ಹೈಟೆಕ್ ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ! ಎತ್ತ ಸಾಗುತ್ತಿದೆ ಸಾಂಸ್ಕೃತಿಕ ನಗರಿ ಶಿವಮೊಗ್ಗ?

ಶಿವಮೊಗ್ಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜೋರಾಗಿದೆ. ಸ್ಪಾ ಗಳಲ್ಲಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ. ಯುವತಿಯರು ವೇಶ್ಯಾವಾಟಿಕೆ ದಂದೆಗೆ ಬೀಳುವುದನ್ನು ತಪ್ಪಿಸಬೇಕಿದೆ.

ಹೈಟೆಕ್ ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ! ಎತ್ತ ಸಾಗುತ್ತಿದೆ ಸಾಂಸ್ಕೃತಿಕ ನಗರಿ ಶಿವಮೊಗ್ಗ?
ಹೈಟೆಕ್ ಸ್ಪಾ ಕೇಂದ್ರಗಳಲ್ಲಿ ವೇಶ್ಯಾವಾಟಿಕೆ!
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on:Jun 28, 2023 | 5:47 PM

ಶಿವಮೊಗ್ಗ ನಗರದಲ್ಲಿ ಕೆಲವು ವರ್ಷಗಳಿಂದ ಹೈಟೆಕ್ ಸ್ಪಾ ಸ್ಪಾಟ್​​ಗಳು (Body Massage Centres) ತಲೆಯೆತ್ತಿಕೊಂಡಿವೆ. ಈ ಸ್ಪಾ ಕೇಂದ್ರಗಳ ಒಳಗೆ ಏನು ನಡೆಯುತ್ತಿದೆ ಎನ್ನುವುದೇ ನಿಗೂಢ.. ಇಂತಹ ಸ್ಪಾಗಳನ್ನು ಕೆಲ ಮಾಲೀಕರು ಹೈಟೆಕ್ ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.. ಸ್ಪಾಗಳಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಟಿಕೆ ಸಂಗತಿ ಇದೀಗ ಬಯಲಿಗೆ ಬಿದ್ದಿದೆ… ಹೈಟೆಕ್ ದಂಧೆಯ ಕುರಿತು ಒಂದು ವರದಿ ಇಲ್ಲಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಫ್ಯಾಮಿಲಿ ಸಲೂನ್ ಮತ್ತು ಸ್ಪಾ ಕೇಂದ್ರದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಹೈಟೆಕ್ ವೇಶ್ಯಾವಟಿಕೆ ದಂದೆಗೆಂದು ಆರು ಯುವತಿಯರನ್ನು ಬಳಸಿಕೊಂಡಿರುವುದು ಪತ್ತೆಯಾಗಿತ್ತು. ಈ ಆರು ಯುವತಿಯರನ್ನು ಮಹಿಳಾ ಪೊಲೀಸರು ರಕ್ಷಣೆ ಮಾಡಿ ಮಹಿಳಾ ಸಾಂತ್ವನಕ್ಕೆ ಕಳುಹಿಸಿದ್ದರು. ಬೆಂಗಳೂರಿನಂತೆ ದೊಡ್ಡ ದೊಡ್ಡ ಫ್ಯಾಮಿಲಿ ಸಲೂನ್ ಮತ್ತು ಸ್ಪಾಗಳು ಶಿವಮೊಗ್ಗದಲ್ಲೂ ವಿವಿಧೆಡೆ ಓಪನ್ ಆಗಿವೆ (shivamogga police).

