Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧ್ಯಯನ ವರದಿ: ಧೂಳು ಹೆಚ್ಚಿರುವ ನಗರಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಬೆಂಗಳೂರಿಗೆ ಆತಂಕ?

ಧೂಳಿನ ಪಿಎಂ ಲೆವೆಲ್ 2.5ಕ್ಕಿಂತ ಅಧಿಕವಾಗಿರುವ ಸ್ಥಳಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತದೆ ಎಂಬುದನ್ನು ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯ ಹಾಗೂ ಮಹಾರಾಷ್ಟ್ರದ ಪುಣೆಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿಯಿಂದ ನಡೆಸಿದ್ದ ಸಂಶೋಧನೆಯು ಬಹಿರಂಗಪಡಿಸಿದೆ. ವಾಯುಮಾಲಿನ್ಯ ಹೆಚ್ಚಿರುವ ಬೆಂಗಳೂರಿನಲ್ಲೂ ಕೊರೊನಾ ಹೆಚ್ಚಾಗುವ ಆತಂಕ ಎದುರಾಗಿದೆ.

ಅಧ್ಯಯನ ವರದಿ: ಧೂಳು ಹೆಚ್ಚಿರುವ ನಗರಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಬೆಂಗಳೂರಿಗೆ ಆತಂಕ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: shivaprasad.hs

Updated on: Jul 03, 2021 | 12:08 PM

ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯ ಹಾಗೂ ಮಹಾರಾಷ್ಟ್ರದ ಪುಣೆಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿಯು ನಡೆಸಿದ್ದ ಸಂಶೋಧನೆಯು ಎಲ್ಲರ ಗಮನ ಸೆಳೆದಿದೆ. ಈ ಅಧ್ಯಯನವು ಧೂಳು ಹಾಗೂ ವಾಯುಮಾಲಿನ್ಯವು ಕೊರೊನಾ ಸೋಂಕು ಹೆಚ್ಚಲು ಕಾರಣವಾಗುತ್ತದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಧೂಳಿನ ಪಿಎಂ ಲೆವೆಲ್ 2.5ಕ್ಕಿಂತ ಹೆಚ್ಚಾಗಿದ್ದರೆ ಕೊರೊನಾ ಸೋಂಕು ಕೂಡಾ ಹೆಚ್ಚುತ್ತದೆ. ಇದರಿಂದಾಗಿ ಸೋಂಕಿತರಲ್ಲಿ ಗಂಭೀರ ಪ್ರಮಾಣದ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. ಈ ವರದಿಯನ್ನು ವಾಯು ಗುಣಮಟ್ಟ ಮತ್ತು ಸಂಶೋಧನಾ ವ್ಯವಸ್ಥೆ (ಎಸ್​ಎಎಫ್​ಎಆರ್) ಬಿಡುಗಡೆ ಮಾಡಿದೆ.

ಅಧ್ಯಯನ ನಡೆಸಿದ್ದು ಹೇಗೆ? ಕಳೆದ ವರ್ಷ ನವೆಂಬರ್‌ನಿಂದ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ದೇಶದ 900ಕ್ಕೂ ಹೆಚ್ಚು ಪ್ರದೇಶಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಈ ಪಟ್ಟಿಯಲ್ಲಿ ದೆಹಲಿ, ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಗುಜರಾತ್, ಒಡಿಶಾ, ಮಧ್ಯಪ್ರದೇಶ ಸೇರಿ ವಿವಿಧ ಸ್ಥಳಗಳನ್ನು ಆಯ್ದುಕೊಳ್ಳಲಾಗಿತ್ತು.

ಸಂಶೋಧನೆ ತಿಳಿಸಿದ್ದೇನು? ಕೊರೊನಾ ಸೋಂಕು  ಹೆಚ್ಚಿರುವ ಪ್ರದೇಶಗಳಲ್ಲಿ ಪಿಎಂ ಲೆವೆಲ್ 2.5 ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಅಧ್ಯಯನವು ಬಹಿರಂಗಪಡಿಸಿದೆ. ಧೂಳು ಹಾಗೂ ವಾಯುಮಾಲಿನ್ಯ ಅಧಿಕವಿರುವ ಪ್ರದೇಶಗಳಲ್ಲಿ ಪಿಎಂ ಲೆವೆಲ್ ಅಧಿಕವಿರುತ್ತದೆ. ಇದು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಿಂದಾಗಿಯೇ ಈ ಪ್ರದೇಶಗಳಲ್ಲಿ ಸೋಂಕು ಹರಡುವ ಪ್ರಮಾಣ ಹಾಗೂ ಅದರಿಂದಾಗುವ ಪರಿಣಾಮ ಹೆಚ್ಚಿರುತ್ತದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಬೆಂಗಳೂರಿಗೇಕೆ ಆತಂಕ? ಬೆಂಗಳೂರಿನಲ್ಲಿ ಕಾಮಗಾರಿ ಹಾಗೂ ವಾಹನ ದಟ್ಟಣೆಯಿಂದಾಗಿ ಧೂಳು ಹಾಗೂ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ತಮಿಳುನಾಡು, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಸೇರಿ ವಿವಿಧೆಡೆ ಹೆಚ್ಚು ಕೊರೊನಾ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಪಿಎಂ ಲೆವೆಲ್ 2.5 ಇರೋದು ದೃಢಪಟ್ಟಿದೆ. ಆದ್ದರಿಂದ ಮೂರನೇ ಅಲೆ ಸಂಭವಿಸಿದರೆ ವಾಯುಮಾಲಿನ್ಯದಿಂದಾಗಿ ಅದರ ಪರಿಣಾಮ ಹೆಚ್ಚಾಗುವ ಆತಂಕ ಎದುರಾಗಿದೆ.

(Corona Cases are high in Polluted states: research study)

ಇದನ್ನೂ ಓದಿ: ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ

ಇದನ್ನೂ ಓದಿ: ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್

ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