ಅನುಕಂಪದ ಆಧಾರದಲ್ಲಿ ನೇಮಕಾತಿ ನಿಯಮ ತಿದ್ದುಪಡಿ: ಸರ್ಕಾರಿ ನೌಕರರು ಮೃತಪಟ್ಟರೆ ಹತ್ತಿರದ ಸಂಬಂಧಿಗೆ ಕೆಲಸ
Compassionate Appointment Rules: ರಾಜ್ಯ ಸರ್ಕಾರಿ ನೌಕರರು ನಿವೃತ್ತರಾಗುವ ಮೊದಲು ಮೃತಪಟ್ಟರೆ ಅವರ ಹತ್ತಿರದ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸುವ ನೇಮಕಾತಿ ನಿಯಮಗಳಿಗೆ ಸರ್ಕಾರ ಹಲವು ತಿದ್ದುಪಡಿಗಳನ್ನು ತಂದಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ನಿವೃತ್ತರಾಗುವ ಮೊದಲು ಮೃತಪಟ್ಟರೆ ಅವರ ಹತ್ತಿರದ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸುವ ನೇಮಕಾತಿ ನಿಯಮಗಳಿಗೆ ಸರ್ಕಾರ ಹಲವು ತಿದ್ದುಪಡಿಗಳನ್ನು ತಂದಿದೆ. ಸರ್ಕಾರಿ ನೌಕರ ಮೃತಪಟ್ಟ ಸಂದರ್ಭದಲ್ಲಿ ವಿಧವಾ ಪತ್ನಿ, ಪುತ್ರ, ಅವಿವಾಹಿತ ಪುತ್ರಿ ಅಥವಾ ವಿವಾಹಿತೆಯಾಗಿದ್ದರೂ ವಿಧವೆ, ವಿಚ್ಛೇದಿತೆ ಆಗಿದ್ದರೂ ಅನುಕಂಪದಲ್ಲಿ ಉದ್ಯೋಗ ಒದಗಿಸಲು ಹೊಸ ನಿಯಮಗಳಲ್ಲಿ ಅವಕಾಶವಿದೆ. ಒಂದು ವೇಳೆ ಮಹಿಳಾ ನೌಕರರು ಮೃತಪಟ್ಟರೆ ವಿಧುರ ಪತಿ ಮಗ, ವಿವಾಹಿತ ಪುತ್ರಿ, ಪುತ್ರಿ ವಿಧವೆ, ವಿಚ್ಛೇದಿತೆ ಆಗಿದ್ದರೂ ಸರ್ಕಾರಿ ಉದ್ಯೋಗ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಅನುಕಂಪದ ಉದ್ಯೋಗ ಹಕ್ಕಲ್ಲ ಎಂದಿದ್ದ ಸುಪ್ರೀಂಕೋರ್ಟ್ ಸರ್ಕಾರಿ ಉದ್ಯೋಗಿಗಳು ಮೃತಪಟ್ಟಾಗ ಮೃತ ಉದ್ಯೋಗಿಗಳ ಹತ್ತಿರದ ಸಂಬಂಧಿಗಳಿಗೆ ಉದ್ಯೋಗ ನೀಡುವುದು ಆಯಾ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಇದು ಕುಟುಂಬದ ಹಕ್ಕು ಆಗಿರುವುದಿಲ್ಲ ಎಂದು 2019ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.
ಹಿಮಾಚಲ ಪ್ರದೇಶದ ತೋಟಗಾರಿಕೆ ಇಲಾಖೆಯ ಉದ್ಯೋಗಿ ಒಬ್ಬರ ಪುತ್ರ ಶಶಿಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅನುಕಂಪದ ಆಧಾರದ ಉದ್ಯೋಗವನ್ನು ಕುಟುಂಬದ ಸದಸ್ಯರು ತಮ್ಮ ಹಕ್ಕು ಎಂದುಕೊಳ್ಳುವಂತಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
Published On - 9:50 pm, Fri, 9 April 21