ಹೀಗೆ ಮಸಾಜ್ ನೆಪದಲ್ಲಿ ಕೆಲ ಸ್ಪಾಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದೆ. ಈ ದಾಳಿ ನಡೆದು ಇನ್ನೂ ಕೆಲವು ದಿನಗಳು ಕಳೆದಿಲ್ಲ. ಈಗ ವಿನೋಬ ನಗರದಲ್ಲಿರುವ ಅರ್ಬನ್ ಸ್ಪಾ ಮೇಲೆ ವಿನೋಬ ನಗರ ಪೊಲೀಸರು ದಾಳಿ ಮಾಡಿದ್ದಾರೆ. ಸ್ಪಾದಲ್ಲಿದ್ದ 7 ಮಹಿಳೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹೀಗೆ ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಗೆ ಅರ್ಬನ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಕುರಿತು ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಪಾ ಮೇಲೆ ದಾಳಿ ಮಾಡಿದ್ದಾರೆ. ಈ ಯುವತಿಯರಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದಾರಂತೆ. ದಾಳಿಯಲ್ಲಿ ಮಸಾಜ್ ಪಾರ್ಲರ್ ನ ಮಾಲೀಕ ರಂಜಿತ್ ಎನ್ನುವ ವ್ಯಕ್ತಿಯ ಬಂಧನವಾಗಿದೆ. ರಕ್ಷಣೆ ಮಾಡಿದ ಏಳು ಯುವತಿಯರು ಮತ್ತು ಮಹಿಳೆಯರನ್ನು ನಗರದ ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಸದ್ಯ ಗಲ್ಲಿ ಗಲ್ಲಿಯಲ್ಲಿ ದೊಡ್ಡ ದೊಡ್ಡ ಸ್ಪಾಗಳು ತಲೆಯೆತ್ತಿವೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಸ್ಪಾಗಳು ಓಪನ್ ಮಾಡುತ್ತಾರೆ. ಹೊರಗಿನಿಂದ ನೋಡಿದ್ರೆ ಜನರಿಗೆ ಫ್ಯಾಮಿಲಿ ಸಲೂನ್ ಮತ್ತು ಮಸಾಜ್ ಸ್ಪಾ ಆಗಿ ಇರುತ್ತದೆ. ಆದ್ರೆ ಈ ಸ್ಪಾಗಳು ಶಿವಮೊಗ್ಗ ನಗರದಲ್ಲಿ ಅನೇಕ ಸ್ಪಾಗಳು ಓಪನ್ ಆಗಿವೆ. ಈ ಸ್ಪಾಗಳಲ್ಲಿ ಮಸಾಜ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಟಿಕೆ ದಂಧೆಗಳು ನಡೆಯುತ್ತವೆ.

ದೊಡ್ಡ ದೊಡ್ಡ ಸ್ಪಾಗಳಲ್ಲಿ ನಡೆಯುತ್ತಿರುವ ಇಂತಹ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಇನ್ನೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕೂಡಾ ಇಂತಹ ಸ್ಪಾಗಳಲ್ಲಿ ನಡೆಯುತ್ತಿರುವ ಯುವತಿಯರ ಮತ್ತು ಮಹಿಳೆಯರ ಮೇಲಿನ ಶೋಷಣೆ ಬಗ್ಗೆ ಗಮನ ಹರಿಸಬೇಕಿದೆ. ಮಲೆನಾಡಿನಲ್ಲಿ ಸ್ಪಾಗಳಲ್ಲಿ ಮಸಾಜ್ ಹೆಸರಿನಲ್ಲಿ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಸಾಜ್ ನೆಪದಲ್ಲಿ ಯುವತಿಯನ್ನು ಹೈಟೆಕ್ ವೇಶ್ಯಾವಟಿಕೆ ದಂದೆಯಲ್ಲಿ ತೊಡಗಿಸುತ್ತಾರೆ. ಈ ಮೂಲಕ ಸ್ಪಾಗಳ ಮಾಲೀಕರು ಲಕ್ಷ ಲಕ್ಷ ಸಂಪಾದನೆ ತುಂಬಾ ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ.. ಇಂತಹವುಗಳ ವಿರುದ್ದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಈ ಸ್ಪಾಗಳ ದಂಧೆಗೆ ಕಡಿವಾಣ ಹಾಕಬೇಕಿದೆ.

ಶಿವಮೊಗ್ಗದಲ್ಲಿ ಹೈಟೆಕ್ ವೇಶ್ಯಾವಾಟಿಕೆಯು ಜೋರಾಗಿ ನಡೆಯುತ್ತಿದೆ. ಸ್ಪಾ ಗಳಲ್ಲಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ ನಡೆಯುತ್ತಿದೆ. ಗಪ್ ಚುಪ್ ಆಗಿ ಸ್ಪಾಗಳಲ್ಲಿ ನಡೆಯವ ಈ ದಂದೆಗೆ ಪೊಲೀಸರು ಕಡಿವಾಣ ಹಾಕಬೇಕಿದೆ. ಈ ಮೂಲಕ ಚಿಕ್ಕ ವಯಸ್ಸಿನಲ್ಲಿ ಯುವತಿಯರು ವೇಶ್ಯಾವಾಟಿಕೆ ದಂದೆಗೆ ಬೀಳುವುದನ್ನು ತಪ್ಪಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:46 pm, Wed, 28 June 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