ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಿ.ಆರ್.ಪಿ.ಎಫ್ ಯೋಧ
ಸಿಲಿಂಡರ್ ಬ್ಲಾಸ್ಟ್ ಹಿನ್ನಲೆ ಒಬ್ಬರಿಗೆ ಗಂಭೀರ ಗಾಯವಾದಂತಹ ಘಟನೆ ನಡೆದಿದೆ. ಚಂದ್ರಾಲೇಔಟ್ ಬಳಿಯ ಗಂಗೊಂಡನಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಮೊಹಮ್ಮದ್ 64 ವರ್ಷ ಗಾಯಗೊಂಡ ವ್ಯಕ್ತಿ.
ಬಾಗಲಕೋಟೆ: ನೇಣು ಹಾಕಿಕೊಂಡು ಸಿ.ಆರ್. ಪಿ.ಎಫ್ (CRPF SOLDIER) ಯೋಧ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ನಾಗಪ್ಪ ಗುಂಡಕಲ್(31) ಮೃತ ಯೋಧ. ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ತಮ್ಮ ಹೊಲದ ಬೇವಿನಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕತೆ, ಖಿನ್ನತೆಯಿಂದ ಬಳಲುತ್ತಿದ್ದ ಎಂಬ ಮಾಹಿತಿಯಿದೆ. 12 ವರ್ಷದಿಂದ ಬೆಂಗಳೂರಿನ ಯಲಹಂಕದಲ್ಲಿ ಸಿ.ಆರ್.ಪಿ.ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹದಿನೈದು ದಿನ ರಜೆ ಪಡೆದು ಊರಿಗೆ ಬಂದಿದ್ದು, ನಾಳೆ ಬೆಂಗಳೂರಿಗೆ ಪುನಃ ಕರ್ತವ್ಯಕ್ಕೆ ಹಾಜರಾಗಲಿದ್ದರು. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇತರೇ ಸುದ್ದಿಗಳು:
ಬೆಂಗಳೂರು: ಸಿಲಿಂಡರ್ ಬ್ಲಾಸ್ಟ್ ಹಿನ್ನಲೆ ಒಬ್ಬರಿಗೆ ಗಂಭೀರ ಗಾಯವಾದಂತಹ ಘಟನೆ ನಡೆದಿದೆ. ಚಂದ್ರಾಲೇಔಟ್ ಬಳಿಯ ಗಂಗೊಂಡನಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಮೊಹಮ್ಮದ್ 64 ವರ್ಷ ಗಾಯಗೊಂಡ ವ್ಯಕ್ತಿ. ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಮೊಹಮ್ಮದ್, ಟೀ ಮಾಡಲು ಸ್ಟವ್ ಆನ್ ಮಾಡಿದ್ದಾನೆ. ಸಿಲಿಂಡರ್ ಪಕ್ಕದಲ್ಲೇ ನಿಂತು ಸಿಗರೇಟ್ ಸೇದುತ್ತಿದ್ದು, ಹೀಗಾಗಿ ಸಿಲಿಂಡರ್ಗೆ ಬೆಂಕಿ ತಗಲಿ ಸಿಲುಂಡರ್ ಬ್ಲಾಸ್ಟ್ ಆಗಿದೆ. ತಕ್ಷಣ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀದರ್: ಚಾಲಕನ ನಿಯಂತ್ರಣ ತಪ್ಪಿಖಾಸಗಿ ಎಸ್ಆರ್ಎಸ್ ಬಸ್ ಪಲ್ಟಿಯಾಗಿ 8ಜನರಿಗೆ ಗಾಯವಾದಂತಹ ಘಟನೆ ನಡೆದಿದೆ. ಬೀದರ್ ತಾಲೂಕಿನ ಅಣದೂರು ವಾಡಿ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಬೀದರ್ಗೆ ಬರುತ್ತಿದ್ದ ಬಸ್ನಲ್ಲಿ 6 ಜನ ಪ್ರಯಾಣಿಕರಿದ್ದರು. 6 ಜನ ಪ್ರಯಾಣಿಕರು ಚಾಲಕ ನಿರ್ವಾಹಕ ಸೇರಿ 8 ಜನರಿಗೆ ಗಾಯವಾಗಿದೆ. ಚಾಲಕನಿಗೆ ನಿರ್ವಾಹಕನಿಗೆ ಗಂಭೀರ ಗಾಯವಾಗಿದ್ದು, ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಬೈಕ್ ಸವಾರನನ್ನ ಅಪಘಾತದಿಂದ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದ್ದು, ಗಾಯಾಳುಗಳನ್ನ ಬೀದರ್ನ ಬ್ರೀಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು: ಆನೆ ದಂತಗಳನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಸಿ.ಕೆ ಅಚ್ಚುಕಟ್ಟು ಪೊಲೀಸರಿಂದ ಮೂರು ಮಂದಿ ಸ್ಮಗ್ಲರ್ಗಳ ಬಂಧನ ಮಾಡಲಾಗಿದೆ. ಚಂದೇಗೌಡ, ಸೋಮಲಿಂಗಪ್ಪ, ಪ್ರವೀಣ್ ಗುಳೆದ್ ಬಂಧಿತ ಆರೋಪಿಗಳು. ಬಂಧಿತರಿಂದ 29 ಕೆಜಿ ಹಾಗೂ 16 ಕೆಜಿ ತೂಕದ ಆನೆ ದಂತ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕರಣ ದಾಖಲು ಮಾಡಲಾಗಿದೆ.
