OTT Release: ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ; ಯಾವೆಲ್ಲಾ ಚಿತ್ರಗಳು ರಿಲೀಸ್? ಟ್ರೇಲರ್ ಸಹಿತ ಪರಿಚಯ ಇಲ್ಲಿದೆ

Jalsa | Salute: ಹೋಳಿ ಹಬ್ಬ ಶುಕ್ರವಾರವಿದ್ದ ಕಾರಣ, ಈ ವಾರ ಬರೋಬ್ಬರಿ 9ಕ್ಕೂ ಹೆಚ್ಚು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಸಿನಿಮಾ ಪ್ರೇಮಿಗಳಿಗೆ ಸಹಾಯಕವಾಗುವಂತೆ ಇಲ್ಲಿ ಚಿತ್ರದ ಕಿರು ಪರಿಚಯ ಹಾಗೂ ಟ್ರೇಲರ್​ಗಳನ್ನು ನೀಡಲಾಗಿದೆ.

OTT Release: ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ; ಯಾವೆಲ್ಲಾ ಚಿತ್ರಗಳು ರಿಲೀಸ್? ಟ್ರೇಲರ್ ಸಹಿತ ಪರಿಚಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Mar 19, 2022 | 12:28 PM

ಪ್ರತಿ ಶುಕ್ರವಾರ ಸಿನಿಮಾ ಪ್ರೇಮಿಗಳಿಗೆ ಸುಗ್ಗಿಯ ವಾತಾವರಣ. ಕಾರಣ ಈಗ ಚಿತ್ರಮಂದಿರಗಳ ಜತೆಜತೆಗೆ ಒಟಿಟಿಯಲ್ಲೂ (OTT Release) ಚಿತ್ರಗಳು ರಿಲೀಸ್ ಆಗುತ್ತವೆ. ಕೆಲವು ಚಿತ್ರಗಳು ಚಿತ್ರಮಂದಿರಗಳ ನಂತರ ಒಟಿಟಿಯಲ್ಲಿ ತೆರೆಕಂಡರೆ, ಮತ್ತೆ ಕೆಲವು ಚಿತ್ರಗಳು ನೇರವಾಗಿ ಒಟಿಟಿಯಲ್ಲೇ ಬಿಡುಗಡೆಯಾಗುತ್ತವೆ. ಹಲವಾರು ಒಟಿಟಿಗಳಲ್ಲಿ, ಹಲವಾರು ಚಿತ್ರಗಳು ಒಂದೇ ದಿನ ತೆರೆಕಂಡಾಗ ಯಾವ ಚಿತ್ರ ವೀಕ್ಷಿಸಬೇಕು ಎಂಬ ಗೊಂದಲ ಕಾಡುವುದು ಸಾಮಾನ್ಯ. ಹೋಳಿ ಹಬ್ಬ ಶುಕ್ರವಾರವಿದ್ದ ಕಾರಣ, ಈ ವಾರ ಬರೋಬ್ಬರಿ 9ಕ್ಕೂ ಹೆಚ್ಚು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಸಿನಿಮಾ ಪ್ರೇಮಿಗಳಿಗೆ ಸಹಾಯಕವಾಗುವಂತೆ ಇಲ್ಲಿ ಚಿತ್ರದ ಕಿರು ಪರಿಚಯ ಹಾಗೂ ಟ್ರೇಲರ್​ಗಳನ್ನು ನೀಡಲಾಗಿದೆ. ಇದನ್ನು ನೋಡಿ ಯಾವ ಚಿತ್ರಗಳನ್ನು ವೀಕ್ಷಿಸಬೇಕು, ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ನಿಮ್ಮ ಆಯ್ಕೆ.

