Karnataka Budget 2024: ಸಿದ್ದರಾಮಯ್ಯ ಬಜೆಟ್​ ಕೊಂಡಾಡಿದ ಬಿಜೆಪಿ ಶಾಸಕ ಸೋಮಶೇಖರ್​

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಶುಕ್ರವಾರ) 2024-25ನೇ ಸಾಲಿನ 3,71,383 ಕೋಟಿ ರೂ. ಗಾತ್ರದ ಬಜೆಟ್‌ ಮಂಡನೆ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಒಟ್ಟು 3,71,383 ಕೋಟಿ ಗಾತ್ರದ ಬಜೆಟ್​ ಅನ್ನು ಸುಮಾರು 3 ಗಂಟೆ 14 ನಿಮಿಷಗಳ ಕಾಲ ಸುದೀರ್ಘವಾಗಿ ಮಂಡಿಸಿದ್ದಾರೆ. ಇನ್ನು 2024-25ರ ಸಾಲಿನ ಆಯವ್ಯಯಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಕಿಡಿಕಾರಿದ್ದಾರೆ. ಇದರ ಮಧ್ಯೆ ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್​​ ಸಿದ್ದರಾಮಯ್ಯ ಬಜೆಟ್ ಬಗ್ಗೆ​ ಕೊಂಡಾಡಿದ್ದಾರೆ.

Karnataka Budget 2024: ಸಿದ್ದರಾಮಯ್ಯ ಬಜೆಟ್​ ಕೊಂಡಾಡಿದ ಬಿಜೆಪಿ ಶಾಸಕ ಸೋಮಶೇಖರ್​
ಸಿದ್ದರಾಮಯ್ಯ, ಸೋಮಶೇಖರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 16, 2024 | 5:11 PM

ಬೆಂಗಳೂರು, (ಫೆಬ್ರವರಿ 16): ಮುಖ್ಯಮಂತ್ರಿ ಸಿದ್ದರಾಮಯ್ಯವರ (Siddaramaiah) 2024-25ನೇ ಸಾಲಿನ ಬಜೆಟ್​ ಮಂಡನೆ (Karnataka Budget 2024)  ಮಾಡಿದ್ದು, ಈ ಬಜೆಟ್​ನಲ್ಲಿ ಏನು ಇಲ್ಲ ಎಂದು ವಿಪಕ್ಷದ ನಾಯಕರು ಟೀಕಿಸಿದ್ದಾರೆ. ಆದ್ರೆ, ಬಿಜೆಪಿ ಶಾಸಕ ಎಸ್​​ಟಿ ಸೋಮಶೇಖರ್(ST Somashekhar)​​ ಅವರು ಸಿದ್ದರಾಮಯ್ಯ ಬಜೆಟ್​ಅನ್ನು ಕೊಂಡಾಡಿದ್ದು, ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಬಜೆಟ್​ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಸಂಬಂಧಿಸಿದಂತೆ ಉತ್ತಮ ಬಜೆಟ್​ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ಗೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಗೆ ಕುಡಿಯುವ ನೀರು, ಕಸ ವಿಲೇವಾರಿ. ಟ್ರಾಫಿಕ್​​​​, ವೈಟ್​ ಟ್ಯಾಪಿಂಗ್​​​, ಫ್ಲೈಓವರ್​ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸರ್ಕಾರದ ಬಜೆಟ್​ಗೆ ಅಭಿನಂದನೆ ಸಲ್ಲಿಸುವೆ. ಈ ಬಜೆಟ್​ಗೆ ವಿರೋಧ ಮಾಡುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ: ಸಿದ್ದು ಬಜೆಟ್​ಗೆ ಯಡಿಯೂರಪ್ಪ ಕೆಂಡಾಮಂಡಲ

ಬೆಂಗಳೂರಿಗೆ ಸಂಬಂಧಿಸಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ಕುಡಿಯುವ ನೀರು, ಕಸ ವಿಲೇವಾರ, ಟ್ರಾಫಿಕ್, ವೈಟ್ ಟ್ಯಾಪಿಂಗ್, ಫ್ಲೈ ಓವರ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ ಇನ್ನು ಪೂರ್ಣ ಪ್ರಮಾಣದ ಬಜೆಟ್ ನೋಡಿಲ್ಲ. ಬಜೆಟ್ ವಿರೋಧ ಮಾಡುವವರಿಗೆ ನಾನು ಏನೂ ಹೇಳುವುದಿಲ್ಲ. ಟೀಕೆ ಮಾಡುವುದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದರು.

ಎಲ್ಲಾ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಸಿದ್ದರಾಮಯ್ಯನವರ ಬಜೆಟ್​ ಅನ್ನು ಟೀಕಿಸುತ್ತಿರುವಾಗ ಸೋಮಶೇಖರ್ ಮಾತ್ರ ಅಭಿನಂದನೆ ತಿಳಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಸೋಮಶೇಖರ್ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದು, ಕಾಂಗ್ರೆಸ್ ಸರ್ಕಾರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಸೋಮಶೇಖರ್ ಅವರ ನಡೆ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