ವಿಜಯಪುರ: ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಜಮೀನುಗಳಿಗೆ ಬೆಂಕಿ ಬಿದ್ದಿದೆ. ಅಪಾರ ಪ್ರಮಾಣದ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದ ಬಳಿ ಘಟನೆ ನಡೆದಿದೆ. ಸುಮಾರು 19 ಎಕರೆ ಕಬ್ಬು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಒಟ್ಟು ನಾಲ್ಕು ಜನ ರೈತರಿಗೆ ಸೇರಿದ 19 ಎಕರೆ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಆಲಗೂರು ಗ್ರಾಮದ ರೈತರಾದ ಅಹ್ಮದ್ ಭಾಷಾ ನಾಯ್ಕೋಡಿ, ಲಾಲಸಾಬ್ ನಾಯ್ಕೋಡಿ, ಅಕ್ಬರ್ ನಾಯ್ಕೋಡಿ, ದಾವಲಸಾಬ್ ನಾಯ್ಕೋಡಿ ಎಂಬುವವರಿಗೆ ಸೇರಿದ ಕಬ್ಬು. ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಕೊಲೆ ನಡೆಯುವುದಕ್ಕು ಮೊದಲು ಸುಫಾರಿ ತೆಗೆದುಕೊಂಡಿದ್ದ ಅರೋಪಿಗಳು ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಕಿಡ್ನ್ಯಾಪ್ ಮಾಡಿಸಿ ಕೊಲೆಗೆ ಸುಫಾರಿ ನೀಡಲಾಗಿತ್ತು. ರೌಡಿಶೀಟರ್ ಮಣಿ ಎಂಬಾತನಿಂದ ನೀಡಲಾಗಿದ್ದ ಸುಫಾರಿ, ತನ್ನ ಪತ್ನಿ ಜೊತೆ ಆಟೋಚಾಲಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ಹತ್ಯೆಗೆ ಸುಫಾರಿ ನೀಡಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ಅಪಹರಿಸಿ ಹತ್ಯೆ ಮಾಡಲು ಸೂಚಿಸಿದ್ದ ಆರೋಪಿ, ಆಟೋ ಚಾಲಕನನ್ನ ಅಪಹರಿಸಿ ತನ್ನ ಸ್ನೇಹಿತನ ಗ್ಯಾರೇಜ್ಗೆ ಮಣಿಯ ಒಂಬತ್ತು ಜನ ಹುಡುಗರು ಕರೆದುಕೊಂಡು ಹೋಗಿದ್ದಾರೆ. ನಂತರ ಕೈಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪಿ, ಈ ಸಂಬಂಧ ಆಟೋ ಚಾಲಕನ ಸಹೋದರ ಆರ್ ಎಂ ಸಿ ಯಾರ್ಡ್ ಗೆ ದೂರು ನೀಡಿದ್ದ. ಹಂತಕರ ಬಗ್ಗೆ ಸಿಸಿಬಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆ ದಾಳಿ ನಡೆಸಿ 9 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ. ಶ್ರೀರಾಂಪುರ ರೌಡಿ ಶೀಟರ್ ಆಂಡ್ರೋಸ್ ಎಂಬಾತನನ್ನ ಹತ್ಯೆ ಮಾಡಿ ಮಣಿ ಐದು ವರ್ಷದಿಂದ ಜೈಲಿನಿಲ್ಲಿದ್ದಾನೆ. ತನ್ನ ಸ್ವಂತ ಪತ್ನಿಯ ಜೊತೆ ಆಟೋ ಚಾಲಕನಿಗೆ ದೈಹಿಕ ಸಂಬಂಧ ಇದೆ ಎಂಬ ಶಂಕೆ ಹಿನ್ನಲೆ, ಜೈಲಿನಲ್ಲೇ ಕೂತು ರೌಡಿಶೀಟರ್ ಮಣಿ ಸ್ಕೆಚ್ ಹಾಕಿದ್ದ. ಸಿಸಿಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಆಟೋ ಚಾಲಕನ ಜೀವ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ:
100 ಕೋಟಿ ರೂ. ದಾಟಿತು ‘ದಿ ಕಾಶ್ಮೀರ್ ಫೈಲ್ಸ್’ ಗಳಿಕೆ; 8ನೇ ದಿನವೂ ಭರ್ಜರಿ ಕಲೆಕ್ಷನ್