AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Scholarship: ರೈತರ ಮಕ್ಕಳಿಗೆ ಶಿಷ್ಯವೇತನ, ಅಧಿಕೃತ ಆದೇಶ ಪ್ರಕಟ; ಯಾರಿಗೆ ಎಷ್ಟು ವಿದ್ಯಾರ್ಥಿ ವೇತನ? ಇಲ್ಲಿದೆ ವಿವರ

ಎಂಬಿಬಿಎಸ್, ಬಿಇ, ಬಿಟೆಕ್ ಸೇರಿ ಸ್ನಾತಕೋತ್ತರ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ ₹ 10,000, ವಿದ್ಯಾರ್ಥಿನಿಯರಿಗೆ ₹ 11,000 ಪ್ರೋತ್ಸಾಹ ಧನ ನೀಡಲು ಪ್ರಕಟಿಸಲಾಗಿದೆ.

Scholarship: ರೈತರ ಮಕ್ಕಳಿಗೆ ಶಿಷ್ಯವೇತನ, ಅಧಿಕೃತ ಆದೇಶ ಪ್ರಕಟ; ಯಾರಿಗೆ ಎಷ್ಟು ವಿದ್ಯಾರ್ಥಿ ವೇತನ? ಇಲ್ಲಿದೆ ವಿವರ
ಬಸವರಾಜ ಬೊಮ್ಮಾಯಿ
TV9 Web
| Updated By: guruganesh bhat|

Updated on:Aug 07, 2021 | 9:57 PM

Share

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ‌ ಬಳಿಕ ಮೊದಲು ಘೋಷಣೆ ಮಾಡಿದ್ದ ಯೋಜನೆ ರೈತರ ಮಕ್ಕಳಿಗೆ ಶಿಷ್ಯವೇತನ ವಿತರಣೆಯ ಮಾಡಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಪಿಯುಸಿ ಐಟಿಐ ಡಿಪ್ಲೋಮಾ ಓದುವ ರೈತ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ₹ 2500, ವಿದ್ಯಾರ್ಥಿನಿಯರಿಗೆ ₹ 3000, ಬಿಎ, ಬಿಎಸ್ಸಿ, ಬಿಕಾಂ ಪದವಿ ಓದುವ ರೈತರ ವಿದ್ಯಾರ್ಥಿಯರಿಗೆ ₹5000, ವಿದ್ಯಾರ್ಥಿನಿಯರಿಗೆ ₹5500 ವಿದ್ಯಾರ್ಥಿ ವೇತನ ನೀಡಲು ಆದೇಶಿಸಲಾಗಿದೆ. ಎಲ್ಎಲ್​ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮಾ, ನರ್ಸಿಂಗ್ ಕೋರ್ಸ್ ಓದುವ ರೈತರ ಮಕ್ಕಳಲ್ಲಿ ವಿದ್ಯಾರ್ಥಿಗಳಿಗೆ ₹ 7500, ಹುಡುಗಿಯರಿಗೆ ವಿದ್ಯಾರ್ಥಿನಿಯರಿಗೆ ₹8000 ಶಿಷ್ಯವೇತನ ನೀಡಲು ಆದೇಶಿಸಲಾಗಿದೆ. ಎಂಬಿಬಿಎಸ್, ಬಿಇ, ಬಿಟೆಕ್ ಸೇರಿ ಸ್ನಾತಕೋತ್ತರ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ ₹ 10,000, ವಿದ್ಯಾರ್ಥಿನಿಯರಿಗೆ ₹ 11,000 ಪ್ರೋತ್ಸಾಹ ಧನ ನೀಡಲು ಪ್ರಕಟಿಸಲಾಗಿದೆ.

ಮೈಸೂರು ದಸರಾ ಆಚರಣೆ ಖಚಿತ ಮೈಸೂರು: ಈವರ್ಷ  ಮೈಸೂರು ದಸರಾ ಆಚರಿಸುವುದಂತೂ ನಿಶ್ಚಿತ. ಆದರೆ ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೆಂದು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಎಸ್. ಟಿ.ಸೋಮಶೇಖರ್ ತಿಳಿಸಿದರು. ಕಳೆದ ಬಾರಿ ಬಿಡುಗಡೆಯಾದ ಅನುದಾನದಲ್ಲಿ ಉಳಿದಿದೆ. ಅದೇ ಅನುದಾನ ಬಳಸಿ ಈ ಬಾರಿ ದಸರಾ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:  

SSLC Results 2021: ಆಗಸ್ಟ್ 9, ಸೋಮವಾರದಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧಿಕೃತ ಘೋಷಣೆ

NEP: ಅಧಿಕಾರ ಸ್ವೀಕರಿಸಿದ ದಿನವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಂಕಿತ ಹಾಕಿದ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ; ಇಲ್ಲಿದೆ ವಿವರ

(CM Basavaraj Bommai first announcement farmers children scholarship official announced here’s the details)

Published On - 8:09 pm, Sat, 7 August 21