ವಿವಾದಿತ ಕ್ಲಾಕ್​ ಟವರ್​ಗೆ ಬಣ್ಣ; ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಸಿದ್ಧತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 19, 2022 | 12:08 PM

ಟವರ್​ಗೆ ತ್ರಿವರ್ಣ ಧ್ವಜದ ಬಣ್ಣ ಹೊಡೆದು ನಂತರ ಟವರ್ವ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಸ್ಥಳಿಯ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಕಾರ್ಯ ನಡೆಯಿತು.

ಕೋಲಾರ: ಕೋಲಾರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಹಾರಿಸುವ ವಿಚಾರ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ಕ್ಲಾಕ್ ಟವರ್ (Clock Tower) ​ಗೆ ಬಣ್ಣ ಬಳಿಯುವ ಕಾರ್ಯ ಪೂರ್ಣವಾಗಿದೆ. ಜಿಲ್ಲಾಡಳಿತದಿಂದ ಟವರ್​ಗೆ ಪೂರ್ತಿ ಬಳಿ ಬಣ್ಣ ಹೊಡೆಯಲಾಗಿದೆ. ಟವರ್​ಗೆ ತ್ರಿವರ್ಣ ಧ್ವಜದ ಬಣ್ಣ ಹೊಡೆದು ನಂತರ ಟವರ್ವ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ. ಸ್ಥಳಿಯ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಕಾರ್ಯ ನಡೆದಿದ್ದು, ಸ್ಥಳದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಎಸ್ಪಿ, ಡಿ.ದೇವರಾಜ್, ನಗರಸಭೆ ಆಯುಕ್ತ ಪ್ರಸಾದ್ ಮೊಕ್ಕಂ ಹೂಡಿದ್ದರು. ಸದ್ಯ ಕ್ಲಾಕ್ ಟವರ್ ವೃತ್ತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಟವರ್ ಸುತ್ತ ಪೊಲೀಸರು ನಾಕಬಂಧಿ ಹಾಕಿದ್ದಾರೆ. ಇದೇ ವೇಳೆ ಕ್ಲಾಕ್ ಟವರ್​ನಲ್ಲಿ ಬಿಗಿವಿನ‌ ವಾತಾವರಣವಿದ್ದು, ಸ್ಥಳದಲ್ಲಿ ನೂರಾರು ಯುವಕರು ಜಮಾಯಿಸಿದ್ದರು. ಟವರ್ ಬಣ್ಣ ಬದಲಾಗುತ್ತಿದ್ದಂತೆ ಜನರ ಜಮಾವಣೆ ಹೆಚ್ಚಾಗುತ್ತಿದ್ದು, ಪೊಲೀಸರು ಜನರನ್ನು ಚದುರಿಸಿದ್ದಾರೆ.

ಇದನ್ನೂ ಓದಿ:

ಚಿಕ್ಕಬಳ್ಳಾಪುರದಲ್ಲಿ RRR ಜಾತ್ರೆ; ಬೆಂಗಳೂರಿಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಬಗ್ಗೆ ಇಲ್ಲಿದೆ ಮಾಹಿತಿ

ಕಂಡು ಕೇಳರಿಯದಂತಹ ‘ಆರ್​ಆರ್​ಆರ್​’ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ಸಿದ್ಧತೆ: ಇಲ್ಲಿದೆ ವಿಡಿಯೋ