಿಮಾನ‌ ಯಶಸ್ವಿಯಾಗಿ ಹಾರಾಡಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಬಳಿಯಿರುವ DRDOದಲ್ಲಿ ಚಾಲಕರಹಿತ ವಿಮಾನ ಯಶಸ್ವಿಯಾಗಿ ಹಾರಾಡಿದ್ದು ಈ ಬಗ್ಗೆ ಟ್ವೀಟ್ ಮೂಲಕ‌ ರಕ್ಷಣಾ ಸಚಿವ ರಾಜನಾಥ್‌ ಸಿಂಗ್(Rajnath Singh) ಹಾಗೂ ಪ್ರಲ್ಹಾದ್ ಜೋಶಿ(Pralhad Joshi) ಅಭಿನಂದನೆ ಸಲ್ಲಿಸಿದ್ದಾರೆ.

DRDOದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ನಡೆದ ಯಶಸ್ವಿ ಚೊಚ್ಚಲ ಹಾರಾಟ ಇದಾಗಿದೆ. ಸ್ವಾಯತ್ತ ವಿಮಾನಗಳ ಪ್ರಮುಖ ಸಾಧನೆ ಇದಾಗಿದೆ. ಆತ್ಮನಿರ್ಭರ ಭಾರತಕ್ಕೆ ದಾರಿಯಿದು ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: OnePlus Nord: ಭಾರತದಲ್ಲಿ ಬಿಡುಗಡೆಯಾಯ್ತು OnePlus Nord 2T 5G, ಬಿಡುಗಡೆಯ ವಿಶೇಷ ಕೊಡುಗೆಗಳು ಇಲ್ಲಿವೆ ನೋಡಿ

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDO ಮಾನವರಹಿತ ವಿಮಾನವನ್ನು ತಯಾರಿಸಿದ್ದು ರಕ್ಷಣಾ ವ್ಯವಸ್ಥೆಯಲ್ಲಿ ಇದು ಮಹತ್ತರವಾದ ಪಾತ್ರ ವಹಿಸಲಿದೆ. ಚಿತ್ರದುರ್ಗದಲ್ಲಿ ಇದರ ಪ್ರಯೋಗ ಮುಗಿದಿದ್ದು, ಭಾರತೀಯ ರಕ್ಷಣಾ ಪಡೆಗೆ ಸೇರ್ಪಡೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

Published On - 5:10 pm, Fri, 1 July 22