ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿತ; ಅದೃಷ್ಟವಶಾತ್ ತಪ್ಪಿದ ಅನಾಹುತ
ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಶಾಲೆಯೊಂದರ ಮೇಲ್ಚಾವಣಿ ಕುಸಿದು ಬೀಳುವ ಪರಿಸ್ಥಿಯಲ್ಲಿದ್ದು ದಿನನಿತ್ಯ ವಿದ್ಯಾರ್ಥಿಗಳು ಆತಂಕದಲ್ಲೇ ತರಗತಿಗೆ ಹಾಕರಾಗುತ್ತಿರುವ ವಾತಾವರಣ ನಿರ್ಮಾಣವಾಗಿದೆ.
ರಾಯಚೂರು: ತಾಲೂಕಿನ ಜೇಗರಕಲ್ ಗ್ರಾಮದ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬೀಳುವ ಪರಿಸ್ಥಿಯಲ್ಲಿದ್ದು ದಿನನಿತ್ಯ ವಿದ್ಯಾರ್ಥಿಗಳು ಆತಂಕದಲ್ಲೇ ತರಗತಿಗೆ ಹಾಕರಾಗುತ್ತಿರುವ ವಾತಾವರಣ ನಿರ್ಮಾಣವಾಗಿದೆ. 2011-2012ರಲ್ಲಿ ನಿರ್ಮಾಣವಾಗಿದ್ದ ಸರ್ಕಾರಿ ಶಾಲೆ ಇದಾಗಿದ್ದು, ಕೆವಲ 10 ವರ್ಷಕ್ಕೆ ಶಾಲೆ ಕಟ್ಟಡ ಕುಸಿದುಬೀಳುವ ಹಂತಕ್ಕೆ ಬಂದು ತಲುಪಿದೆ. ಕಟ್ಟಡ ಕುಸಿಯುತ್ತಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂದು ಆರೋಪಿಸಲಾಗುತ್ತಿದೆ. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗಾಗಲೇ 2-3 ಬಾರೀ ಮೇಲ್ಛಾವಣಿ ಕುಸಿದುಬಿದ್ದಿದೆ. ರಜೆ ಇದ್ದಾಗ ಒಮ್ಮೆ ಮೇಲ್ಛಾವಣಿ ಕುಸಿದಿದ್ದು, ಮತ್ತೊಮ್ಮೆ ತರಗತಿ ನಡೆಯುವಾಗಲೇ ಕುಸಿದುಬಿದ್ದಿತ್ತು. ನಿತ್ಯ ಮಕ್ಕಳು ಊಟ ಮಾಡುವ ಸ್ಥಳದಲ್ಲೇ ಕಟ್ಟಡ ಕುಸಿಯುತ್ತಿದ್ದು, ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗಳಿಗೆ ಪ್ರಾಣಹಾನಿಯಾಗಿಲ್ಲ. ಕಟ್ಟಡ ಕುಸಿತ ಭೀತಿಯಿಂದಾಗಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದ್ದು, ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.
ಇನ್ನೂ ಶಾಲೆಯ ಶಿಕ್ಷಕಿಯೊಬ್ಬರು ಮಾತನಾಡಿದ್ದು, ಶಾಲಾ ಕಟ್ಟಡ ಆವರಣದಲ್ಲಿ ಶುಕ್ರವಾರದಂದ್ದು ಮೇಲ್ಛಾವಣಿ ಕುಸಿದು ಬಿದ್ದಿದೆ. ಅಂದು ನಮ್ಮ ಶಾಲೆ ರಜೆಯಿತ್ತು. ಆದರೆ ದಿನನಿತ್ಯ ಮಕ್ಕಳು ಅದೇ ಕಟ್ಟಡದ ಕೆಳಗಡೆ ಕೂತು ಬಿಸಿ ಊಟ ಮಾಡುತ್ತಾರೆ. ಆ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದರೇ ಯಾರು ಹೊಣೆ ಎಂದಿದ್ದಾರೆ. ಇದಕ್ಕೆ ಸಂಬಂಧ ಪಟ್ಟಿರುವರು ಬೇಗ ಕ್ರಮಕೈಗೊಂಡು ಶಾಲೆ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಶಾಲೆಗಳ ಪುನರಾರಂಭದ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿರ್ಧಾರ:
15 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್-19 (Covid-19) ವಿರುದ್ಧ ವ್ಯಾಕ್ಸಿನೇಷನ್ ಡ್ರೈವ್ (Vaccination drive) ವೇಗವನ್ನು ಪಡೆಯುತ್ತಿರುವುದರಿಂದ ಶಾಲೆಗಳನ್ನು ಪುನರಾರಂಭಿಸುವ (Reopening of schools)ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಲಹೆಯನ್ನು ನೀಡುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಷ್ಟ್ರವ್ಯಾಪಿ ಶಾಲೆಗಳನ್ನು ಪುನಃ ತೆರೆಯುವ ಮತ್ತು ವಿಧಾನಗಳ ಕುರಿತು ಕೆಲಸ ಮಾಡುವ ಮಾರ್ಗಗಳನ್ನು ಸೂಚಿಸಲು ರಾಷ್ಟ್ರೀಯ ತಜ್ಞರ ಗುಂಪನ್ನು ಕೇಳಿದ್ದಾರೆ ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಕೊವಿಡ್-19 ಎಲ್ಲಾ ವಯೋಮಾನದ ಮಕ್ಕಳ ಮೇಲೆ ಪರಿಣಾಮ ಬೀರಿದೆ.
ಆದಾಗ್ಯೂ, ಮಕ್ಕಳಲ್ಲಿ ಮರಣ ಪ್ರಮಾಣ ಮತ್ತು ರೋಗದ ತೀವ್ರತೆಯು ಅತ್ಯಲ್ಪವಾಗಿದೆ. ಮಕ್ಕಳು ಶಾಲೆಗೆ ಮರಳಲು ಇದು ಉತ್ತಮ ಸಮಯ ಎಂದು ಆರೋಗ್ಯ ತಜ್ಞರು ಭಾವಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಹೇಳಿರುವುದಾಗಿ ಎಎನ್‌ಐ ವರದಿಯಲ್ಲಿ ಉಲ್ಲೇಖಿಸಿದೆ. ಮಾರ್ಚ್ 2020 ರಲ್ಲಿ ಕೊವಿಡ್ -19 ಏಕಾಏಕಿ ಪ್ರಾರಂಭವಾದಾಗಿನಿಂದ ತರಗತಿಗಳು ಹೆಚ್ಚಾಗಿ ಮುಚ್ಚಲ್ಪಟ್ಟಿವೆ. ಕೆಲವು ರಾಜ್ಯಗಳು ತಮ್ಮ ಲಸಿಕೆ ಹಾಕದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ವ್ಯಾಪಕವಾದ ಆತಂಕದ ನಡುವೆ ಭಾಗಶಃ ಶಾಲೆಗಳನ್ನ ತೆರೆದಿವೆ. ಹೆಚ್ಚು ಸಾಂಕ್ರಾಮಿಕವಾದ ಒಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯ ಮಧ್ಯೆ 15-17 ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಿದ ನಂತರ ಶಾಲೆಗಳನ್ನು ಪುನಃ ತೆರೆಯಲು ಕೇಂದ್ರವು ಬಯಸಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:
ಶಾಲೆಗಳ ಪುನರಾರಂಭದ ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಲಹೆ ನೀಡುವ ಸಾಧ್ಯತೆ: ವರದಿ