Bachchhan Paandey: ‘ಸೂರ್ಯವಂಶಿ’ಗಿಂತ ಕಡಿಮೆ ಗಳಿಸಿದ ‘ಬಚ್ಚನ್ ಪಾಂಡೆ’; ಮೊದಲ ದಿನದ ಕಲೆಕ್ಷನ್ ಎಷ್ಟು?
Bachchhan Paandey Box Office | Akshay Kumar: ಅಕ್ಷಯ್ ಕುಮಾರ್ ನಟನೆಯ ಚಿತ್ರಗಳು ಬಾಲಿವುಡ್ನಲ್ಲಿ ಉತ್ತಮ ಗಳಿಕೆ ಮಾಡುತ್ತವೆ. ಇದಕ್ಕೆ ‘ಬಚ್ಚನ್ ಪಾಂಡೆ’ ಕೂಡ ಹೊರತಾಗಿಲ್ಲ. ಜಾಕ್ವೆಲಿನ್ ಫೆರ್ನಾಂಡಿಸ್, ಕೃತಿ ಸನೋನ್ ಕಾಣಿಸಿಕೊಂಡಿರುವ ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು? ಇಲ್ಲಿದೆ ವಿವರ.
ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್ನಲ್ಲಿ ಗೆಲ್ಲುವ ಕುದುರೆಯೆಂದೇ ನಿರ್ಮಾಪಕರ ವಲಯದಲ್ಲಿ ಹೆಸರಾದವರು. ಅದಕ್ಕೆ ತಕ್ಕಂತೆ ಅವರ ಚಿತ್ರಗಳು ಕಲೆಕ್ಷನ್ ವಿಚಾರಕ್ಕೆ ಬಂದಾಗ ಒಳ್ಳೆಯ ಗಳಿಕೆ ಮಾಡುತ್ತವೆ. ಕೊರೊನಾ ನಂತರದಲ್ಲಿ ಬೇರೆಲ್ಲಾ ನಟರಿಗಿಂತ ಹೆಚ್ಚು ತೆರೆಕಂಡಿದ್ದು ಅಕ್ಷಯ್ ಕುಮಾರ್ ಅವರ ಚಿತ್ರಗಳು. ಹಲವು ಸೀಮಿತತೆಗಳ ನಡುವೆಯೂ ಅವು ಉತ್ತಮವಾಗಿ ಗಳಿಸಿದ್ದವು. ಇದೀಗ ನಿಯಮಾವಳಿಗಳೆಲ್ಲವೂ ಸಡಿಲವಾಗಿರುವ ಕಾಲಘಟ್ಟದಲ್ಲಿ ‘ಬಚ್ಚನ್ ಪಾಂಡೆ’ (Bachchhan Paandey) ರಿಲೀಸ್ ಆಗಿದೆ. ಈ ಹಿಂದಿನ ಚಿತ್ರಗಳ ಲೆಕ್ಕಾಚಾರ ಗಮನಿಸಿದಾಗ ‘ಬಚ್ಚನ್ ಪಾಂಡೆ‘ ದೊಡ್ಡ ದಾಖಲೆ ಬರೆಯುವ ನಿರೀಕ್ಷೆ ಇತ್ತು. ಆದರೆ ಚಿತ್ರ ಅಂತಹ ದಾಖಲೆ ಬರೆಯದಿದ್ದರೂ ಉತ್ತಮವಾಗಿಯೇ ಗಳಿಸಿದೆ. ಅಕ್ಷಯ್, ಕೃತಿ ಸನೋನ್, ಜಾಕ್ವೆಲಿನ್ ಫೆರ್ನಾಂಡಿಸ್ ಬಣ್ಣ ಹಚ್ಚಿರುವ ‘ಬಚ್ಚನ್ ಪಾಂಡೆ’ ಮಾರ್ಚ್ 18ರಂದು ದೇಶಾದ್ಯಂತ ರಿಲೀಸ್ ಆಗಿದೆ. ಬಾಲಿವುಡ್ ಬಾಕ್ಸಾಫೀಸ್ ತಜ್ಞರ ಪ್ರಕಾರ ಚಿತ್ರ ಮೊದಲ ದಿನದ ಗಳಿಕೆ ಸುಮಾರು 13.25 ಕೋಟಿ ರೂಗಳು.
ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿದ್ದ ಈ ಹಿಂದಿನ ಚಿತ್ರ ‘ಸೂರ್ಯವಂಶಿ’ ಬಾಕ್ಸಾಫೀಸ್ನಲ್ಲಿ ಮೊದಲ ದಿನವೇ ಬರೋಬ್ಬರಿ 26 ಕೋಟಿ ರೂ ಬಾಚಿಕೊಂಡಿತ್ತು. ಅದಕ್ಕೆ ಹೋಲಿಸಿದರೆ ‘ಬಚ್ಚನ್ ಪಾಂಡೆ’ ಗಳಿಕೆ ಕಡಿಮೆ. ಆದರೆ ವಿಶೇಷವೆಂದರೆ ಕೊರೊನಾ ಸಮಯದಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಕಲೆಕ್ಷನ್ ವಿಚಾರದಲ್ಲಿ ಮೊದಲೆರಡು ಸ್ಥಾನದಲ್ಲಿರುವುದೂ ಅಕ್ಷಯ್ ಚಿತ್ರಗಳೇ! ಅರ್ಥಾತ್ ಬಚ್ಚನ್ ಪಾಂಡೆ 13.25 ಕೋಟಿ ರೂ ಗಳಿಸಿದರೂ ಕೂಡ ಅದು ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ‘83’ (12 ಕೋಟಿ ರೂ), ‘ಗಂಗೂಬಾಯಿ ಕಾಠಿಯಾವಾಡಿ’ (10 ಕೋಟಿ ರೂ) ಚಿತ್ರಗಳಿವೆ.
‘ಬಚ್ಚನ್ ಪಾಂಡೆ’ ಕಲೆಕ್ಷನ್ ಕಡಿಮೆಯಾಗಲು ಕಾರಣ ಹಲವಾರಿದೆ. ಚಿತ್ರಕ್ಕೆ ಅಂದುಕೊಂಡಷ್ಟು ಸ್ಕ್ರೀನ್ಗಳು ಲಭ್ಯವಾಗಿಲ್ಲ. ಕಾರಣ, ‘ದಿ ಕಾಶ್ಮೀರ್ ಫೈಲ್ಸ್’ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಜತೆಗೆ ಅದರ ಸ್ಕ್ರೀನ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ‘ಬಚ್ಚನ್ ಪಾಂಡೆ’ಗೆ ವಿಮರ್ಶಕರು ಅಷ್ಟಾಗಿ ಒಲವು ತೋರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ನಲ್ಲಿ ಭಾರಿ ಏರಿಕೆಯಾಗುತ್ತದೆ ಎನ್ನುವ ಹಾಗೂ ಇಲ್ಲ. ಅದಾಗ್ಯೂ ಚಿತ್ರವು ಉತ್ತಮ ಮೊತ್ತವನ್ನೇ ಗಳಿಸಲಿದೆ ಎಂದಿದ್ದಾರೆ ಗಲ್ಲಾಪೆಟ್ಟಿಗೆ ವಿಶ್ಲೇಶಕರು.
‘ಬಚ್ಚನ್ ಪಾಂಡೆ’ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ:
#BachchhanPaandey surprises, hits double digits on Day 1, despite [i] #TKF wave, [ii] limited showcasing and [iii] post-noon screenings due to #Holi festivities… #Mumbai, #Gujarat, mass pockets lead… Biz should grow on Day 2 and 3… Fri ₹ 13.25 cr. #India biz. pic.twitter.com/44iMaNcHux
— taran adarsh (@taran_adarsh) March 19, 2022
‘ಬಚ್ಚನ್ ಪಾಂಡೆ’ ಚಿತ್ರವನ್ನು ನಿರ್ದೇಶಿಸಿದವರು ಫರ್ಹಾದ್ ಸಮ್ಜಿ. ಸಾಜಿದ್ ನಾಡಿಯಾದ್ವಾಲಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.2014ರಲ್ಲಿ ತೆರೆಕಂಡ ‘ಜಿಗರ್ಥಂಡ’ದ ರಿಮೇಕ್ ಬಚ್ಚನ್ ಪಾಂಡೆ. ಗ್ಯಾಂಗ್ಸ್ಟರ್ ಪಾತ್ರದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರಕ್ಕೂ ಹಿಂದಿಗೂ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ತಮಿಳಿನಲ್ಲಿ ಸಿದ್ಧಾರ್ಥ್ ನಟಿಸಿದ್ದ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಅಕ್ಷಯ್ ಕುಮಾರ್ ನಟನೆಯ ‘ಬಚ್ಚನ್ ಪಾಂಡೆ’ಯಲ್ಲಿ ‘ಕೆಜಿಎಫ್’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ
ಪುನೀತ್ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