ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆ: ಡಿ. ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ವಿವಾದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ​ ಸರ್ಕಾರ ಇಂದು ಇತಿಶ್ರೀ ಹಾಡಿದೆ. ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ವಿವಾದಗಳು ನಡೆದು ಸರ್ಕಾರಕ್ಕೆ ಮುಜುಗರವುಂಟಾಗಿತ್ತು.

ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆ: ಡಿ. ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
ಹೇಮಂತ್ ನಿಂಬಾಳ್ಕರ್ ಮತ್ತು ಡಿ.ರೂಪಾ
ಸಾಧು ಶ್ರೀನಾಥ್​

Updated on: Dec 31, 2020 | 6:44 PM

ಬೆಂಗಳೂರು: ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆಯಾಗಿದ್ದು, ರೂಪಾ ಮೌದ್ಗಿಲ್ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ವಿವಾದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ​ ಸರ್ಕಾರ ಇಂದು ಇತಿಶ್ರೀ ಹಾಡಿದೆ. ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ವಿವಾದಗಳು ನಡೆದು ಸರ್ಕಾರಕ್ಕೆ ಮುಜುಗರವುಂಟಾಗಿತ್ತು.

ಇಂದು ಸಂಜೆ ಹೊರಬಿದ್ದಿರುವ ವರ್ಗಾವಣೆ ಆದೇಶದಲ್ಲಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.  ರೂಪಾ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿಯೂ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿ ಯನ್ನಾಗಿ ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ ಇತರೆ 7 ಅಧಿಕಾರಿಗಳು

1. ಡಾ. ಕೆ ರಾಮಚಂದ್ರರಾವ್ -ಎಡಿಜಿಪಿ, ಮಾನವ ಹಕ್ಕುಗಳು ಮತ್ತು ಕುಂದುಕೊರತೆ ಇಲಾಖೆ
2. ಮಾಲಿನಿ ಕೃಷ್ಣಮೂರ್ತಿ -ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್), ಗೃಹ ಖಾತೆ
3. ಎಂ ಚಂದ್ರಶೇಖರ್​ -ಐಜಿ, ಸೆಂಟ್ರಲ್ ರೇಂಜ್-ಬೆಂಗಳೂರು
4. ವಿಫುಲ್​ ಕುಮಾರ್ -ನಿರ್ದೇಶಕ, ಪೊಲೀಸ್ ಅಕಾಡೆಮಿ, ಮೈಸೂರು
5. ವಿಕಾಶ್​ ಕುಮಾರ್​ ವಿಕಾಶ್​ -ಡಿಐಜಿ, ಕೆ ಎಸ್​ ಆರ್​ಪಿ, ಬೆಂಗಳೂರು
6. ವರ್ತಿಕಾ ಖಟಿಯಾರ್ -ಎಸ್​ಪಿ, ರಾಜ್ಯ ಕ್ರೈಂ ರೆಕಾರ್ಡ್ಸ್​​ ಬ್ಯೂರೋ
7. ರಂಜಿತ್​ ಕುಮಾರ್​ ಬಂಡಾರು – ಎ ಎಸ್​ಪಿ, ಭಟ್ಕಳ

Published On - 6:25 pm, Thu, 31 December 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us