ಕುರಿಗಳನ್ನು ತೊಳೆಯಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲು
ಚಿತ್ರದುರ್ಗ: ಕುರಿಗಳನ್ನು ತೊಳೆಯಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಹೊಸಕೆರೆ ಗ್ರಾಮ ಬಳಿ ನಡೆದಿದೆ. ರಾಂಪುರ ಗ್ರಾಮದ ಕರಿಯಣ್ಣ(30) ಹಾಗೂ ಕೂಡ್ಲಿಗಿ ತಾಲೂಕಿನ ಮಾಡನಾಯಕನಹಳ್ಳಿ ನಿವಾಸಿ ಪಾಂಡು(25) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಹೊಸಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಕುರಿಗಾಹಿಗಳು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ: ಕುರಿಗಳನ್ನು ತೊಳೆಯಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಹೊಸಕೆರೆ ಗ್ರಾಮ ಬಳಿ ನಡೆದಿದೆ. ರಾಂಪುರ ಗ್ರಾಮದ ಕರಿಯಣ್ಣ(30) ಹಾಗೂ ಕೂಡ್ಲಿಗಿ ತಾಲೂಕಿನ ಮಾಡನಾಯಕನಹಳ್ಳಿ ನಿವಾಸಿ ಪಾಂಡು(25) ಮೃತ ದುರ್ದೈವಿಗಳು.
ಇಂದು ಬೆಳಗ್ಗೆ ಹೊಸಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ಕುರಿಗಳನ್ನು ತೊಳೆಯುತ್ತಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಕುರಿಗಾಹಿಗಳು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:54 pm, Wed, 5 February 20