100 ಕೋಟಿ ರೂ. ದಾಟಿತು ‘ದಿ ಕಾಶ್ಮೀರ್​ ಫೈಲ್ಸ್​’ ಗಳಿಕೆ; 8ನೇ ದಿನವೂ ಭರ್ಜರಿ ಕಲೆಕ್ಷನ್

The Kashmir Files box office collection: ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ 100 ಕೋಟಿ ರೂಪಾಯಿ ಗಳಿಸಿದೆ. 8ನೇ ದಿನ ಕಳೆಯುವುದರೊಳಗೆ ಶತಕೋಟಿ ರೂಪಾಯಿ ಕ್ಲಬ್​ ಸೇರಿ ಸಂಭ್ರಮಿಸಿದೆ.

100 ಕೋಟಿ ರೂ. ದಾಟಿತು ‘ದಿ ಕಾಶ್ಮೀರ್​ ಫೈಲ್ಸ್​’ ಗಳಿಕೆ; 8ನೇ ದಿನವೂ ಭರ್ಜರಿ ಕಲೆಕ್ಷನ್
ದಿ ಕಾಶ್ಮೀರ್ ಫೈಲ್ಸ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 19, 2022 | 12:18 PM

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ತಯಾರಾದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files) ಸೂಪರ್​ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಈ ಚಿತ್ರ ನಿರ್ಮಿಸುತ್ತಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಕಮಾಯಿ ಹೆಚ್ಚುತ್ತಿದೆ. ದೇಶದ ಅನೇಕ ನಗರಗಳಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ 8 ದಿನ ಕಳೆದರೂ ಕೂಡ ಅನೇಕ ಕಡೆಗಳಲ್ಲಿ ಈಗಲೂ ಹೌಸ್​ಫುಲ್​ ಪ್ರದರ್ಶನ ಆಗುತ್ತಿದೆ. ವಿವೇಕ್​ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಈ ಸಿನಿಮಾ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ. ಇದರಿಂದ ಕೂಡ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಕ್ಕಂತಾಗಿದೆ. ಪ್ರಭಾಸ್ (ರಾಧೆ ಶ್ಯಾಮ್), ಅಕ್ಷಯ್​ ಕುಮಾರ್ (ಬಚ್ಚನ್​ ಪಾಂಡೆ) ಮುಂತಾದ​ ಸ್ಟಾರ್​ ನಟ ಸಿನಿಮಾಗಳನ್ನು ಕೂಡ ಹಿಂದಿಕ್ಕಿ ‘ದಿ ಕಾಶ್ಮೀರ್​ ಫೈಲ್ಸ್​’ ಜಯಭೇರಿ ಬಾರಿಸುತ್ತಿದೆ. 8ನೇ ದಿನ ಈ ಸಿನಿಮಾ 19.15 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ಒಟ್ಟು ಕಮಾಯಿ (The Kashmir Files Total collection) 116.45 ಕೋಟಿ ರೂಪಾಯಿ ಆಗಿದೆ!

‘ದಿ ಕಾಶ್ಮೀರ್​ ಫೈಲ್ಸ್​’ ಮಾ.11ರಂದು ತೆರೆಕಂಡಿತು. ಅನುಪಮ್​ ಖೇರ್​, ಪಲ್ಲವಿ ಜೋಶಿ, ವಿಥುನ್​ ಚರ್ಕವರ್ತಿ, ಪುನೀತ್​ ಇಸ್ಸಾರ್​, ದರ್ಶನ್​ ಕುಮಾರ್​ ಮುಂತಾದವರು ನಟಿಸಿರುವ ಈ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದರು. ಅದರ ಪರಿಣಾಮವಾಗಿ ದೇಶಾದ್ಯಂತ ಈ ಚಿತ್ರದ ಬಗ್ಗೆ ಆಸಕ್ತಿ ಮೂಡುವಂತಾಯಿತು. ಅನೇಕ ರಾಜ್ಯಗಳ ರಾಜಕಾರಣಿಗಳು ಸಿನಿಮಾ ವೀಕ್ಷಿಸಿದರು. ಅದರಿಂದಾಗಿ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತು. ಪ್ರೇಕ್ಷಕರು ಮುಗಿಬಿದ್ದು ಈ ಸಿನಿಮಾವನ್ನು ನೋಡಲು ಆರಂಭಿಸಿದರು. 8ನೇ ದಿನ ಕಳೆಯುವುದರೊಳಗೆ ಈ ಚಿತ್ರ ಶತಕೋಟಿ ರೂಪಾಯಿ ಕ್ಲಬ್​ ಸೇರಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಆ ಬಳಿಕವಂತೂ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಕಮಾಲ್​ ಮಾಡುತ್ತಿದೆ. ಈ ಸಿನಿಮಾದ ಪ್ರತಿದಿನದ ಕಲೆಕ್ಷನ್​ ರಿಪೋರ್ಟ್​ ಇಲ್ಲಿದೆ:

