AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆಟ್ಟಿ ನಿಲ್ಲಲು ಶುರುವಾಯ್ತು ಲಸಿಕೆ ಪರ್ವ, ಯಾವ ಜಿಲ್ಲೆಯಲ್ಲಿ ಎಲ್ಲೆಲ್ಲಿ?

ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಕ್ಕ ಬಳಿಕ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಮೊದಲ ದಿನವಾದ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆಟ್ಟಿ ನಿಲ್ಲಲು ಶುರುವಾಯ್ತು ಲಸಿಕೆ ಪರ್ವ, ಯಾವ ಜಿಲ್ಲೆಯಲ್ಲಿ ಎಲ್ಲೆಲ್ಲಿ?
ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿರುವುದು
ಆಯೇಷಾ ಬಾನು
|

Updated on:Jan 16, 2021 | 2:32 PM

Share

ಬೆಂಗಳೂರು: ಇಂದು ದೇಶಕ್ಕೆ ಐತಿಹಾಸಿಕ ದಿನ. ಕಳೆದ ಒಂದು ವರ್ಷದಿಂದ ಪ್ರಾಣ ಹಿಂಡುತ್ತಿದ್ದ ಕೊರೊನಾವನ್ನು ಹಿಮ್ಮೆಟ್ಟಿಸುವ ಲಸಿಕೆಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ರಾಜ್ಯಾದ್ಯಾಂತ ಎಲ್ಲಾ ಜಿಲ್ಲೆಗಳಲ್ಲಿ ಫ್ರಂಟ್​ಲೈನ್ ವಾರಿಯರ್ಸ್​ಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಕ್ಕ ಬಳಿಕ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಮೊದಲ ದಿನವಾದ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 8 ಕೇಂದ್ರಗಳಲ್ಲಿ 800 ಜನರಿಗೆ ಲಸಿಕೆ ಹಾಕಲಾಗುತ್ತೆ. ಬೆಳಗಾವಿಯ 13 ಕೇಂದ್ರಗಳಲ್ಲಿ 1,300 ಜನರಿಗೆ ಲಸಿಕೆ. ಕೋಲಾರ 600, ಮಂಡ್ಯ 800, ಚಿಕ್ಕಬಳ್ಳಾಪುರ 825, ಗದಗ 700,

ನೆಲಮಂಗಲ ತಾಲೂಕಿನಲ್ಲಿ 200 ಜನರಿಗೆ, ರಾಯಚೂರು 600, ರಾಮನಗರ ಜಿಲ್ಲೆಯಲ್ಲಿ 800 ಜನರಿಗೆ, ಬಾಗಲಕೋಟೆ 780, ಕೊಡಗು ಜಿಲ್ಲೆಯಲ್ಲಿ 470 ಜನರಿಗೆ, ಚಿಕ್ಕಮಗಳೂರು 800, ಚಾಮರಾಜನಗರ ಜಿಲ್ಲೆ 814, ಮೈಸೂರು ಜಿಲ್ಲೆಯ 9 ಕೇಂದ್ರಗಳಲ್ಲಿ 860 ಜನರಿಗೆ ಲಸಿಕೆ, ತುಮಕೂರು 1211, ಚಿತ್ರದುರ್ಗ 800, ಶಿವಮೊಗ್ಗ 900, ಕಲಬುರಗಿ 800, ಬೀದರ್ ಜಿಲ್ಲೆಯಲ್ಲಿ 600 ಜನರಿಗೆ. ಯಾದಗಿರಿ 450, ಹಾಸನ ಜಿಲ್ಲೆಯಲ್ಲಿ 1000 ಜನರಿಗೆ. ದಕ್ಷಿಣ ಕನ್ನಡ 600, ಉತ್ತರ ಕನ್ನಡ 1,100, ಹಾವೇರಿ 900, ಬಳ್ಳಾರಿ 1,100, ವಿಜಯಪುರ 800, ದಾವಣಗೆರೆ 700, ಧಾರವಾಡದಲ್ಲಿ 700, ಕೊಪ್ಪಳ ಜಿಲ್ಲೆಯಲ್ಲಿ ಇಂದು 400 ಜನರಿಗೆ ಲಸಿಕೆ ನೀಡಲಾಗುತ್ತೆ.

