ಸದನದಲ್ಲಿ ಏನಿಲ್ಲ ಏನಿಲ್ಲ ಅಂತ ಕೂಗಾಡಿದ ಬಿಜೆಪಿ ಶಾಸಕ ಸುನೀಲ ಕುಮಾರ ತಲೇಲಿ ಏನೂ ಇಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರಿಗೆ ಸಂಸದೀಯ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಮ್ಮ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅವರಲ್ಲಿ ಮೆದುಳನ್ನು ರಾಜಕೀಯದ ಮಂಜು ಆವರಿಸಿದೆ. ಕಾಮಾಲೆಯಾದವರಿಗೆ ಜಗತ್ತೆಲ್ಲ ಹಳದಿ ಕಾಣುತ್ತಂತೆ, ಹಾಗಿದೆ ಇವರ ಸ್ಥಿತಿ ಎಂದು ಅವರು ಹೇಳಿದರು.
ಬೆಂಗಳೂರು: ಬಜೆಟ್ ಮಂಡಿಸಿದ ಬಳಿಕ ಸಾಂಪ್ರದಾಯಿಕ ಸುದ್ದಿಗೋಷ್ಟಿಯಲ್ಲಿ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಿಜೆಪಿ ಶಾಸಕ ಸುನೀಲ ಕುಮಾರರನ್ನು (Sunil Kumar) ಲೇವಡಿ ಮಾಡಿದರು. ತಾನು ಸದನದಲ್ಲಿ ಬಜೆಟ್ ಭಾಷಣ (Budget speech) ಆರಂಭಿಸುತ್ತಿದ್ದಂತೆಯೇ ಸುನೀಲ ‘ಏನಿಲ್ಲ ಏನಿಲ್ಲ’ ಅಂತ ಕೂಗಾಡಲು ಆರಂಭಿಸಿದರು. 3,71,383 ಕೋಟಿ ರೂ. ಗಾತ್ರದ ಬಜೆಟ್ ತಾನು ಮಂಡಿಸುತ್ತಿರಬೇಕಾದರೆ ಇವರು ‘ಏನಿಲ್ಲ ಏನಿಲ್ಲ‘ ಅನ್ನುತ್ತಾರೆ, ಅಸಲಿಗೆ ಅವರ ತಲೆಯಲ್ಲಿ ಏನೂ ಇಲ್ಲ! ಎಂದು ಸಿದ್ದರಾಮಯ್ಯ ಹೇಳಿದಾಗ ಅವರ ಎಡಭಾಗದಲ್ಲಿ ಕುಳಿತಿದ್ದ ಡಿಕೆ ಶಿವಕುಮಾರ್ ಮುಗುಳ್ನಕ್ಕರು. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರಿಗೆ ಸಂಸದೀಯ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಮ್ಮ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. ಅವರಲ್ಲಿ ಮೆದುಳನ್ನು ರಾಜಕೀಯದ ಮಂಜು ಆವರಿಸಿದೆ. ಕಾಮಾಲೆಯಾದವರಿಗೆ ಜಗತ್ತೆಲ್ಲ ಹಳದಿ ಕಾಣುತ್ತಂತೆ, ಹಾಗಿದೆ ಇವರ ಸ್ಥಿತಿ ಎಂದರು. ಅವರು ಟೀಕೆ ಮಾಡಲಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವರಿಗೆ ಟೀಕಿಸುವ ಹಕ್ಕಿದೆ, ಆದರೆ ನಾವು ಮಾಡುವ ಟೀಕೆ ಆರೋಗ್ಯಕರವಾಗಿರಬೇಕು, ಕೇವಲ ಟೀಕೆ ಮಾಡುವುದಕ್ಕೋಸ್ಕರ ಟೀಕೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