AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್ ಗುರೂಜಿ ಆರತಿ ಮಾಡುವಾಗ ಬಿತ್ತು ದೇವಿಯ ಪ್ರಸಾದ; ನೂತನ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೊರಕಿತು ಆಶೀರ್ವಾದ

ಈ ಭೇಟಿಗೂ ಮೊದಲು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಈಬಾರಿಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿನಯ್ ಗುರೂಜಿ ಆರತಿ ಮಾಡುವಾಗ ಬಿತ್ತು ದೇವಿಯ ಪ್ರಸಾದ; ನೂತನ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೊರಕಿತು ಆಶೀರ್ವಾದ
ವಿನಯ್ ಗುರೂಜಿ ಆಶೀರ್ವಾದ ಪಡೆದ ಆರಗ ಜ್ಞಾನೇಂದ್ರ
TV9 Web
| Edited By: |

Updated on:Aug 07, 2021 | 11:19 PM

Share

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ (Vinay Guruji) ಆಶ್ರಮಕ್ಕೆ ರಾಜ್ಯದ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಭೇಟಿ ಕೊಟ್ಟು ದರ್ಶನ ಪಡೆದರು. ಈವೇಳೆ ಆಶ್ರಮದಲ್ಲಿ ದೇವಿಗೆ ಆರತಿ ಮಾಡುವಾಗ ದೇವಿಯ‌ ತಲೆ ಮೇಲಿಂದ ಹೂವಿನ ಪ್ರಸಾದದ ಹಾರ ಕೆಳಗೆ ಬಿದ್ದಿದೆ. ಈವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮೊದಲು ದೇವಿಗೆ ಆರತಿ ಮಾಡಿದ್ದಾರೆ. ನಂತರ ವಿನಯ್ ಗುರೂಜಿ ಆ ಬಳಿಕ ದೇವಿಗೆ ಆರತಿ ಮಾಡಿದ್ದಾರೆ. ವಿನಯ್ ಗುರೂಜಿ ಆರತಿ ಮಾಡುವಾಗ ದೇವಿಯ ತಲೆಯಿಂದ ಹೂವಿನ ಪ್ರಸಾದ ಕೆಳಗೆ ಬಿದ್ದಿದೆ. ನಂತರ ದೇವಿಯ ತಲೆಯಿಂದ ಬಿದ್ದ ಹೂವಿನ ಪ್ರಸಾದದ ಹಾರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕೊರಳಿಗೆ ವಿನಯ್ ಗುರೂಜಿ ಹಾಕಿದ್ದಾರೆ.

ಜತೆಗೆ ಇಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ರಂಭಾಪುರಿಶ್ರೀ ಆಶೀರ್ವಾದ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಮಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ಅವರಿಗೆ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಜೀವರಾಜ್​ ಜತೆಗೂಡಿದ್ದರು. ಈ ಭೇಟಿಗೂ ಮೊದಲು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಈಬಾರಿಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: 

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡುತ್ತಿದ್ದಾರೆ: ವಿನಯ್ ಗುರೂಜಿ

(Home Minister Araga Jnanendra blessed with Vinay Guruji while performing Aarti)

Published On - 11:17 pm, Sat, 7 August 21