1ನೇ ದಿನ: 3.55 ಕೋಟಿ ರೂಪಾಯಿ

2ನೇ ದಿನ: 8.50 ಕೋಟಿ ರೂಪಾಯಿ

3ನೇ ದಿನ: 15.10 ಕೋಟಿ ರೂಪಾಯಿ

4ನೇ ದಿನ: 15.05 ಕೋಟಿ ರೂಪಾಯಿ,

5ನೇ ದಿನ: 18 ಕೋಟಿ ರೂಪಾಯಿ

6ನೇ ದಿನ: 19.05 ಕೋಟಿ ರೂಪಾಯಿ

7ನೇ ದಿನ: 18.05 ಕೋಟಿ ರೂಪಾಯಿ

8ನೇ ದಿನ: 19.15 ಕೋಟಿ ರೂಪಾಯಿ

ಯಾವುದೇ ಕಮರ್ಷಿಯಲ್​ ಅಂಶಗಳು ಇಲ್ಲದ ಈ ಸಿನಿಮಾ ಈ ಪರಿ ಕಲೆಕ್ಷನ್​ ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಸಿನಿಮಾಗೆ ನಂತರದ ದಿನಗಳಲ್ಲಿ ಭರ್ಜರಿ ಪ್ರಚಾರ ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಎಮೋಷನಲ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಎಲ್ಲ ಅಂಶಗಳ ಕಾರಣದಿಂದ ಈ ಚಿತ್ರ ಧೂಳೆಬ್ಬಿಸುತ್ತಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮಾಡಿದ್ದಕ್ಕಾಗಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ಕೆಲವು ಬೆದರಿಕೆ ಕರೆಗಳು ಬರುತ್ತಿವೆ. ಸೋಶಿಯಲ್​ ಮೀಡಿಯಾದಲ್ಲೂ ಅವರಿಗೆ ಬೆದರಿಕೆ ಹಾಕಲಾಗಿದೆ. ಹಾಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರದಿಂದ ತೀರ್ಮಾನಿಸಲಾಗಿದೆ. 7ರಿಂದ 8 ಜನ CRPF ಕಮಾಂಡೋಗಳು ವಿವೇಕ್​ ಅವರಿಗೆ ಭದ್ರತೆ ಒದಗಿಸಲಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಅವರಿಗೆ ಅನೇಕರು ಕೊಲೆ ಬೆದರಿಗೆ ಹಾಕಿದ್ದರು. ಆ ಕಾರಣದಿಂದ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯನ್ನು ಡಿಆ್ಯಕ್ಟೀವೇಟ್​​ ಮಾಡುವುದಾಗಿ ವಿವೇಕ್​ ಅಗ್ನಿಹೋತ್ರಿ ತಿಳಿಸಿದ್ದರು. ಸಿನಿಮಾ ಬಿಡುಗಡೆ ಆದ ಬಳಿಕ ಬೆದರಿಕೆ ಕರೆಗಳು ಹೆಚ್ಚಿವೆ ಎನ್ನಲಾಗಿದೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ದಿ ಕಾಶ್ಮೀರ್​ ಫೈಲ್ಸ್​’ನಲ್ಲಿ ಹಿಂಸೆಯ ಚಿತ್ರಣ ಇದೆ, ಆದರೆ ಪರಿಹಾರ ಇಲ್ಲ​; ಛತ್ತೀಸ್‌ಗಢ ಮುಖ್ಯಮಂತ್ರಿ ಟೀಕೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್