ಶಿವಮೊಗ್ಗ: ‘ಕಾಂಗ್ರೆಸ್ಗೆ ಸಿದ್ಧಾಂತ, ನಾಯಕತ್ವ ಇಲ್ಲ’ ಪಂಜಾಬ್ನಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಸಾಧನೆ ಮಾಡಿದಂತೆ ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕೂಪವಾಗಿದೆ ಎಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಕಾರ್ಯಕರ್ತರ ಪರಿಶ್ರಮ ಕೊಂಡಾಡಿದ್ದಾರೆ. ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಕೂಪ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಹೇಳಿಕೆಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಕಾರ್ಯಕರ್ತರ ಪರಿಶ್ರಮ ಕೊಂಡಾಡಿದ್ದಾರೆ. ಹಿರಿಯರ ಪರಿಶ್ರಮದಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮಾಜಿ ಸಿಎಂ ಬಿಎಸ್ವೈ ಅವರ ಹೋರಾಟದಿಂದ ಪಕ್ಷ ಇಂದು ಅಧಿಕಾರಕ್ಕೆ ಬಂದಿದೆ. ಅಂದಿನ ಕಾಂಗ್ರೆಸ್ ನವರಿಗೆ ಬಿಎಸ್ವೈ ಹೋರಾಟದಿಂದ ನಡುಕ ಶುರುವಾಗಿತ್ತು. ಇಂದಿನ ಕಾಂಗ್ರೆಸ್ ಪೊಳ್ಳು ಕಾಂಗ್ರೆಸ್ ಆಗಿದೆ ಎಂದು ಬಿಎಸ್ವೈಗೆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಸಲಾಂ ಹೇಳಿದ್ದಾರೆ. 25 ವರ್ಷ ವಿಪಕ್ಷದಲ್ಲಿದ್ದು ಬಿಎಸ್ವೈ ಹೋರಾಟ ಮಾಡಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಇಲಾಖೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕೊವಿಡ್ ನಿಯಂತ್ರಣದಲ್ಲಿ ಬಿಜೆಪಿ ಸರಕಾರಗಳು ದೊಡ್ಡ ಯಶಸ್ಸು ಸಾಧಿಸಿದೆ. ಕರ್ನಾಟಕ ಸುಭೀಕ್ಷೆ ಕಟ್ಟಲು ಕಾರ್ಯಕರ್ತರು ಪರಿಶ್ರಮ ಅತ್ಯಗತ್ಯ. 9000 ಸಾವಿರ ಕೋಟಿ ಹಣ ಕೇಂದ್ರ ರಾಜ್ಯಕ್ಕೆ ನೀಡಿದೆ. ಮತ್ತೆ ಡಬಲ್ ಇಂಜೀನ್ ಸರಕಾರ ಬರಬೇಕು. ಈ ಮೂಲಕ ದೇಶ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ರಾಹುಲ್ ಗಾಂಧಿ ಎಷ್ಟು ಭಾರಿ ಭೇಟಿ ನೀಡಿದ್ರೂ ಸಂತಸ
ಕರ್ನಾಟಕಕ್ಕೆ ರಾಹುಲ್ ಗಾಂಧಿ ಭೇಟಿ ನಂತರ ಸಂತಸವಾಗಿದೆ. ರಾಹುಲ್ ಭೇಟಿ ನೀಡಿದ ರಾಜ್ಯಗಳಲ್ಲೆಲ್ಲಾ ಕಾಂಗ್ರೆಸ್ ನಿರ್ನಾಮ. ಹೀಗಾಗಿ ರಾಹುಲ್ ಗಾಂಧಿ ಎಷ್ಟು ಭಾರಿ ಭೇಟಿ ನೀಡಿದ್ರೂ ಸಂತಸ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಹೇಳಿದ್ರು. ಡಿಕೆಶಿ ಮುಖ ಪೂರ್ವಕ್ಕೆ, ಸಿದ್ದರಾಮಯ್ಯ ಮುಖ ಪಶ್ಚಿಮಕ್ಕೆ. ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ನಾಯಕರು ಚಕಾರ ಎತ್ತಲಿಲ್ಲ. ಕಾಂಗ್ರೆಸ್ ಪಕ್ಷ ದೇಶವನ್ನು ವಿಭಜನೆ ಮಾಡಲು ಹೊರಟಿದೆ. ಹಾಗಾಗಿ ಕಾಂಗ್ರೆಸ್ನವರ ಕೈಯಲ್ಲಿ ಆಡಳಿತ ಕೊಡಬಾರದು. ಗರೀಬಿ ಹಟಾವೋ ಎಂಬ ಕಾಂಗ್ರೆಸ್ ಘೋಷವಾಕ್ಯ ಈಗಿಲ್ಲ. ಡಬಲ್ ಇಂಜಿನ್ ಸರ್ಕಾರದಿಂದ ರೈತರಿಗೆ ಲಾಭವಾಗಿದೆ ಎಂದರು.
ಇನ್ನು ಇದೇ ವೇಳೆ ಸಿಎಂ ಬೊಮ್ಮಾಯಿ, ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ತಪ್ಪು ಮಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತೇವೆ ಎಂದು ದಿಂಗಾಲೇಶ್ವರ ಶ್ರೀಗಳು ಕಮಿಷನ್ ಆರೋಪ ಬಗ್ಗೆ ಸಿಎಂ ಮಾತನಾಡಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಬಳಿ ದಾಖಲೆ ಇದ್ದರೆ ನೀಡಲಿ. ಸ್ವಾಮೀಜಿಗಳು ದಯವಿಟ್ಟು ದಾಖಲೆ ಬಿಡುಗಡೆ ಮಾಡಲಿ. ವರಿಷ್ಠರು ಹೇಳಿದಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ, ವರಿಷ್ಠರ ಆದೇಶ ಬಳಿಕ ನಿರ್ಧಾರ ಮಾಡುತ್ತೇವೆ ಎಂದರು.
ಇದನ್ನೂ ಓದಿ: ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ಸಹಾಯಧನದಲ್ಲಿ ಕಾಶಿ ಯಾತ್ರೆ ಪ್ರವಾಸ; ರಾಜ್ಯ ಸರ್ಕಾರ ಆದೇಶ
ಡಿಗ್ರಿ ಮುಗಿದು 2ವರ್ಷಗಳಾದರೂ ಸಿಗದ ಉದ್ಯೋಗ; ಕಾಲೇಜು ಸಮೀಪವೇ ಚಹಾ ಮಾರುತ್ತಿರುವ ಯುವತಿ