UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ

Indian Civil Service Examination: ಐಎಎಸ್​ಗೆ ಸಿದ್ಧತೆ ಮಾಡಿಕೊಂಡವರು ಸಂದರ್ಶನದ ಹಂತದಲ್ಲಿ ವಿಫಲರಾದರೂ ಸರ್ಕಾರಿ / ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಉನ್ನತ ಹುದ್ದೆಗಳು ಸಿಗುವಂತೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

UPSC Exam 2021: ಐಎಎಸ್ ಪರೀಕ್ಷೆ ಕಟ್ಟಿದವರು ಸಂದರ್ಶನದಲ್ಲಿ ಫೇಲ್ ಆದರೂ ಹಲವು ಅನುಕೂಲ
ಪ್ರಾತಿನಿಧಿಕ ಚಿತ್ರ (Photo credit: Facebook/ IAS association)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 23, 2021 | 4:36 PM

ಭಾರತೀಯ ನಾಗರಿಕ ಸೇವೆ ಪರೀಕ್ಷೆಗಳಿಗೆ (Indian Civil Service Examination) ನೋಂದಣಿ ಮಾಡಿಕೊಂಡವರು ಪ್ರಾಥಮಿಕ (ಪ್ರಿಲಿಮಿನರಿ) ಮತ್ತು ಮುಖ್ಯ ಪರೀಕ್ಷೆಗಳಲ್ಲಿ (ಮೇನ್ಸ್​) ಮುನ್ನಡೆ ಸಾಧಿಸಿ, ಸಂದರ್ಶನದ ಹಂತದಲ್ಲಿ ವಿಫಲರಾದರೂ ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ, ಸರ್ಕಾರಿ / ಖಾಸಗಿ ಸಂಸ್ಥೆಗಳು, ಉದ್ಯಮಗಳಲ್ಲಿ ಉನ್ನತ ಹುದ್ದೆಗಳು ಸಿಗುವಂತೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.

ಹಲವು ವರ್ಷಗಳಿಂದ ಚರ್ಚೆಯ ಹಂತದಲ್ಲಿಯೇ ಇದ್ದ ಕೇಂದ್ರ ಲೋಕಸೇವಾ ಆಯೋಗದ (Union Public Service Commission – UPSC) ಈ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ಈ ವರ್ಷದಿಂದ ಕೇಂದ್ರ ಲೋಕಸೇವಾ ಆಯೋಗವು ಪ್ರಿಲಿಮಿನರಿ ಮತ್ತು ಮೇನ್ಸ್​ನಲ್ಲಿ ತೇರ್ಗಡೆಯಾಗಿ, ಸಂದರ್ಶನದಲ್ಲಿ ವಿಫಲರಾಗುವ ಅಭ್ಯರ್ಥಿಗಳ ಅಂಕಗಳಿಕೆ ಮತ್ತು ಇತರ ವಿವರಗಳನ್ನು ಆಯೋಗವು ಸಾರ್ವಜನಿಕವಾಗಿ ಪ್ರಕಟಿಸುತ್ತದೆ. ಈ ಮಾಹಿತಿಯನ್ನು ಬಳಸಿಕೊಳ್ಳುವ ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಇಂಥ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವಾಗ ಆದ್ಯತೆ ನೀಡುವುದು ನಿರೀಕ್ಷಿತ.

ಮೇನ್ಸ್​ ತೇರ್ಗಡೆಯಾದ ಅಭ್ಯರ್ಥಿಗಳು ಸಂದರ್ಶನದ ಕರೆಯನ್ನು ಯುಪಿಎಸ್​ಸಿ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಳ್ಳುವಾಗಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸುವ ಅಥವಾ ನಿರಾಕರಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಸಹಮತವಿಲ್ಲ ಎಂದಾದರೆ ಅಂಥ ಅಭ್ಯರ್ಥಿಗಳ ವಿವರಗಳನ್ನು ಯುಪಿಎಸ್​ಸಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಆಯೋಗವು ಸ್ಪಷ್ಟಪಡಿಸಿದೆ.

ಮೇನ್ಸ್​ನಲ್ಲಿ ತೇರ್ಗಡೆಯಾಗಿ, ಸಂದರ್ಶನದಲ್ಲಿ ವಿಫಲರಾದ ಅಭ್ಯರ್ಥಿಗಳ ಅಂಕಗಳು ಮತ್ತು ಇತರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದರ ಹೊರತು ಕೇಂದ್ರ ಲೋಕಸೇವಾ ಆಯೋಗ ಮತ್ಯಾವುದೇ ಬಾಧ್ಯತೆ ಹೊರುವುದಿಲ್ಲ. ಲೋಕಸೇವಾ ಆಯೋಗ ಪ್ರಕಟಿಸಿದ ಈ ಮಾಹಿತಿಯನ್ನು ನಿರ್ದಿಷ್ಟವಾಗಿ ಹೀಗೆಯೇ ಬಳಸಿಕೊಳ್ಳಬೇಕು ಎಂಬ ಯಾವುದೇ ಷರತ್ತು ಸರ್ಕಾರಿ ಇಲಾಖೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯಮಗಳ ಮೇಲೆ ಇರುವುದಿಲ್ಲ ಎಂದು ಆಯೋಗವು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನು ಓದಿ: UPSC Calendar: ಐಎಎಸ್​, ಐಎಫ್​ಎಸ್​ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ

