ಚನ್ನಪಟ್ಟಣ ಬೈ ಎಲೆಕ್ಷನ್ ಕದನದಲ್ಲಿ ಕುಮಾರಸ್ವಾಮಿಯ ಆಡಿಯೋ ಬಾಂಬ್ ಸ್ಫೋಟ

|

Updated on: Nov 06, 2024 | 4:48 PM

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ರಂಗೇರಿದೆ. ಬಿಜೆಪಿ ಮತ್ತು ಜೆಡಿಎಸ್​​ ಸೇರಿಕೊಂಡು ಆಡಳಿತರೂಢ ಕಾಂಗ್ರೆಸ್​ ಅಭ್ಯರ್ತಿಗೆ ಮಣ್ಣುಮುಕ್ಕಿಸಲು ಇನ್ನಿಲ್ಲದ ಕಸರತ್ತು ನಡೆಸಿವೆ. ಇನ್ನು ಇತ್ತ ಕಾಂಗ್ರೆಸ್ ಸಹ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಸೋಲಿಸಲು ಪಣತೊಟ್ಟಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯ ಡಿಕೆ ಸುರೇಶ್ ಅವರು ಎಚ್​ಡಿ ಕುಮಾರಸ್ವಾಮಿ ಅವರ ಹಳೇ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಚನ್ನಪಟ್ಟಣ ಬೈ ಎಲೆಕ್ಷನ್ ಕದನದಲ್ಲಿ ಕುಮಾರಸ್ವಾಮಿಯ ಆಡಿಯೋ ಬಾಂಬ್ ಸ್ಫೋಟ
ಕುಮಾರಸ್ವಾಮಿ-ಡಿಕೆ ಸುರೇಶ್
Follow us on

ರಾಮನಗರ, (ನವೆಂಬರ್ 06): ಚನ್ನಪಟ್ಟಣ ಉಪಚುನಾವಣೆ ಕಣದಲ್ಲಿ ಎನ್​ಡಿಎ ಮತ್ತು ಕಾಂಗ್ರೆಸ್​ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಎನ್​ಡಿಎ ಕಸರತ್ತು ನಡೆಸಿದೆ. ಇನ್ನು ಕಾಂಗ್ರೆಸ್​ ಈ ಬಾರಿ ಗೆದ್ದು ಕೇಂದ್ರ ಸಚಿವ ಕುಮಾರಸ್ವಾಮಿಗ್ ಶಾಕ್ ಕೊಡಲು ತೀರ್ಮಾನಿಸಿದೆ. ಇದರ ಮಧ್ಯ ಮಾಜಿ ಸಂಸದ ಡಿಕೆ ಸುರೇಶ್ ಅವರು ಕುಮಾರಸ್ವಾಮಿಯವರ ಆಡಿಯೋ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಜನರ ಬಳಿ ಹೆಚ್ಚು ಹೋಗಬಾರದು, ಮತದಾನಕ್ಕೆ ಇನ್ನೆಂಟು ದಿನ ಇರುವಾಗ ಹೋಗಿ ಪ್ರಚಾರ ಮಾಡಬೇಕು ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದ ಆಡಿಯೋ ಸಿಡಿಯೊಂದನ್ನು ಬಹಿರಂಗಪಡಿಸಿ ಟೀಕಿಸಿದ್ದಾರೆ.

ಚನ್ನಪಟ್ಟಣ ಚುನಾವಣಾ ಪ್ರಚಾರ ವೇಳೆ ಆಡಿಯೋ ಬಿಡುಗಡೆ ಮಾಡಿದ ಡಿ. ಕೆ ಸುರೇಶ್, ಅಭಿವೃದ್ಧಿ ಗೆ ಜನ ಮತ ಹಾಕಲ್ಲ, ಎಂಟು ದಿನದ ಹಿಂದೆ ಜನರ ಬಳಿ ಹೋಗಬೇಕು. ಚುನಾವಣಾ ತಂತ್ರ ಮಾಡಬೇಕು. ಜನರ ಬಳಿ ಹೆಚ್ಚು ಹೋಗಬಾಗರದು, 8 ದಿನದಲ್ಲಿ ಪ್ರಚಾರ ಮಾಡಬೇಕು ಎಂದು ಆಗಿನ ಸಿಎಂ ಆಗಿದ್ದ ಕುಮಾರಸ್ವಾಮಿ ಹೇಳಿದ್ರು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಇಡಿ, ಸಿಬಿಐ ದುರ್ಬಳಕೆ ಆರೋಪ: ನಾಳೆ ದಿಲ್ಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನಾ ಸಭೆ

ಕುಮಾರಸ್ವಾಮಿ ಕೆಂಡಾಮಂಡಲ

ಇನ್ನು ಆಡಿಯೋ ರಿಲೀಸ್ ಮಾಡಿರುವುದಕ್ಕೆ ಟಿವಿ9ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಸಿಡಿ ಆಡಿಯೋ ವಿಡಿಯೋ ಬಿಡುವಂತ ಎಕ್ಷಫರ್ಟ್‌ಗಳು. ಅವರನ್ನು ಹಿಡಿಯಲು ಆಗುತ್ತಾ ? ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು ಎಂದು ಸ್ಪಷ್ಟಪಡಿಸಿದರು.

ಆಡಿಯೋ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು, ಒಂದು ವಾರದಿಂದ ಅದನ್ನು ಕಟಿಂಗ್ ಮಾಡಿ ಹಂಚುತ್ತಿದ್ದಾರೆ. ಅದು ನನ್ನ ಹೇಳಿಕೆಯಲ್ಲ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದೆ. ಇಸ್ಪೀಟ್ ಕ್ರಿಕೆಟ್‌ ಬೆಟ್ಟಿಂಗ್ ದಂಧೆ ನಡೆಸುವವರು 5 ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಅಂದ ವಿಚಾರದ ಬಗ್ಗೆ ಹೇಳಿದ್ದೆ. ಅದನ್ನು ಮದ್ದೂರು ವಿಷಯಕ್ಕೆ ಹೇಳಿದ್ದು ಎಂದು ಸ್ಪಷ್ಟಪಡಿಸಿದರು.

ನನ್ನ ಚುನಾವಣೆಯಲ್ಲಿ ಕಾರ್ಯಕರ್ತರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ. ಕ್ಯಾಸೆಟ್ ಪುಲ್ ಪ್ಲೇ ಮಾಡಲು ಹೇಳಿ ಅವರ ಯೋಗ್ಯತೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಹಾಸನದಲ್ಲೂ ಇದಕ್ಕಿಂತ ಕೆಟ್ಟದಾಗಿ ಮಾಡಿದರು. ನನ್ನ ಮೇಲೆ ಹೇಳಲು ಏನು ಇಲ್ಲವಲ್ಲ ಅದಕ್ಕೆ. ಯೋಗೇಶ್ವರ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಸಿಡಿ ಪ್ಲೈಯರ್ಸ್ ಆ ಸಂತತಿಯಲ್ಲಿ ಬಂದವರು. ಇದಕ್ಕೆಲ್ಲಾ ನಮ್ಮ ಜನ ಬೆಲೆ ಕೊಡುತ್ತಾರಾ ? ನಾನು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊರಟಿದ್ದೇನೆ. ಅವರು ಏನೇ ಮಾತನಾಡಿದರೂ ಚನ್ನಪಟ್ಟಣದ ಜನ 13ಕ್ಕೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.