ವಿಧಾನಪರಿಷತ್, ಫೆಬ್ರವರಿ 15: ವಿಧಾನಪರಿಷತ್ನಲ್ಲಿ ಕ್ಲಬ್ (Club) ಕಾರ್ಯವೈಖರಿ ಸಂಬಂಧ ವರದಿ ಪ್ರಸ್ತಾಪಿಸಲಾಗಿದ್ದು, ಕ್ಲಬ್ಗಳ ಸದಸ್ಯತ್ವ ದುಬಾರಿ ದರಕ್ಕೆ ಕಡಿವಾಣ ಹಾಕುವಂತೆ 23 ಅಂಶಗಳ ವರದಿ ಮಂಡಿಸಿ ಜಾರಿಗೆ ತರಬೇಕೆಂದು ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ರಾಜ್ಯಪಾಲರ ಭಾಷಣವನ್ನು ಪ್ರಸ್ತಾಪಿಸಿದ್ದು, ರಾಜ್ಯ ಸರ್ಕಾರವು ರಾಜ್ಯಪಾಲರ ಬಾಯಿ ಮೂಲಕ ಸುಳ್ಳು ಹೇಳಿಸುವ ಕೆಲಸ ಮಾಡಿದೆ. ನಮ್ಮ ಹಿಂದಿನ ಸರ್ಕಾರ ನೀಡಿದ ಕೊಡುಗೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವರಾದ ಶಿವರಾಜ ತಂಗಡಗಿ, ಡಾ.ಜಿ.ಪರಮೇಶ್ವರ್ ಸರ್ಕಾರದ ವಿರುದ್ಧ ಸುಳ್ಳು ಆಪಾದನೆ ಮಾಡಬೇಡಿ ಎಂದು ಪಟ್ಟುಹಿಡಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ನಾನು ಗೃಹ ಸಚಿವ ಇದ್ದಾಗ ಮಂಗಳೂರಲ್ಲಿ ಪಬ್ ಮೇಲೆ ದಾಳಿ ಆಯ್ತು. ಆಗ ನಾನು ಗೂಂಡಾ ಕಾಯ್ದೆ ಹಾಕಿದ್ದೆ. ದಿ. ಅರುಣ್ ಜೇಟ್ಲಿ ಕರೆ ಮಾಡಿ ಕ್ರಮ ಆಗಬೇಕು ಎಂದು ಹೇಳಿದ್ದರು. ಪರಮೇಶ್ವರ್ ಅವರಿಗೆ ಬಂದಿರುವ ಕರೆಗಳೆಲ್ಲಾ ನೋ ಆಕ್ಷನ್ ಅಂತ ಬಂದಿದೆ ಎಂದರು.
ಇದನ್ನೂ ಓದಿ: ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?
ಪರಮೇಶ್ವರ್ ಮೂರು ಬಾರಿ ಗೃಹ ಸಚಿವರು, ನಾನು ಒಂದೇ ಬಾರಿ ಗೃಹ ಸಚಿವ ಆದವನು. ನಾನು ಸಿಂಗಲ್ ಸ್ಟಾರ್ ಅಷ್ಟೇ. ಎಎಸ್ಐ ತರಹ ನಾನು ನೀವು ಮೂರು ಬಾರಿ ಗೃಹ ಸಚಿವ, ನಿಮಗೆ ಸ್ಟಾರ್ ಹೆಚ್ಚಿದೆ. ನೀವು ಇಲ್ಲಿಂದಲೇ ಆಕ್ಷನ್ ಎಂದು ಹೇಳಿ ಎಂದಿದ್ದಾರೆ.
ನಳೆ ಸಿದ್ದರಾಮಯ್ಯ ಬಜೆಟ್ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಮಗೆ ಯಾವ ನಿರೀಕ್ಷೆಯೂ ಇಲ್ಲ. ಆ ಇಲಾಖೆಯಿಂದ ಈ ಇಲಾಖೆಗೆ ಹುಡುಕುವ ಕೆಲಸ ಮಾಡುತ್ತಾರೆ. ನೀರಾವರಿ, ಕೃಷಿ, ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿದಾಗ ಸಚಿವರು ಮುಗಿಬಿದ್ದರು
ಹಿಂದಿನ ಬಜೆಟ್ನಲ್ಲಿಯೇ ಎಲ್ಲದಕ್ಕೂ ಹಣ ಕಡಿತ ಮಾಡಿದ್ದಾರೆ. ಹೀಗಾದರೆ ಏನು ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ. ಈ ದರಿದ್ರ ಸರ್ಕಾರದಿಂದ ನಮಗೆ ಏನೂ ನಿರೀಕ್ಷೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.