- Kannada News Photo gallery Thombattu Irkigedde Falls attracting tourists for this monsoon udupi news
Thombattu Irkigedde Falls: ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ ಇರ್ಕಿಗದ್ದೆ ಜಲಪಾತ
ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.
Updated on: Jul 23, 2023 | 2:12 PM

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿಗದ್ಸೆ ಫಾಲ್ಸ್ ಇದೆ.

ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.
























