Udupi News: ಮಣಿಪಾಲದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರ ದಾಳಿ; 5 ಮಂದಿ ಯುವತಿಯರ ರಕ್ಷಣೆ
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಭವಾನಿ ಎಂಬ ಹೆಸರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು(Manipal Police) ಬಂಧಿಸಿದ್ದು, ಐವರು ಯುವತಿಯರ ರಕ್ಷಣೆ ಮಾಡಿದ್ದಾರೆ.
ಉಡುಪಿ, ಜು.22: ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಭವಾನಿ ಎಂಬ ಹೆಸರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು(Manipal Police) ದಾಳಿ ಮಾಡಿದ್ದರು. ಈ ವೇಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ 5 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಈ ದಂಧೆ ನಡೆಸುತ್ತಿದ್ದ ಅಬ್ದುಲ್ ಸಲಾಮತ್, ಚಂದ್ರಹಾಸ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ರಕ್ಷಣೆ ಮಾಡಲ್ಪಟ್ಟ 3 ಜನ ಬೆಂಗಳೂರು ಮೂಲದವರಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ವಾಸಿಗಳಾಗಿದ್ದಾರೆ. ಈ ದಂಧೆಗೆ ಬಳಸಿದ 4 ಮೊಬೈಲ್ ಫೋನ್, 1 ಕಾರು , 2 ಮೋಟಾರ್ ಸೈಕಲ್ ಹಾಗೂ 10 ಸಾವಿರ ರೂಪಾಯಿಯನ್ನು ಜಪ್ತಿ ಮಾಡಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಟೆಕ್ ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ
ಇನ್ನು ಕಳೆದ ತಿಂಗಳು ಶಿವಮೊಗ್ಗ ನಗರದ ಹೈಟೆಕ್ ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಹೌದು ನಗರದ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸರು ದಾಳಿ ನಡೆಸಿ, 6 ಯುವತಿಯರನ್ನ ರಕ್ಷಣೆ ಮಾಡಿದ್ದರು. ಬಳಿಕ ಅವರನ್ನ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಸೇರಿಸಲಾಗಿತ್ತು. ಹಲವು ವರ್ಷಗಳಿಂದ ನಗರದಲ್ಲಿ ತಲೆಎತ್ತುತ್ತಿರುವ ಹೈಟೇಕ್ ಸಲೂನ್, ಸ್ಪಾ ಗಳಲ್ಲಿ ಇದೀಗ ಇಂತಹ ದಂಧೆಗಳನ್ನು ನಡೆಸಲಾಗುತ್ತಿದ್ದು, ಯುವತಿಯರನ್ನ ಬಳಸಿಕೊಳ್ಳಲಾಗುತ್ತದೆ. ಇದೀಗ ಶಿವಮೊಗ್ಗ ಬಳಿಕ, ಉಡುಪಿಯಲ್ಲೂ ವೇಶ್ಯಾವಾಟಿಕೆ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ:Bengaluru News: ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ್ದ ಆರೋಪಿಗಳ ಬಂಧನ: 26 ಯುವತಿಯರ ರಕ್ಷಣೆ
ಏಕಾಏಕಿ ಬ್ರೇಕ್ ಹಾಕಿದ ಬಸ್; ಹಿಂಬದಿಯಿಂದ ಗುದ್ದಿದ ಬೊಲೆರೋ ಪಿಕಪ್
ಉತ್ತರ ಕನ್ನಡ: ಜಿಲ್ಲೆ ಕಾರವಾರ ತಾಲೂಕಿನ ಅರಗಾದಲ್ಲಿ ಹುಬ್ಬಳ್ಳಿಯಿಂದ ಮಡಗಾಂವ್ಗೆ ಹೊರಟಿದ್ದ ಸರ್ಕಾರಿ ಬಸ್ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಬೊಲೆರೋ ಪಿಕ್ಅಪ್ ವಾಹನ ಬಸ್ಗೆ ಗುದ್ದಿದೆ. ಬೊಲೆರೋ ಚಾಲಕ ಫಾರೂಕ್ ಹಾನಗಲ್ (25) ಎಂಬಾತನಿಗೆ ಗಾಯಗಳಾಗಿದ್ದು, ಆತನನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಅಪಘಾತದಲ್ಲಿ ಬೊಲೆರೋ ವಾಹನದ ಮುಂಭಾಗ ಸಂಪೂರ್ಣ ಜಖಂ ಆದರೆ, ಬಸ್ನ ಹಿಂಬದಿಯ ಒಂದು ಭಾಗ ಜಖಂ ಆಗಿದೆ. ಕೂಡಲೇ ಪೊಲೀಸರು ವಾಹನವನ್ನ ಪಕ್ಕಕ್ಕೆ ಇರಿಸಿ, ಸಂಚಾರ ಸುಗಮಗೊಳಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Sat, 22 July 23