UPSC-Circular

ಯುಪಿಎಸ್​ಸಿ ಅಧಿಸೂಚನೆಯಲ್ಲಿ ಪ್ರಕಟವಾಗಿರುವ ಮೇನ್ಸ್​ ಅಂಕ ಬಹಿರಂಗಪಡಿಸುವ ನಿರ್ಧಾರ

ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲ ಐಎಎಸ್​ ಪರೀಕ್ಷೆ (Indian Administration Service – IAS) ಎಂದು ಜನಜನಿತವಾಗಿರುವ ಭಾರತ ನಾಗರಿಕ ಸೇವಾ ಪರೀಕ್ಷೆಗಳು ಹಲವು ಹಂತಗಳಲ್ಲಿ ನಡೆಯುತ್ತವೆ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾದವರಿಗೆ ಸಿಗಬಹುದಾದ ಹತ್ತಾರು ಕೇಡರ್​ಗಳಲ್ಲಿ ಐಎಎಸ್​ ಎನ್ನುವುದೂ ಒಂದು. ಇದನ್ನು ಹೊರತುಪಡಿಸಿಯೂ 14 ಗ್ರೂಪ್​ ಎ ಮತ್ತು 4 ಗ್ರೂಪ್​ ಬಿ ಹುದ್ದೆಗಳಿಗೆ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸು ಮಾಡಿದವರು ಆಯ್ಕೆಯಾಗುತ್ತಾರೆ. ಐಎಸ್​ಎಸ್, ಐಪಿಎಸ್ ಮತ್ತು ಐಎಫ್​ಎಸ್​ ಸೇವೆಗಳೂ ಇದರಲ್ಲಿಯೇ ಬರುತ್ತವೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪ್ರಿಲಿಮಿನರಿ, ಮೇನ್ಸ್​ ಮತ್ತು ಸಂದರ್ಶನಗಳು ಮುಖ್ಯ ಹಂತಗಳಾಗಿವೆ. ಸುಮಾರು 600 ಹುದ್ದೆಗಳಿಗೆ ಯುಪಿಎಸ್​ಸಿ ಅಧಿಸೂಚನೆ ಹೊರಡಿಸಿದರೆ ಸಾಮಾನ್ಯವಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಹಾಕುತ್ತಾರೆ. ಈ ಪೈಕಿ ಸುಮಾರು 10 ಸಾವಿರ ಮಂದಿ ಪ್ರಿಲಿಮಿನರಿ ತೇರ್ಗಡೆಯಾದರೆ, 3 ಸಾವಿರ ಮಂದಿ ಮೇನ್ಸ್​ ಹಂತ ದಾಟುತ್ತಿದ್ದವರು. ಈ ಪೈಕಿ 600 ಮಂದಿ ಮಾತ್ರ ಸಂದರ್ಶನದಲ್ಲಿ ತೇರ್ಗಡೆಯಾಗಿ ಮುನ್ನಡೆಯುತ್ತಿದ್ದರು. ಸಂದರ್ಶನದ ಹಂತದವರೆಗೆ ಬಂದು, ಅಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗದ ಅಭ್ಯರ್ಥಿಗಳು ಸಹ ಸಾಕಷ್ಟು ಪರಿಶ್ರಮ ಹಾಕಿರುತ್ತಾರೆ. ಇಂಥವರನ್ನು ಕೇಂದ್ರ ಸರ್ಕಾರದ ಇತರ ಹುದ್ದೆಗಳಿಗೆ ಪರಿಗಣಿಸಬಾರದೇಕೆ ಎಂದು ಯುಪಿಎಸ್​ಸಿ ಅಧ್ಯಕ್ಷರಾಗಿದ್ದ ಅರವಿಂದ ಸಕ್ಸೇನಾ ಬಹಳ ಹಿಂದೆಯೇ ಪ್ರಸ್ತಾಪಿಸಿದ್ದರು. ಮೂರ್ನಾಲ್ಕು ವರ್ಷ ಈ ಬಗ್ಗೆ ಚಿಂತನಮಂಥನ ನಡೆದ ನಂತರ ಕೇಂದ್ರ ಸಚಿವ ಸಂಪುಟ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಂಡಿತು. ನಂತರದ ದಿನಗಳಲ್ಲಿ ಇದನ್ನು ಹೇಗೆ ಜಾರಿ ಮಾಡಬೇಕು ಎಂಬ ಬಗ್ಗೆ ಯುಪಿಎಸ್​ಸಿಯಲ್ಲಿ ಬಹುಕಾಲ ಆಂತರಿಕ ಚರ್ಚೆ ನಡೆಯುತ್ತಿತ್ತು.

