ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಆದರೆ ಈಗ ಕೊರೊನಾ ಪಾಸಿಟಿವಿಟಿ ರೇಟ್ ಕೆಲ ಜಿಲ್ಲೆಗಳಲ್ಲಿ ಕಡಿಮೆಯಿದೆ. ಹಾಗಾಗಿ ಇಂದಿನಿಂದ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಿಗೆ ಅನ್ಲಾಕ್ ಭಾಗ್ಯ ಸಿಕ್ಕಿದೆ. ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕಠಿಣ ನಿಯಮಗಳು ಮುಂದುವರೆಯುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದಲ್ಲಿ ಅನ್ಲಾಕ್ ಆಗಿದೆ.
ಸದ್ಯ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಎಷ್ಟಿದೆ ಎಂದರೆ, ಧಾರವಾಡದಲ್ಲಿ ಪಾಸಿಟಿವಿಟಿ ರೇಟ್ ಶೇ.5.8 ರಷ್ಟಿದೆ. ತುಮಕೂರಿನಲ್ಲಿ ಪಾಸಿಟಿವ್ ರೇಟ್ ಶೇ.8 ರಷ್ಟಿದೆ. ಇನ್ನು ಗದಗದಲ್ಲಿ ಶೇ.1.48 ರಷ್ಟಿದ್ದು, ಶಿವಮೊಗ್ಗದಲ್ಲಿ ಶೇ.8 ಇದೆ. ಪಾಸಿಟಿವಿಟಿ ರೇಟ್ ಚಿತ್ರದುರ್ಗದಲ್ಲಿ ಶೇ.6.64 ಇದ್ದರೇ, ಕೊಪ್ಪಳದಲ್ಲಿ ಶೇ. 4.55 ರಷ್ಟಿರುವುದು ತಿಳಿದುಬಂದಿದೆ. ಮಡಿಕೇರಿಯಲ್ಲಿ ಶೇ.6.06 ರಷ್ಟಿರುವುದು ತಿಳಿದುಬಂದರೆ, ರಾಯಚೂರಿನಲ್ಲಿ ಶೇ.2 ಇದೆ.
ಸದ್ಯ ಯಾದಗಿರಿಯಲ್ಲಿ ಪಾಸಿಟಿವಿಟಿ ರೇಟ್ ಶೇ.1.76, ಕೋಲಾರದಲ್ಲಿ ಶೇ. 4.09, ಚಿಕ್ಕಬಳ್ಳಾಪುರದಲ್ಲಿ ಶೇ.5, ಉಡುಪಿಯಲ್ಲಿ ಶೇ.3.68 ರಷ್ಟಿದ್ದರೆ, ಬೆಳಗಾವಿಯಲ್ಲಿ ಶೇ.7.7 ರಷ್ಟಿದೆ. ಜೊತೆಗೆ ಚಿಕ್ಕಮಗಳೂರಿನಲ್ಲಿ ಕೊರೊನಾ ಆರ್ಭಟ ಕಡಿಮೆಯಾಗಿಲ್ಲ. ಇಲ್ಲಿನ ಪಾಸಿಟಿವಿಟಿ ರೇಟ್ ಶೇ.20 ರಷ್ಟಿದೆ. ಬೆಂಗಳೂರಿನಲ್ಲಿ ಶೇ.3.11, ದಾವಣಗೆರೆಯಲ್ಲಿ ಶೇ.10.38, ಹಾವೇರಿ ಶೇ.2.6, ಬೀದರ್ನಲ್ಲಿ ಶೇ.0.54, ಕಲಬುರಗಿಯಲ್ಲಿ ಶೇ.2, ಹುಬ್ಬಳ್ಳಿಯಲ್ಲಿ ಶೇ.5, ಬಳ್ಳಾರಿಯಲ್ಲಿ ಶೇ.6 ಹಾಗೂ ಮಂಡ್ಯದಲ್ಲಿ ಶೇ.5.36 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಮಂಗಳೂರಿನಲ್ಲಿ ಶೇ.7.19 ಇದ್ದರೆ, ಹಾಸನದಲ್ಲಿ 6.61 ಇದೆ. ಕಾರವಾರದಲ್ಲಿ ಪಾಸಿಟಿವಿಟಿ ರೇಟ್ ಶೇ. 4.95 ಮತ್ತು ರಾಮನಗರದಲ್ಲಿ ಶೇ.3.7 ಇದೆ.
ಇದನ್ನೂ ಓದಿ
(Corona Positivity Rate in Different Districts in Karnataka)
Published On - 9:21 am, Mon, 14 June 21