ಬೆಂಗಳೂರು: ಮಹಾಮಾರಿ ಕೊರೊನಾದಿಂದಾಗಿ ರಾಜ್ಯದಲ್ಲಿ ಕೊರೊನಾ ಬೆಡ್ಗಳ ಅಭಾವ ಎದುರಾಗಿ ಜನ ಬೆಡ್ ಇಲ್ಲದೆ ಆಂಬ್ಯುಲೆನ್ಸ್ಗಳಲ್ಲೇ ನರಳಿ ನರಳಿ, ತಮ್ಮ ಪ್ರೀತಿಪಾತ್ರರ ಎದುರೇ ಪ್ರಾಣ ಬಿಡುತ್ತಿದ್ದರು. ಆದರೆ ಸದ್ಯ ಈಗ ಬೆಡ್ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಬೆಡ್ ಬೇಡಿಕೆ ತಗ್ಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಇಳಿಕೆಯಾದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಕೊಂಚ ಮಟ್ಟಿಗೆ ಬೆಡ್ಗಳು ಖಾಲಿಯಾಗಿವೆ.
ಮೇ ತಿಂಗಳ ಆರಂಭದಲ್ಲಿ ಬೆಡ್ಗಳ ಹಾಹಾಕಾರ ಎದುರಾಗಿತ್ತು. ಸದ್ಯ ಜೂನ್ ತಿಂಗಳು ಆರಂಭವಾಗಿದ್ದು, ಬೆಡ್ ಬೇಡಿಕೆ ಕಡಿಮೆಯಾಗಿದೆ. ಸರ್ಕಾರಿ ಕೋಟಾದ 13,383 ಬೆಡ್ ಪೈಕಿ 8,366 ಬೆಡ್ಗಳು ಖಾಲಿ ಉಳಿದಿವೆ. ನಗರದಲ್ಲಿ ಇನ್ನೂ 4920 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಒಟ್ಟು ಜನರಲ್ ಬೆಡ್ಗಳ ಸಂಖ್ಯೆ 7,191. ಈ ಪೈಕಿ ಜನರಲ್ ಬೆಡ್ನಲ್ಲಿ 1,304 ಸೋಂಕಿತರು ದಾಖಲಾಗಿದ್ದು 5,848 ಬೆಡ್ ಖಾಲಿ ಇದೆ.
4,964 ಹೆಚ್ಡಿಯು ಬೆಡ್ ಪೈಕಿ 2475 HDU ಬೆಡ್ ಖಾಲಿ. 639 ICU ವೆಂಟಿಲೇಟರ್ ಬೆಡ್ ಪೈಕಿ 17 ಬೆಡ್ ಖಾಲಿ ಇದೆ. ಹಾಗೂ 589 ಐಸಿಯು ಬೆಡ್ ಪೈಕಿ 25 ಐಸಿಯು ಬೆಡ್ ಖಾಲಿ ಇದೆ. ಸದ್ಯ ನಗರದಲ್ಲಿ ಸೋಂಕು ಇಳಿಮುಖವಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾಣಿಸುತ್ತಿವೆ ಖಾಲಿ ಬೆಡ್