Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ

ಭಾರತೀಯ ಸೇನೆಯ ಶಾಶ್ವತ ಆಯೋಗಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು ಒಟ್ಟು 40 ಖಾಲಿ ಹುದ್ದೆಗಳಿವೆ ಎಂದು ಹೇಳಿದೆ. ಯಾವ ಪೋಸ್ಟ್​ನಲ್ಲಿ ಎಷ್ಟು ವೆಕೆನ್ಸಿಗಳು ಖಾಲಿ ಇವೆ, ಅರ್ಜಿ ಸಲ್ಲಿಸಿವುದು ಹೇಗೆ? ಇಲ್ಲಿದೆ ಸಮಗ್ರ ಮಾಹತಿ..

Indian Army Recruitment 2021: ಎಂಜಿನಿಯರಿಂಗ್​ ಪದವೀಧರರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ;  ಆನ್​​ಲೈನ್​ ಮೂಲಕ ಅರ್ಜಿ ಆಹ್ವಾನ
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)
Follow us
Lakshmi Hegde
|

Updated on: Mar 21, 2021 | 12:52 PM

ನೀವು ಇಂಜಿನಿಯರಿಂಗ್ ಓದುತ್ತಿದ್ದರೆ, ಅಥವಾ​ ಪದವೀಧರರಾಗಿದ್ದು, 20-27ವರ್ಷದವರಾಗಿದ್ದರೆ ನಿಮಗೆ ಭಾರತೀಯ ಸೇನೆಯಲ್ಲಿದೆ ಉದ್ಯೋಗವಕಾಶ. 2021ರ ಜುಲೈನಿಂದ ಡೆಹ್ರಾಡೂನ್​​ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ಪ್ರಾರಂಭವಾಗುವ 133ನೇ ತಾಂತ್ರಿಕ ಪದವಿ (TGC-133) ಕೋರ್ಸ್​​ಗೆ ಭಾರತೀಯ ಸೇನೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಕೆಗೆ ಕೊನೇ ದಿನ ಮಾರ್ಚ್​ 26. ಈ ಬಗ್ಗೆ ಭಾರತೀಯ ಸೇನೆ ತನ್ನ joinindianarmy.nic.in. ನಲ್ಲಿ ಅಧಿಸೂಚನಾ ಪ್ರಕಟಣೆ ಹೊರಡಿಸಿದ್ದು, ಆಸಕ್ತರು, ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಭಾರತೀಯ ಸೇನೆಯ ಶಾಶ್ವತ ಆಯೋಗಕ್ಕಾಗಿ ಈ ನೇಮಕಾತಿ ನಡೆಯುತ್ತಿದ್ದು ಒಟ್ಟು 40 ಖಾಲಿ ಹುದ್ದೆಗಳಿವೆ ಎಂದು ಹೇಳಿದೆ. ಯಾವ ಪೋಸ್ಟ್​ನಲ್ಲಿ ಎಷ್ಟು ವೆಕೆನ್ಸಿಗಳು ಖಾಲಿ ಇವೆ? ಇಲ್ಲಿದೆ ನೋಡಿ ಮಾಹಿತಿ..

  • ಸಿವಿಲ್​/ ಕಟ್ಟಡ ನಿರ್ಮಾಣ ತಂತ್ರಜ್ಞಾನ -11
  • ಮೆಕ್ಯಾನಿಕಲ್​-3
  • ಎಲೆಕ್ಟ್ರಿಕಲ್​/ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​-4
  • ಕಂಪ್ಯೂಟರ್​ ಸೈನ್ಸ್​ ಮತ್ತು ಎಂಜಿನಿಯರಿಂಗ್​/ಕಂಪ್ಯೂಟರ್​ ಟೆಕ್ನಾಲಜಿ/ ಎಂ.ಎಸ್​ಸಿ ಕಂಪ್ಯೂಟರ್​ ಸೈನ್ಸ್​-9
  • ಮಾಹಿತಿ ತಂತ್ರಜ್ಞಾನ (Technology) -3
  • ಎಲೆಕ್ಟ್ರಾನಿಕ್ಸ್​ ಆ್ಯಂಡ್ ಟೆಲಿಕಮ್ಯೂನಿಕೇಷನ್​ -2
  • ಟೆಲಿಕಮ್ಯೂನಿಕೇಶನ್​ ಎಂಜನಿಯರಿಂಗ್​-1
  • ಎಲೆಕ್ಟ್ರಾನಿಕ್​ ಆ್ಯಂಡ್ ಕಮ್ಯೂನಿಕೇಷನ್​-1
  • ಸೆಟಲೈಟ್​ ಕಮ್ಯೂನಿಕೇಷನ್​-1
  • ಎರೋನಾಟಿಕಲ್​/ಎರೋಸ್ಪೇಸ್​/ಏವಿಯಾನಿಕ್ಸ್-3
  • ಆಟೋಮೊಬೈಲ್​ ಎಂಜಿನಿಯರಿಂಗ್​-1
  • ಟೆಕ್ಸ್​​ಟೈಲ್ ಎಂಜಿನಿಯರಿಂಗ್​-1

