Big Breaking: ಸದ್ಯಕ್ಕೆ ಲಾಕ್​ಡೌನ್ ಬೇಡ, ವೀಕೆಂಡ್ ಕರ್ಫ್ಯೂ ಮಾಡೋಣ: ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊವಿಡ್ 3ನೆ ಅಲೆ ತಡೆಯಲು ಯಾವೆಲ್ಲ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂಬ ವಿವರ ಇಲ್ಲಿದೆ.

Big Breaking: ಸದ್ಯಕ್ಕೆ ಲಾಕ್​ಡೌನ್ ಬೇಡ, ವೀಕೆಂಡ್ ಕರ್ಫ್ಯೂ ಮಾಡೋಣ: ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 14, 2021 | 5:54 PM

ಕರ್ನಾಟಕದಲ್ಲಿ ಕೊವಿಡ್ 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಶನಿವಾರ  ಮಹತ್ವದ ಸಭೆ ನಡೆಸಿದರು. ಶಾಲಾ-ಕಾಲೇಜುಗಳನ್ನು ಆರಂಭಿಸುವ  ಬಗ್ಗೆ  ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಶಾಲಾ-ಕಾಲೇಜು ಆರಂಭಕ್ಕೆ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಲೇ ಶಾಲಾ-ಕಾಲೇಜು ಓಪನ್‌ ಮಾಡಬೇಕೆಂದು ಕೆಲವರು ಅಭಿಪ್ರಾಯ ತಿಳಿಸಿದರೆ, ಸೆಪ್ಟೆಂಬರ್‌ವರೆಗೆ ಕಾದು ನೋಡುವಂತೆ ಇನ್ನು ಕೆಲವರು ಸಲಹೆ ನೀಡಿದ್ದಾರೆ. ಟ್ರೇಸ್ ಮತ್ತು ಟ್ರ್ಯಾಕ್ ಹಾಗೂ ಟ್ರೀಟ್ ಸೂತ್ರವನ್ನು ಹೆಚ್ಚಾಗಿ ಅನುಸರಿಸುವಂತೆ ಪರಿಣತರು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿಲ್ಲ. ಹಾಗಂತ ನಾವು ಮೈಮರೆಯುವುದು ಬೇಡ. ಗ್ರಾಮೀಣ ಪ್ರದೇಶಗಳಲ್ಲಿ ಸಹ ಹೆಚ್ಚು ವ್ಯಾಕ್ಸಿನೇಷನ್‌ ಆಗಬೇಕು. ಅಗತ್ಯ ಬಿಗಿ ಕ್ರಮಗಳು ಅನಿವಾರ್ಯ. ಧಾರ್ಮಿಕ ಹಬ್ಬ ಹರಿದಿನಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅದ್ದೂರಿ ಸಮಾರಂಭಕ್ಕೆ ಬ್ರೇಕ್ ಹಾಕಬೇಕು. ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಕ್ರಮಜರುಗಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಜಿಲ್ಲಾವಾರು ಕೊವಿಡ್ ಅಂಕಿಅಂಶಗಳ ಮಾಹಿತಿ ಪಡೆದರು. ಇತರ ರಾಜ್ಯಗಳಿಂದ ಆಗಮಿಸುವವರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ಮಾಡಬೇಕು. ಹೆಚ್ಚಿಗೆ ಪಾಸಿಟಿವಿಟಿ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಆಟೋ, ಓಲಾ, ಊಬರ್, ಹೊಟೆಲ್​ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ದಿನಗೂಲಿ ಕೆಲಸ ಅವಲಂಬಿತರಿಗೆ ಯಾವುದೇ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು. ಸದ್ಯಕ್ಕೆ ಲಾಕ್​ಡೌನ್​ನಂಥ ಕಠಿಣ ಕ್ರಮ ಬೇಡ, ಅಗತ್ಯಬಿದ್ದರೆ ವೀಕೆಂಡ್ ಕರ್ಫ್ಯೂ ಮಾಡೋಣ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಕೊವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರು, ತಾಂತ್ರಿಕ ಸಲಹಾ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ಸದಸ್ಯರು, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಸಚಿವರಾದ ಡಾ. ಸಿಎನ್ ಅಶ್ವತ್ಥ ನಾರಾಯಣ, ಡಾ.ದೇವಿ ಪ್ರಸಾದ್ ಶೆಟ್ಟಿ, ಡಾ. ಎಂಕೆ ಸುದರ್ಶನ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಮುಂದಿನ ಎರಡು ವಾರಗಳ ಈಗಿರುವ ನಿಯಮಗಳನ್ನೇ ಮುಂದುವರಿಸಲು ಮುಖ್ಯಮಂತ್ರಿ ಸೂಚನೆ ನೀಡಿದರು. ಹೊಸದಾಗಿ ಯಾವುದೇ ನಿಯಮಗಳು ಜಾರಿಯಾಗುವುದಿಲ್ಲ. ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸುವಂತೆ ಸೂಚಿಸಲಾಯಿತು.

ಇದನ್ನೂ ಓದಿ: 

ಮೇಕೆದಾಟು ಯೋಜನೆ ಮಾಡುತ್ತೀರೋ, ಇಲ್ಲವೋ? ಕೋಡಿಹಳ್ಳಿ ಚಂದ್ರಶೇಖರ್ ವಾರ್ನಿಂಗ್

ಹಿಂದಿನ ಅನುಭವಗಳ ಮೇಲೆ ಕೊವಿಡ್ ನಿರ್ವಹಣೆಗೆ ಗಮನವಹಿಸಲಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

(CM Basavaraj Bommai says strict rules will be imposed yo curb covid 19 situation in Karnataka)

Published On - 5:35 pm, Sat, 14 August 21