ಇಲ್ಲಿದೆ ಈ ವಾರ ಒಟಿಟಿಯಲ್ಲಿ ತೆರೆಕಂಡ ಚಿತ್ರಗಳ ಪಟ್ಟಿ:

ಜಲ್ಸಾ/ ಅಮೆಜಾನ್ ಪ್ರೈಮ್:

ಹಿಟ್​ ಆಂಡ್ ರನ್ ಕೇಸ್​​ನ ಬೆನ್ನುಬೀಳುವ ಪತ್ರಕರ್ತೆಯೊಬ್ಬಳ ಕತೆಯನ್ನು ‘ಜಲ್ಸಾ’ ಒಳಗೊಂಡಿದೆ. ಇದರಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವುದು ವಿದ್ಯಾ ಬಾಲನ್. ಮತ್ತೋರ್ವ ಖ್ಯಾತ ನಟಿ ಶೆಫಾಲಿ ಶಾ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹಿಂದಿ ಭಾಷೆಯ ಚಿತ್ರ ಇದಾಗಿದೆ.

ಜಲ್ಸಾ ಟ್ರೇಲರ್ ಇಲ್ಲಿದೆ:

ಸಲ್ಯೂಟ್/ ಸೋನಿ ಲಿವ್:

ಬಿಡುಗಡೆಗೂ ಮುನ್ನ ಈ ಚಿತ್ರ ಸ್ವಲ್ಪ ವಿವಾದಾತ್ಮಕ ಕಾರಣಗಳಿಗೆ ಸುದ್ದಿಯಾಗಿತ್ತು. ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿದ್ದ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಇದಕ್ಕೆ ಕಾರಣ. ಅದೇನೇ ಇರಲಿ. ಮಲಯಾಳಂ ನಟ ದುಲ್ಖರ್ ಸಲ್ಮಾನ್​ಗೆ ದೇಶಾದ್ಯಂತ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇದೀಗ ಮಾಸ್ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದು, ಮರ್ಡರ್ ಮಿಸ್ಟರಿಯನ್ನು ಭೇದಿಸುವ ಖಡಕ್ ಪೊಲೀಸ್ ಆಫೀಸರ್ ಆಗಿ ಬಣ್ಣಹಚ್ಚಿದ್ದಾರೆ. ಮಲಯಾಳಂ ಭಾಷೆಯ ಚಿತ್ರ ಇದಾಗಿದೆ.

ಸಲ್ಯೂಟ್ ಟ್ರೇಲರ್ ಇಲ್ಲಿದೆ:

ಬ್ಲಡಿ ಬ್ರದರ್ಸ್/ ಜೀ5:

ಜೈದೀಪ್ ಅಹ್ಲಾವತ್ ಮತ್ತು ಮೊಹಮ್ಮದ್ ಜೀಶನ್ ಅಯ್ಯುಬ್ ಸಹೋದರರಾಗಿ ನಟಿಸಿರುವ ಹಿಂದಿ ಸೀರೀಸ್ ಇದಾಗಿದೆ. ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸೋದರ ಸಿಲುಕಿದ ನಂತರ ನಡೆಯುವ ಕತೆಯನ್ನು ಈ ಸೀರೀಸ್ ಒಳಗೊಂಡಿದೆ.

ಬ್ಲಡಿ ಬರ್ದರ್ಸ್ ಟ್ರೇಲರ್ ಇಲ್ಲಿದೆ:

ಅಪಹರಣ್ 2/ ವೂಟ್ ಸೆಲೆಕ್ಟ್:

2018ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಹಿಂದಿ ಸೀರೀಸ್​ನ ಸೀಕ್ವೆಲ್ ಅಪಹರಣ್ 2. ಕಿಡ್ನ್ಯಾಪ್ ಪ್ರಕರಣವನ್ನು ಭೇದಿಸುತ್ತಾ ಪೊಲೀಸ್ ಆಫೀಸರ್ ರುದ್ರ ಥೈಲ್ಯಾಂಡ್​ಗೆ ತೆರಳುವ ಕತೆಯನ್ನು ಈ ಸೀರೀಸ್ ಹೊಂದಿದೆ.

