ಕೊರೊನಾ 3ನೇ ಅಲೆ ಭೀತಿ; ಭೌತಿಕವಾಗಿ ಶಾಲೆ ಆರಂಭ ತಡವಾದರೆ ವಿದ್ಯಾಗಮ-2 ಆರಂಭಕ್ಕೆ ಸಿದ್ಧತೆ

| Updated By: ಆಯೇಷಾ ಬಾನು

Updated on: Jul 13, 2021 | 9:39 AM

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳ ಕಲಿಕೆ ಅತಂತ್ರವಾಗಿದೆ. ಮಕ್ಕಳು ಶಾಲೆಯ ಮುಖವನ್ನೇ ಬರೆತಿದ್ದಾರೆ. ಈಗ ಮತ್ತೆ ಮೂರನೇ ಅಲೆಯ ಆತಂಕ ಎದುರಾಗಿದ್ದು ಮಕ್ಕಳ ನಿರಂತರ ಕಲಿಕೆಗೆ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗ ಕಂಡು ಕೊಂಡಿದೆ.

ಕೊರೊನಾ 3ನೇ ಅಲೆ ಭೀತಿ; ಭೌತಿಕವಾಗಿ ಶಾಲೆ ಆರಂಭ ತಡವಾದರೆ ವಿದ್ಯಾಗಮ-2 ಆರಂಭಕ್ಕೆ ಸಿದ್ಧತೆ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೂ ಮೊದಲು ವಿದ್ಯಾಗಮ-2 ಆರಂಭಿಸಲು ಚಿಂತಿಸಲಾಗುತ್ತಿದೆ. ಭೌತಿಕವಾಗಿ ಶಾಲೆ ಆರಂಭ ತಡವಾದರೆ ವಿದ್ಯಾಗಮ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಮಕ್ಕಳ ಕಲಿಕೆ ಅತಂತ್ರವಾಗಿದೆ. ಮಕ್ಕಳು ಶಾಲೆಯ ಮುಖವನ್ನೇ ಬರೆತಿದ್ದಾರೆ. ಈಗ ಮತ್ತೆ ಮೂರನೇ ಅಲೆಯ ಆತಂಕ ಎದುರಾಗಿದ್ದು ಮಕ್ಕಳ ನಿರಂತರ ಕಲಿಕೆಗೆ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗ ಕಂಡು ಕೊಂಡಿದೆ. ಭೌತಿಕ ತರಗತಿ ಸಾಧ್ಯವಾಗದಿದ್ದರೆ ವಿದ್ಯಾಗಮ -2 ಯೋಜನೆಗೆ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ಶಾಲೆ ಆರಂಭ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಈ ಕಾರ್ಯಪಡೆ ಶೈಕ್ಷಣಿಕ ವರ್ಷ, ಶಾಲಾ ತರಗತಿ ಹೇಗೆ ಆರಂಭಿಸಬೇಕು, ವಿದ್ಯಾಗಮ-2ರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್, ಪರ್ಯಾಯ ಶಿಕ್ಷಣ ಬಗ್ಗೆಯೂ ಈ ತಂಡ ವರದಿ ನೀಡಲಿದೆ.

ಕಳೆದ ವರ್ಷದ ಲೋಪ ದೋಷ ಸರಿಪಡಿಸಿ ಪರಿಷ್ಕೃತ ವಿದ್ಯಾಗಮ -2ಜಾರಿ ಮಾಡಲಾಗಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ವಿದ್ಯಾಗಮ ಮತ್ತೆ ಶುರು ಮಾಡಲು ಇಲಾಖೆ ಮುಂದಾಗಿದೆ. ಸದ್ಯ ಮೂರನೇ ಅಲೆ ಭೀತಿ ಇರುವ ಕಾರಣ ಭೌತಿಕ ತರಗತಿ ಸಾಧ್ಯವಾಗದಿದ್ದರೆ ವಿದ್ಯಾಗಮ -2 ಯೋಜನೆಯನ್ನು ಕೈಗೊಳ್ಳಲಾಗುತ್ತೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ಶಿಕ್ಷಣ ಸಚಿವರಿಗೆ ವರದಿ ನೀಡಲಿದೆ.

ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ವಿದ್ಯಾಗಮಕ್ಕೆ ಸಿದ್ಧತೆ ನಡೆಯುತ್ತಿದ್ದು ಆಯಾ ಶಾಲೆಯ 10 ರಿಂದ 15 ಮಕ್ಕಳನ್ನ ನಿಗದಿಪಡಿಸಿ ಪಾಠ ಮಾಡಲಾಗುತ್ತೆ. 15ಕ್ಕಿಂತ ಕಡಿಮೆ ಮಕ್ಕಳನ್ನ ಗುಂಪುಗಳನ್ನಾಗಿಸಿ ಪಾಠಪ್ರವಚನ ಮಾಡಲು ಶಿಕ್ಷಕರು ತಯಾರಾಗಿದ್ದಾರೆ. ಹಳ್ಳಿಹಳ್ಳಿಗೆ ಹೋಗಿ ಮಕ್ಕಳ ಭೋದನೆಗೆ ವಿದ್ಯಾಗಮ ಸಹಾಯಕವಾಗಲಿದೆ. ಮಕ್ಕಳು ಹಾಗೂ ಶಿಕ್ಷಕರ ಸುರಕ್ಷತಾ ಎಚ್ಚರಿಕೆಯೊಂದಿಗೆ ಪಾಠ ಹೇಳಿ ಕೊಡಲಾಗುತ್ತೆ. ಕಳೆದ ಭಾರಿಯಂತೆ ಕೊರೊನಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹರಡದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತೆ. ಕನಿಷ್ಠ ಕಲಿಕೆ ನೀಡುವ ದೃಷ್ಟಿಯಿಂದ ವಿದ್ಯಾಗಮ ಆರಂಭಕ್ಕೆ ಇಲಾಖೆ ಚಿಂತನೆ ನಡೆಸಿದೆ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಭೀತಿ: ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ, ಅನಿರ್ದಿಷ್ಟಾವಧಿ ನಿಯಮ ಜಾರಿ