
ಬೆಂಗಳೂರು, ಜುಲೈ 22: ಕರ್ನಾಟಕಕ್ಕೆ ಇನ್ನೊಂದು ಫಾಕ್ಸ್ಕಾನ್ (Foxconn) ಘಟಕ ಕೂಡ ಆಗಮಿಸುತ್ತಿದ್ದು, 300 ಎಕರೆ ಭೂಮಿ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M B Patil) ತಿಳಿಸಿದರು. ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ ಅವರು ಮಾತನಾಡಿ, ರಾಜ್ಯದಲ್ಲಿ ಸಮರ್ಪಕವಾಗಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕೈಗಾರಿಕೆಗಳಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ತರಲು ನಾವು ಬದ್ಧ. ಶೀಘ್ರದಲ್ಲೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಕೆಐಎಡಿಬಿನಲ್ಲಿನ ವ್ಯಾಜ್ಯ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಆಟೋಮೊಬೈಲ್, ಏರೋಸ್ಪೇಸ್, ಎಲೆಕ್ಟ್ರಾನಿಕ್ ಹಾಗೂ ಫಾರ್ಮಸಿ ಸ್ಪರ್ಧಾತ್ಮಕ ಮಾರ್ಕೆಟ್ನಲ್ಲಿ ಹೆಚ್ಚು ಸ್ಟೀಲ್ ಕೈಗಾರಿಕೆ ರಾಜ್ಯಕ್ಕೆ ಬರಲು ಮುಂದಾಗಿದ್ದು, ಯಾವ ರೀತಿ ಹೆಜ್ಜೆ ಇಡಬೇಕೆಂದು ಯೋಚಿಸಿ ದಿಟ್ಟ ಕ್ರಮ ಕೈಗೊಳ್ಳುತ್ತೇವೆ.
ಇದನ್ನೂ ಓದಿ: ಎನ್ಆರ್ಐಗಳಿಗಾಗಿ ಒಂದು ಪ್ರತ್ಯೇಕ ಇಲಾಖೆ ತೆರೆಯಲು ನಾವು ಸಿದ್ಧ: ಡಿಕೆ ಶಿವಕುಮಾರ್
ರಾಜ್ಯದಲ್ಲಿ ಉದ್ಯಮಕ್ಕೆ ಪೂರಕ ವಾತಾವರಣವಿದೆ. ಗ್ರೀನ್ ಹೈಡ್ರೋಜನ್ ಕೈಗಾರಿಕೆಗಳ ಸ್ಥಾಪನೆಗೂ ಯೋಜನೆ ಸಿದ್ಧವಾಗಿದೆ. ಟಾಟಾ ಟೆಕ್ ಎಂಎಸ್ಎಂಇ ಸ್ಥಾಪನೆಗಾಗಿ ಸರ್ಕಾರ ಆಸಕ್ತಿ ತೋರಿದೆ. ಟಾಟಾ 70%, ಸರ್ಕಾರ ಶೇ.30ರಷ್ಟು ಬಂಡವಾಳ ಹೂಡಿಕೆ ಮಾಡಲಿದ್ದು, ಇಡೀ ವಿಶ್ವದಲ್ಲೇ ರಫ್ತು ವಿಚಾರದಲ್ಲಿ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಸಿಎಂ ಸಿದ್ಧರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ ಕೈಗಾರಿಕೆ ಬೆಳೆವಣಿಗೆ ಹೊಂದಬೇಕು ಎಂಬುವುದು ಎಂಬಿ ಪಾಟೀಲ್ ಆಸೆ. ಅವರಿಗೆ ಮತ್ತು ಉದ್ಯಮಿಗಳಿಗೆ ನಮ್ಮ ಬೆಂಬಲ ಸದಾ ಇರುತ್ತೆ. ಕೈಗಾರಿಕೆ ಬೆಳವಣಿಗೆ ಆಗಬೇಕು ಅಂತ ನಾವು ಈ ಹಿಂದೆ ಸಿಎಂ ಆಗಿದ್ದಾಗ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನ ಪ್ರಾರಂಭ ಮಾಡಿದೆ. ಈಗ ಮತ್ತೆ ನಾವು ಶಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತೆ. ಜಿಡಿಪಿ ಬೆಳೆದರೆ ರಾಜ್ಯ ಬೆಳೆಯುವುದಕ್ಕೆ ಸಹಾಯ ಆಗುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡ ಚೆನ್ನಾಗಿ ಇಟ್ಟಿಕೊಳ್ಳಬೇಕು. ಆಗ ಹೂಡಿಕೆ ಚೆನ್ನಾಗಿ ಬರುತ್ತೆ, ರಾಜ್ಯ ಬೆಳವಣಿಗೆ ಆಗುತ್ತೆ. ಡಿಮ್ಯಾಂಡ್ ಇರುವ ಉದ್ಯಮಗಳನ್ನ ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Sat, 22 July 23