View this post on Instagram

A post shared by Arunoday Singh (@sufisoul)

ಲಲಿತಂ ಸುಂದರಂ/ ಡಿಸ್ನೆ+ ಹಾಟ್​​ಸ್ಟಾರ್

ಮಲಯಾಳಂನ ಖ್ಯಾತ ನಟರ ದಂಡೇ ಇರುವ ಕಾಮಿಡಿ ಡ್ರಾಮಾ ಚಿತ್ರವಿದು. ಬಿಜು ಮೆನನ್, ಮಂಜು ವಾರಿಯರ್, ಸೈಜು ಕುರುಪ್ ಮೊದಲಾದವರು ಕಾಣಿಸಿಕೊಂಡಿರುವ ಈ ಚಿತ್ರವು ತಾಯಿ ನಿಧನ ಹೊಂದಿದ ನಂತರ ಮಕ್ಕಳು ಒಂದಾಗುವ ಮತ್ತು ಆಕೆಯ ಕೊನೆಯ ಆಸೆ ಪೂರೈಸುವ ಕತೆಯನ್ನು ಒಳಗೊಂಡಿದೆ.

ಲಲಿತಂ ಸುಂದರಂ ಟ್ರೇಲರ್:

‘ಎಟರ್ನಲಿ ಕನ್ಫ್ಯೂಸ್ಟ್ ಆಂಡ್ ಈಗರ್ ಫಾರ್ ಲವ್’/ ನೆಟ್​ಫ್ಲಿಕ್ಸ್:

ಇಂಗ್ಲೀಸ್ ಕಾಮಿಡಿ ಸೀರೀಸ್ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ. ಫರ್ಹಾನ್ ಅಖ್ತರ್ ಹಾಗೂ ಜೋಯಾ ಅಖ್ತರ್ ನಿರ್ಮಿಸಿರುವ ಈ ಸೀರೀಸ್ ಇಂಟ್ರಾವರ್ಟ್ ವ್ಯಕ್ತಿಯೊಬ್ಬನ ಪ್ರೀತಿ ಹಾಗೂ ಯುವತಿಯರೊಂದಿಗೆ ಮಾತನಾಡಲು ಇರುವ ಹಿಂಜರಿಕೆ ಮೊದಲಾದ ಕತೆಯನ್ನು ಒಳಗೊಂಡಿದೆ.

ಟ್ರೇಲರ್ ಇಲ್ಲಿದೆ:

ವಿಂಡ್​ಫಾಲ್/ ನೆಟ್​ಫ್ಲಿಕ್ಸ್:

ಹಾಲಿವುಡ್​ನ ಕ್ರೈಂ ಥ್ರಿಲ್ಲರ್ ಸಿನಿಮಾವಿದು. ಕಳ್ಳನೊಬ್ಬ ಮಿಲಿಯನೇರ್ ಒಬ್ಬನ ಮನೆಯಲ್ಲಿ ಕದಿಯಲು ಹೋದಾಗ ಸಿಲುಕಿಕೊಳ್ಳುವ ಕತೆಯನ್ನು ಇದು ಕಟ್ಟಿಕೊಡುತ್ತದೆ.

ವಿಂಡ್​ಫಾಲ್ ಟ್ರೇಲರ್ ಇಲ್ಲಿದೆ:

ಹ್ಯೂಮನ್ ರಿಸೋರ್ಸಸ್/ ನೆಟ್​ಫ್ಲಿಕ್ಸ್:

ಇದು ಆನಿಮೇಟೆಡ್ ಸೀರೀಸ್ ಆಗಿದ್ದು, ಸೀರೀಸ್​ನ ಟ್ರೇಲರ್ ಇಲ್ಲಿದೆ:

ಇದನ್ನೂ ಓದಿ:

Vishal: ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್

Alia Bhatt: 29 ವರ್ಷದ ಆಲಿಯಾ ಬಹುಕೋಟಿಗಳ ಒಡತಿ! ನಟಿಯ ಒಟ್ಟು ಆಸ್ತಿ ಎಷ್ಟು?

Published On - 12:26 pm, Sat, 19 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