AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಶಕ್ತಿ ಬಂದರೂ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಯಾವುದೇ ಶಕ್ತಿ ಬಂದರೂ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬೊಮ್ಮಾಯಿImage Credit source: indiatoday.in
ಗಂಗಾಧರ​ ಬ. ಸಾಬೋಜಿ
|

Updated on:Mar 13, 2023 | 7:43 PM

Share

ಗದಗ: ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು. ಜಿಲ್ಲೆಯ ರೋಣ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ರೋಣ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಜಿಲ್ಲೆಯ ಮೂರು ಪ್ರಮುಖ ನಗರಗಳಾದ ರೋಣ, ಗಜೇಂದ್ರಗಡ ಹಾಗೂ ನರೇಗಲ್​ಗೆ ಫ್ಲೋರೈಡ್ ಮುಕ್ತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ರೋಣದಲ್ಲಿ 46 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯಾಗಿದೆ. ನರೆಗಲ್ ಮತ್ತು ಗಜೇಂದ್ರ ಗಡಕ್ಕೆ 69 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೂರೂ ನಗರಗಳಿಗೆ ಶುದ್ಧವಾದ ಸಂಸ್ಕರಿಸಿದ ನೀರು ಒದಗಿಸುವ ಯೋಜನೆಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.

ಸಂತೋಷದೊಂದಿಗೆ ಕಳವಳವೂ ಆಗಿದ್ದು, ಈ ಯೋಜನೆ 2009ರಲ್ಲಿ ಪ್ರಾರಂಭವಾದರೂ, ಮುಂದುವರೆಯಲಿಲ್ಲ. ಮಲಪ್ರಭ ನದಿ ನೀರನ್ನು ಶುದ್ದೀಕರಿಸಿ ಫ್ಲೋರೈಡ್ ಮುಕ್ತ ನೀರನ್ನು ಸರಬರಾಜು ಮಾಡಲು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಡಬಲ್ ಇಂಜಿನ್ ಸರ್ಕಾರದ ಬದ್ಧತೆ

ಮೂರು ವರ್ಷದ ಹಿಂದೆ ಕೆಂಪುಕೋಟೆಯ ಮೇಲೆ ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದಾಗಿ ಘೋಷಿಸಿದ್ದರು‌. ಈ ಮೂರು ವರ್ಷದಲ್ಲಿ 12 ಕೋಟಿ ಮನೆಗಳಿಗೆ ಹೊಸದಾಗಿ ನೀರು ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ 72 ವರ್ಷಗಳವರೆಗೂ ಕೇವಲ 7 ಕೋಟಿ ಮನೆಗಳಿಗೆ ನೀರಿನ ಸೌಲಭ್ಯವಿತ್ತು. ಮೂರು ವರ್ಷಗಳಲ್ಲಿ 12 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿದವರು ಪ್ರಧಾನಿ ನರೇಂದ್ರ ಮೋದಿ. ರಾಜ್ಯದಲ್ಲಿ ಕೇವಲ 25 ಲಕ್ಷ ಮನೆಗಳಿಗೆ 75 ವರ್ಷಗಳಲ್ಲಿ ನೀರಿನ ಸಂಪರ್ಕ ನೀಡಿದ್ದರು. ನಮ್ಮ ಸರ್ಕಾರ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸಿದೆ. ಇದು ಡಬಲ್ ಇಂಜಿನ್ ಸರ್ಕಾರದ ಬದ್ಧತೆ. ಜಲ್ ಜೀವನ್ ಮಿಷನ್, ಅಮೃತ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಬೈದಿದ್ದು ಬಿಜೆಪಿಯವರನ್ನು, ದೇಶದ ಮಾನ ಹೇಗೆ ಹೋಗುತ್ತದೆ: ಸಿದ್ದರಾಮಯ್ಯ ಪ್ರಶ್ನೆ

