ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಚಿಂತನೆ: ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಅತಿ ಹೆಚ್ಚು ಪ್ರಮಾಣದ ಹಾಲು ದಾವಣಗೆರೆಯಿಂದ ಹೋಗುತ್ತದೆ. ಒಂದು ವೇಳೆ ದಾವಣಗೆರೆಯಲ್ಲಿಯೇ ಪ್ರತ್ಯೇಕ ಹಾಲು ಒಕ್ಕೂಟವಾದರೆ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ. ಮೇಲಾಗಿ ಇದಕ್ಕೆ ಪೂರಕವಾದ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು, ಸಹಕಾರ ಸಚಿವರೊಂದಿಗೆ ಒಂದು ಸುತ್ತಿನ ಮಾತು ಕತೆ ಕೂಡಾ ಆಗಿದೆ.

ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಚಿಂತನೆ: ಉಸ್ತುವಾರಿ ಸಚಿವ ಭೈರತಿ ಬಸವರಾಜ್
ಭೈರತಿ ಬಸವರಾಜ್

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಸಹಕಾರ ಸಚಿವರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ (Byrathi Basavaraj) ಹೇಳಿಕೆ ನೀಡಿದ್ದಾರೆ. ಪ್ರಸ್ತುತ ದಾವಣಗೆರೆ (Davanagere) ಜಿಲ್ಲೆ ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಸೇರಿದೆ. ಆದರೆ, ಅಲ್ಲಿಗೆ ದಾವಣಗೆರೆಯಿಂದಲೇ ಅತ್ಯಧಿಕ ಪ್ರಮಾಣದಲ್ಲಿ ಹಾಲು ಹೋಗುತ್ತಿದ್ದು, ಇಲ್ಲಿನ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ (Milk union) ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಅತಿ ಹೆಚ್ಚು ಪ್ರಮಾಣದ ಹಾಲು ದಾವಣಗೆರೆಯಿಂದ ಹೋಗುತ್ತದೆ. ಒಂದು ವೇಳೆ ದಾವಣಗೆರೆಯಲ್ಲಿಯೇ ಪ್ರತ್ಯೇಕ ಹಾಲು ಒಕ್ಕೂಟವಾದರೆ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ. ಮೇಲಾಗಿ ಇದಕ್ಕೆ ಪೂರಕವಾದ ಸಿದ್ದತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದ್ದು, ಸಹಕಾರ ಸಚಿವರೊಂದಿಗೆ ಒಂದು ಸುತ್ತಿನ ಮಾತು ಕತೆ ಕೂಡಾ ಆಗಿದೆ. ಇನ್ನೇನಿದ್ದರೂ ಇನ್ನೊಂದು ಸುತ್ತಿನ ಮಾತು ಕತೆ ನಡೆಸಿ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ನಿರ್ಧರಿಸಲಾಗುವುದು ಎಂದು ಭೈರತಿ ಬಸವರಾಜ್ ಭರವಸೆ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡವರಿಗೆ ರೇಣುಕಾಚಾರ್ಯ ಬೀಳ್ಕೊಡಿಗೆ
ದಾವಣಗೆರೆ: ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿ ಇದ್ದ ಹೊತ್ತಲ್ಲೂ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುತ್ತಾ ಭಾರೀ ಜನಮನ್ನಣೆ ಗಳಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇದೀಗ ಕೊರೊನಾದಿಂದ ಚೇತರಿಸಿಕೊಂಡವರಿಗೆ ಬೀಳ್ಕೊಡುಗೆ ನೀಡುತ್ತಿದ್ದು, ಅರಬಗಟ್ಟ ಕೊವಿಡ್ ಕೇರ್​ಸೆಂಟರ್​ನಿಂದ ಇಂದು ಹನ್ನೊಂದು ಜನ ಗುಣಮುಖರಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ಇದೇ ಸೆಂಟರ್​ನಲ್ಲಿ ಶಾಸಕ ರೇಣುಕಾಚಾರ್ಯ ದಂಪತಿ ವಾಸ್ತವ್ಯ ಹೂಡಿದ್ದು, ಕೊರೊನಾ ಪೀಡಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನಿತ್ಯ ಯೋಗ, ಧ್ಯಾನ, ಸಂಜೆ ವೇಳೆಗೆ ರಸಮಂಜರಿ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದ ಶಾಸಕ ರೇಣುಕಾಚಾರ್ಯ ಕೊರೊನಾ ಪೀಡಿತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಅರಬಗಟ್ಟ ಕೊವಿಡ್ ಕೇರ್​ಸೆಂಟರ್​ನಲ್ಲಿ ಕೇವಲ ಹನ್ನೊಂದು ಜನ ಸೋಂಕಿತರು ಮಾತ್ರ ಉಳಿದಿದ್ದು ಅವರೂ ಶೀಘ್ರದಲ್ಲೇ ಗುಣಮುಖರಾಗಿ ತೆರಳುವ ವಿಶ್ವಾಸವನ್ನು ಅಲ್ಲಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

(Davanagere Incharge minister Byrathi Basavaraj decisioning to make separate Milk union in district)

ಇದನ್ನೂ ಓದಿ:
ಪ್ರತಿದಿನ ಹೊಸ ತಿರುವು ಕಾಣುತ್ತಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಗರಣಕ್ಕೀಗ ರಾಜಕೀಯ ಲೇಪ, ತನಿಖೆಗೆ ದೊಡ್ಡ ಗೌಡರ ಕುಟುಂಬ ಅಡ್ಡಗಾಲು? 

ಕಸ್ಟಮರ್ ಕೇರ್​ ಹೆಸರಿನಲ್ಲಿ ಪಾಸ್​ವರ್ಡ್​ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್​ನಿಂದ 13.45 ಲಕ್ಷ ರೂಪಾಯಿ ಡ್ರಾ

Click on your DTH Provider to Add TV9 Kannada