ಈಶ್ವರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಜೈಕಾರ ಹಾಕಿದ ಕಾಂಗ್ರೆಸ್ ಶಾಸಕ! ಯಾರು? ಎಲ್ಲಿ?

| Updated By: ganapathi bhat

Updated on: Apr 06, 2022 | 11:03 PM

ಮಾಜಿ ಸಿ.ಎಂ. ಸಿದ್ದರಾಮಯ್ಯ ಆಪ್ತರಾಗಿರುವ ಶಾಸಕ ರಾಮಪ್ಪ, ಸಮಾವೇಶದಲ್ಲಿ ಹೀಗೆ ಘೋಷಣೆ ಕೂಗಿದ್ದಾರೆ. 5 ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮವಹಿಸಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಜೈಕಾರ ಹಾಕಿದ್ದಾರೆ.

ಈಶ್ವರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಜೈಕಾರ ಹಾಕಿದ ಕಾಂಗ್ರೆಸ್ ಶಾಸಕ! ಯಾರು? ಎಲ್ಲಿ?
ಕಾಂಗ್ರೆಸ್ ಶಾಸಕ ರಾಮಪ್ಪ
Follow us on

ದಾವಣಗೆರೆ: ಬಿಜೆಪಿ ನಾಯಕ ಈಶ್ವರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಶಾಸಕ ರಾಮಪ್ಪ ಜೈಕಾರ ಹಾಕಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕುರುಬರ ಸಮಾವೇಶದಲ್ಲಿ ಹರಿಹರದ ಕಾಂಗ್ರೆಸ್ ಶಾಸಕ ರಾಮಪ್ಪ ಹೀಗೆ ಜೈಕಾರ ಹಾಕಿದ್ದಾರೆ. ದಾವಣೆಗೆರೆಯ ಬೀರಲಿಂಗೇಶ್ವರ ದೇಗುಲದ ಆವರಣದಲ್ಲಿ ಕುರುಬ ಸಮುದಾಯದ ಎಸ್​​ಟಿ ಮೀಸಲಾತಿ ಸಮಾವೇಶ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಶಾಸಕ ರಾಮಪ್ಪ, ಸಮಾವೇಶದಲ್ಲಿ ಹೀಗೆ ಘೋಷಣೆ ಕೂಗಿದ್ದಾರೆ. 5 ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮವಹಿಸಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಜೈಕಾರ ಹಾಕಿದ್ದಾರೆ. ಈ ಬಗ್ಗೆ ವೇದಿಕೆಯಲ್ಲೇ ‘ಕೈ’ ಶಾಸಕ ಎಸ್.ರಾಮಪ್ಪ ಒತ್ತಾಯಿಸಿದ್ದಾರೆ. ಈಶ್ವರಪ್ಪ ಸಿಎಂ ಆಗಲೇಬೇಕು ಎಂದು ಜೈಕಾರ ಹಾಕಿದ್ದಾರೆ.

ಇನ್ನೊಂದೆಡೆ ಶಾಸಕ ಆರ್.ಶಂಕರ್ ಮತ್ತೊಂದು ಬಗೆಯ ಹೇಳಿಕೆ ನೀಡಿದ್ದಾರೆ. ನಾನು ಈಗಾಗಲೇ ಮಂತ್ರಿಯಾಗಿರಬೇಕಾಗಿತ್ತು. ಯಾಕೋ ಸಚಿವನಾಗುವ ಅವಕಾಶ ಮುಂದೆ ಹೋಗುತ್ತಿದೆ. ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಯಾಕೋ ಗೊತ್ತಿಲ್ಲ. ಅದು ಮುಂದಕ್ಕೆ ಹೋಗುತ್ತಿದೆ ಎಂದು ದಾವಣಗೆರೆಯಲ್ಲಿ ಶಾಸಕ ಆರ್.ಶಂಕರ್ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಗೋ ಪೂಜೆ ಮಾಡಲು ಹೊರಟಾಗ ಸಚಿವ ಈಶ್ವರಪ್ಪಗೆ ಗೋವಿನ ಗುದ್ದು!

Published On - 6:11 pm, Wed, 6 January 21