ವಿಳಂಬರಹಿತ ಪ್ರಗತಿ ಸಾಧಿಸುವುದೇ ಸರ್ಕಾರದ ಗುರಿ

ಜನ ಮೂಲ ಸೌಲಭ್ಯಗಳನ್ನು ನೀಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ. ಜನ ಶಕ್ತಿ ಮುಂದೆ ಯಾವುದೇ ಶಕ್ತಿ ನಡೆಯುವುದಿಲ್ಲ. ಯಾವಾಗಲೂ ಜನರ ಇಚ್ಛಾಶಕ್ತಿ ಗೆದ್ದಿದೆ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಸಮಯ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಸಾಗಬೇಕು. ಕಾಲಮಿತಿಯಲ್ಲೇ ಕೆಲಸಗಳು ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಳಂಬರಹಿತ ಪ್ರಗತಿ ಸಾಧಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.

ರಾಜ್ಯದ 3 ಲಕ್ಷ ಕುಟುಂಬಗಳಿಗೆ ಬೆಳಕು ಕಾರ್ಯಕ್ರಮ:

ಜಿಲ್ಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ 8092 ಕುಟುಂಬಗಳಿಗೆ ಹಾಗೂ ಇಡೀ ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯಕ್ರಮವನ್ನು ಮಾಡಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 10 ಸಾವಿರ ಮಹಿಳಾ ಸಂಘಗಳಿಗೆ ತಲಾ 1 ಲಕ್ಷದಂತೆ ಡಿಬಿಟಿ ಮಾಡಲಾಗಿದ್ದು, ಗ್ರಾಮದ ತಲಾ ಎರಡು ಸ್ತೀಶಕ್ತಿ ಸಂಘಗಳಿಗೆ ಒಟ್ಟು 5 ಲಕ್ಷ ರೂ. ಆರ್ಥಿಕ ನೆರವನ್ನು ನೀಡಲಾಗುತ್ತದೆ. ಎರಡನೇ ಹಂತದ ಯೋಜನೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನೂ ಸರ್ಕಾರ ಜಾರಿಗೊಳಿಸಿದ್ದು, ಮಹಿಳೆಯರು ಹಾಗೂ ಯುವಕರ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕನ್ನು ಬದುಕಬೇಕೆನ್ನುವುದು ಸರ್ಕಾರದ ಆಶಯ. ಕೃಷಿ ಕಾರ್ಮಿಕ ಮಹಿಳೆಯರಿಗೆ 1000 ರೂ. ಆರ್ಥಿಕ ಸಹಾಯ ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

2000 ಶಾಲಾ ಬಸ್ ಸೇವೆ 

ಜನರ ಸಮಸ್ಯೆಗಳನ್ನು ನಿವಾರಿಸುವ ಸ್ಪಂದನಾಶೀಲ ಸರ್ಕಾರ ನಮ್ಮದಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಿಮೋಥೆರಪಿ ಕೇಂದ್ರ ಹೆಚ್ಚಿಸಲಾಗಿದೆ.ಕಿವುಡರಿಗೆ ಶ್ರವಣ ಸಾಧನಕ್ಕೆ ಸಹಾಯಕ್ಕೆ 500 ಕೋಟಿ ರೂ. ನಿಗದಿಪಡಿಸಿದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆಗೆ ತೆರಳಲು 2000 ಶಾಲಾ ಬಸ್ ಸೇವೆಯನ್ನು ಪ್ರಾರಂಭಿಸಲಾಗುವುದು. ಜೊತೆಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು. ಐಟಿಐಯಲ್ಲಿ ಪಿಯುಸಿಯ ಅನುತೀರ್ಣರಾದ ಯುವಕರಿಗೆ ತರಬೇತಿ ಹಾಗೂ 6 ತಿಂಗಳವರೆಗೆ 1500 ರೂ. ಭತ್ಯೆ ನೀಡಿ ಉದ್ಯೋಗವನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುಡಿಯುವ ವರ್ಗಕ್ಕೆ ಬೆಂಬಲ ನೀಡುವುದು ಸರ್ಕಾರದ ಆದ್ಯತೆ. ನಾಡನ್ನು ಕಟ್ಟುವುದು ದುಡಿಯುವ ವರ್ಗ ಎಂದು ತಿಳಿಸಿದರು.