ವಯಸ್ಸಿನ ಮಿತಿ ಇದೆ ಈ ಕೋರ್ಸ್​​ಗೆ ಅರ್ಜಿ ಸಲ್ಲಿಸುವವರು 20 ವರ್ಷ ಮೇಲ್ಪಟ್ಟವರಾಗಿರಬೇಕು.. 27ವರ್ಷ ಒಳಗಿರಬೇಕು. ಅಂದರೆ 1994 ರ ಜುಲೈ 2 ರಿಂದ 2001ರ ಜುಲೈ 1ರ ಮಧ್ಯದ ವರ್ಷದಲ್ಲಿ ಜನಿಸಿದವರಾಗಿರಬೇಕು. ಹಾಗೇ, ಇದೆರಡೂ ಡೇಟ್​ಗಳಲ್ಲಿ ಹುಟ್ಟಿದವರೂ ಅಪ್ಲೈ ಮಾಡಬಹುದು. ಅವಿವಾಹಿತರಾಗಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..
  • www.joinindianarmy.nic.in. ವೆಬ್​ಸೈಟ್​ಗೆ ಭೇಟಿ ಕೊಡಿ
  • Officer Entry Apply/Login ಎಂಬಲ್ಲಿ ಕ್ಲಿಕ್​ ಮಾಡಿ. ನಂತರ ರಿಜಿಸ್ಟ್ರೇಶನ್​ ಮೇಲೆ ಕ್ಲಿಕ್​ ಮಾಡಿ. ನೀವು ಅದಾಗಲೇ www.joinindianarmy.nic.in. ನಲ್ಲಿ ರಿಜಿಸ್ಟರ್ ಆಗಿದ್ದರೆ ಮತ್ತೆ ನೋಂದಣಿ ಅಗತ್ಯವಿಲ್ಲ.
  • ಅಲ್ಲಿರುವ ಅರ್ಜಿಯನ್ನು ತುಂಬಿ
  • ಅದಾದ ಬಳಿಕ ಅಪ್ಲೈ ಆನ್​ಲೈನ್​ ಎಂಬಲ್ಲಿ ಕ್ಲಿಕ್​ ಮಾಡಿ.
  • ಅಧಿಕಾರಿಗಳ ಆಯ್ಕೆ ‘ಅರ್ಹತೆ’(Eligibility) ಎಂಬ ಪುಟ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳುತ್ತದೆ
  • ಅದರಲ್ಲಿ Technical Graduate Course ಗೆ ಅಪ್ಲೈ ಮಾಡಿ.
  • ಆಗೊಂದು ಅಪ್ಲಿಕೇಶನ್​ ಫಾರ್ಮ್​ ತೆರೆದುಕೊಳ್ಳುತ್ತದೆ. ಅದರಲ್ಲಿ ಸೂಚನೆಯನ್ನು ಓದಿ ಮತ್ತು ಕಂಟಿನ್ಯೂ ಎಂಬಲ್ಲಿ ಕ್ಲಿಕ್​ ಮಾಡಿ. ನಂತರ ಅಲ್ಲಿರುವ ಖಾಲಿ ಜಾಗಗಳನ್ನು ಭರ್ತಿ ಮಾಡಿ.

ಅರ್ಹತೆ ಏನಿರಬೇಕು? ಕೋರ್ಸ್​ಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್ ಪದವೀಧರರಾಗಿರಬೇಕು. ಒಮ್ಮೆ ನೀವಿನ್ನೂ ಎಂಜಿನಿಯರಿಂಗ್ ಓದುತ್ತಿದ್ದರೂ ಅಪ್ಲೈ ಮಾಡಬಹುದು. ಎಂಜನಿಯರಿಂಗ್​ ಅಂತಿಮ ವರ್ಷದಲ್ಲಿ ಇರುವವರು 2021ರ ಜುಲೈ ಒಳಗಿನ ಎಲ್ಲ ಸೆಮಿಸ್ಟರ್​ ಪರೀಕ್ಷೆಗಳ ಮಾರ್ಕ್​ಶೀಟ್​ ಸಲ್ಲಿಸಬೇಕು. ಹಾಗೇ ತರಬೇತಿ ಶುರುವಾಗುವ 12 ವಾರದ ಒಳಗೆ ಡಿಗ್ರಿ ಸರ್ಟಿಫಿಕೇಟ್​ ಸಲ್ಲಿಸಬೇಕು.

ಇದನ್ನೂ ಓದಿ: ಕೆಲಸ ಮಾಡುವಾಗ ಬ್ರೇಕ್​ಗಳನ್ನು ತೆಗೆದುಕೊಳ್ಳುವುದು ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರಿಗೂ ಪ್ರಯೋಜನಕಾರಿ: ಅಧ್ಯಯನ

ಇಟ್ಟಿಗೆ ಫ್ಯಾಕ್ಟರಿಯಿಂದ ಪರಿಸರ ಮಾಲಿನ್ಯ; ಕಡಿವಾಣ ಹಾಕಲು ಚಾಮರಾಜನಗರ ಜನತೆಯ ಒತ್ತಾಯ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