ಒಮ್ಮೆ ಯುಪಿಎಸ್​ಸಿಗೆ ಗಂಭೀರ ಸಿದ್ಧತೆ ಮಾಡಿಕೊಂಡ ವ್ಯಕ್ತಿ ಮತ್ತೊಮ್ಮೆ ಮಗದೊಮ್ಮೆ ಪರೀಕ್ಷೆಗಳನ್ನು ಎದುರಿಸಬೇಕಾದ ಒತ್ತಡ ಅನುಭವಿಸುವುದು ಅಗತ್ಯವಿಲ್ಲ. ಯುಪಿಎಸ್​ಸಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಖಾಸಗಿ ಸಂಸ್ಥೆಗಳ ನೇಮಕಾತಿ ವ್ಯವಸ್ಥೆಗಳೂ ಒಬ್ಬನೇ ವ್ಯಕ್ತಿಯ ಸಾಮರ್ಥ್ಯ ಪರೀಕ್ಷೆಗೆ ಅನಗತ್ಯವಾಗಿ ಹೆಚ್ಚು ಸಮಯ ಮತ್ತು ಸಂಪನ್ಮೂಲ ವಿನಿಯೋಗಿಸುವ ಪರಿಸ್ಥಿತಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಅದರಂತೆ ಯುಪಿಎಸ್​ಸಿಯ ಮೇನ್ಸ್​ ತೇರ್ಗಡೆಯಾಗಿ, ಸಂದರ್ಶನದ್ಲಲಿ ವಿಫಲನಾದ  ವ್ಯಕ್ತಿಯ ಅಂಕಗಳನ್ನು ಇನ್ನು ಮುಂದೆ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.

ಇದರರ್ಥ ಕೆಲಸ ಗ್ಯಾರೆಂಟಿ ಅಂತ ಅಲ್ಲ ಯುಪಿಎಸ್​ಸಿಯ ನಾಗರಿಕ ಸೇವಾ ಪರೀಕ್ಷೆಗಳ ಮೊದಲು ಎರಡು ಹಂತಗಳನ್ನು ಯಶಸ್ವಿಯಾಗಿ ಮುಗಿಸಿದವರು ಗಳಿಸಿದ ಅಂಕಗಳನ್ನು ಬಹಿರಂಗಪಡಿಸಿದ ತಕ್ಷಣ ಸರ್ಕಾರಿ ಅಥವಾ ಖಾಸಗಿ ಉದ್ಯೋಗದಾತರು ಅವರಿಗೆ ಕೆಲಸ ಕೊಡಲೇಬೇಕು ಎಂದು ಸರ್ಕಾರವಾಗಲೀ, ಯುಪಿಎಸ್​ಸಿ ಆಗಲೀ ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ ಇಂಥವರಿಗೆ ಆದ್ಯತೆ ನೀಡಿ ಪರೋಕ್ಷವಾಗಿ ಇಂಗಿತ ವ್ಯಕ್ತಿಪಡಿಸಿವೆ. ಇತರ ಅಭ್ಯರ್ಥಿಗಳಿಗೆ ಹೋಲಿಸಿದರೆ ಸಹಜವಾಗಿಯೇ ಇಂಥ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಗಳಿಗೆ ಸೇರಿಸಿಕೊಳ್ಳಲು ಉದ್ಯೋಗದಾತರು ಆದ್ಯತೆ ನೀಡುತ್ತಾರೆ. ಸರ್ಕಾರ ಆಥವಾ ಖಾಸಗಿ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆ, ಸಂದರ್ಶನಗಳಲ್ಲಿ ಇಂಥ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು ಎಂದಾದರೂ, ಐಎಎಸ್​ನಂಥ ದೊಡ್ಡ ಏಣಿ ಏರಲು ಆರಂಭಿಸಿದವರಿಗೆ ಅವೆಲ್ಲಾ ಅಷ್ಟುದೊಡ್ಡ ಸವಾಲುಗಳು ಎನಿಸುವುದೇ ಇಲ್ಲ.

ಇದನ್ನೂ ಓದಿ: Google career certificate courses: ಭಾರತದ ಉದ್ಯೋಗ ಮಾರುಕಟ್ಟೆಯ ಆಟವೇ ಬದಲಿಸುತ್ತಾ ಗೂಗಲ್?

ಇದನ್ನೂ ಓದಿ: Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ

Published On - 4:22 pm, Tue, 23 March 21

ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!