ಇದನ್ನೂ ಓದಿ: ನಮ್ಮ ಯಾವ ಸಚಿವರೂ ಸಿಡಿ ಬೆದರಿಕೆಗೆ ತಲೆಕೆಡಿಕೊಳ್ಳುವುದಿಲ್ಲ ಎಂದ ಸಿಎಂ ಬೊಮ್ಮಾಯಿ

ಹಾಸ್ಟೆಲ್​​ಗಳ ಸಾಮರ್ಥ್ಯ ಹೆಚ್ಚಳ

250 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್​ಗಳ ಸಾಮರ್ಥ್ಯವನ್ನು ಹೆಚ್ಚಿಸಿ, 30 ಸಾವಿರ ಓಬಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನೇಕಾರರಿಗೆ ವಿದ್ಯುತ್ ಸಬ್ಸಿಡಿ, 2 ಲಕ್ಷದವರೆಗೆ ಸಾಲಸೌಲಭ್ಯ, ಸಹಾಯಧನ, 350 ಕೋಟಿ ರೂ. ವೆಚ್ಚದಲ್ಲಿ ಕುರಿಗಾಹಿಗಳ ಸಂಘಕ್ಕೆ 20 ಕುರಿ 1 ಮೇಕೆ ನೀಡಲಾಗುತ್ತಿದೆ. ಎಸ್​ಸಿಎಸ್​ಟಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ.

ಸಂವಿಧಾನದ 9 ನೇ ಶೆಡ್ಯೂಲ್​ಗೆ ಈ ಹೆಚ್ಚಳವನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರದ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲಿ, ಇನ್ನಷ್ಟು ಜನರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕೆನ್ನುವ ಉದ್ದೇಶದಿಂದ ಫಲಾನುಭವಿಗಳ ಸಮ್ಮೇಳನವನ್ನು ಏರ್ಪಡಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಲಕ್ಕುಂಡಿ ಹಂಪಿ ಸರ್ಕ್ಯೂಟ್​ನ ಭಾಗವಾಗಲಿದೆ

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಹಂಪಿ ಸರ್ಕ್ಯೂಟ್​ನಲ್ಲಿ ಸೇರಿಸಲು ಈಗಾಗಲೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಲಕ್ಕುಂಡಿ ಕ್ಷೇತ್ರವು ಹಂಪಿ ಸರ್ಕೀಟ್​ನ ಭಾಗವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ರೋಣ ಕ್ಷೇತ್ರದಲ್ಲಿ ಕೈಗಾರಿಕಾ ಅಭಿವೃದ್ದಿಯಾಗಿಲ್ಲ. ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಇಡೀ ರಾಜ್ಯದ ಅಭಿವೃದ್ಧಿಗೆ ಬದ್ದವಾಗಿದೆ. ರೋಣದ ಅಭಿವೃದ್ದಿಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

ದಾಖಲೆ ಪಡೆದು ಪರಿಹಾರ 

ಕೋವಿಡ್​​ನಿಂದಾಗಿ ಮೃತಪಟ್ಟ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಕುಟುಂಬದವರಿಗೆ ಇನ್ನು ಪರಿಹಾರ ನೀಡಲಾಗಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ವಿವರ ತರಿಸಿಕೊಂಡು, ಕೋವಿಡ್​ನಿಂದಲೇ ಮೃತಪಟ್ಟಿರುವ ಬಗ್ಗೆ ದಾಖಲೆ ಪಡೆದು ಪರಿಹಾರವನ್ನು ಖಂಡಿತ ಒದಗಿಸಲಾಗುವುದು ಎಂದು ತಿಳಿಸಿದರು.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Mon, 13 March 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