ಇನ್ನು ಬೆಂಗಳೂರಿನ ಮಲ್ಲಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಕೋಮಲ ಈ ದಿನದ ಮೊದಲ ಲಸಿಕೆ ಪಡೆದಿದ್ದಾರೆ. ನಗರದ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ರೇಡಿಯಾಲಜಿಸ್ಟ್ ಶುಭಾ ಪ್ರೇಮಾವತಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಈ ವೇಳೆ ಮಾತನಾಡಿದ ಅವರು ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗಳೇ ಮೊದಲು ವ್ಯಾಕ್ಸಿನ್ ಪಡೆಯುತ್ತಿದ್ದೇವೆ. ಸಣ್ಣ ಮಕ್ಕಳಿಗೂ ಹೆಪಟೈಟಿಸ್ ಬಿ ವ್ಯಾಕ್ಸಿನ್ ನೀಡಲಾಗುತ್ತದೆ. ಅದೇ ರೀತಿ ಇದೂ ಒಂದು ವ್ಯಾಕ್ಸಿನ್. ಇದಕ್ಕೆ ಹೆದರುವ ಅಗತ್ಯವಿಲ್ಲ. 4 ಸಾವಿರಕ್ಕೂ ಅಧಿಕ ಸೋಂಕಿತರಿಗೆ ಟೆಸ್ಟ್ ಮಾಡಿದ್ದೇವೆ. ಆದರೆ ನನಗೆ ಕೊವಿಡ್ ಬಂದಿಲ್ಲ. ಎಲ್ಲರಿಗೂ ಮಾದರಿಯಾಗಲು, ಧೈರ್ಯ ತುಂಬಲು ನಾವೇ ಸ್ವಯಂ ಪ್ರೇರಿತವಾಗಿ ವ್ಯಾಕ್ಸಿನ್ ಪಡೆಯುತ್ತಿದ್ದೇವೆ ಎಂದು ಹೇಳಿದ್ರು.

ಬಾಗಲಕೋಟೆಯಲ್ಲಿ ಮೊದಲು ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತ ಕಪಿಲ್ ಗಂಜಿಹಾಳ

ಬಾಗಲಕೋಟೆ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯ ಆರಂಭವಾಗಿದ್ದು ಮೊದಲು ಲಸಿಕೆಯನ್ನು ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತ ಕಪಿಲ್ ಗಂಜಿಹಾಳ ಪಡೆದಿದ್ದಾರೆ.

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಿಗೆ ಧೈರ್ಯ ತುಂಬಲು ಡಾ. ಶಶಿಧರ್ ಮೊದಲು ವ್ಯಾಕ್ಸಿನ್ ಪಡೆದ್ರು. ಬಳಿಕ ಡಿ ಗ್ರೂಪ್ ನೌಕರ ರಾಜಾಭಕ್ಷಿ ಲಸಿಕೆ ಹಾಕಿಸಿಕೊಂಡ್ರು. ಸಂಸದ ಜಿಎಂ ಸಿದ್ದೇಶ್ವರ್, ಡಿಸಿ ಮಹಾಂತೇಶ್ ಬೀಳಗಿ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೋ, ಲಿಂಗಣ್ಣ ಲಸಿಕೆ ವಿತರಣೆಗೆ ಚಾಲನೆ ನೀಡಿದ್ರು.

ಬಳ್ಳಾರಿ: ಲಸಿಕೆ ಬಳಿಕ ಸಂತೋಷ ಹಂಚಿಕೊಂಡ ವಾರಿಯರ್ಸ್

ಕೋವಿಶೀಲ್ಡ್ ಲಸಿಕೆ

ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ಶಾಂತಕುಮಾರ್ ಮೊದಲ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು “ಮೊದಲ ಲಸಿಕೆ ನನಗೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವೆ. ಲಸಿಕೆ ಪಡೆದ ನಂತ್ರ ಯಾವುದೇ ಅಡ್ಡ ಪರಿಣಾಮ ಇಲ್ಲ. ಲಸಿಕೆ ಪಡೆಯಲು ಆರಂಭದಲ್ಲಿ ಆತಂಕ ಇತ್ತು. ಆದರೆ ಲಸಿಕೆ ಪಡೆದ ಬಳಿಕ ತುಂಬಾ ಖುಷಿಯಾಗುತ್ತಿದೆ. ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು ಎಂದರು. ಇನ್ನು ಕೋವಿಡ್ ಲಸಿಕೆ ಪಡೆದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ “ಕೋವಿಡ್ ಲಸಿಕೆ ಕೊರೊನಾ ಹೆಮ್ಮಾರಿ ಹೋಗಲಾಡಿಸುವ ಆಯುಧ. ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆ ಇಲ್ಲ. ಪ್ರತಿಯೊಬ್ಬರು ಈ ಲಸಿಕೆ ಪಡೆಯಬೇಕು. ನನಗೂ ಈ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು ಎಂದರು.

ರಾಯಚೂರಿನ ರಿಮ್ಸ ಆಸ್ಪತ್ರೆಯಲ್ಲಿ ಮೊದಲ‌ ಲಸಿಕೆ ಪಡೆದು ರಿಮ್ಸ್ ಆಸ್ಪತ್ರೆ ಡಿ ಗ್ರೂಪ್ ನೌಕರ ಮಂಜುನಾಥ ಬಲ್ಲಟಗಿ ಸಂತಸ ವ್ಯಕ್ತಪಡಿಸಿದ್ರು. ಕೊರೊನಾ ಸಂದರ್ಭದಲ್ಲಿ ಆತಂಕದಲ್ಲೇ ಕೆಲಸ ಮಾಡಿದ್ದೆ. ಈಗ ಲಸಿಕೆ ಪಡೆದು ತುಂಬಾ ಸಂತೋಷವಾಗಿದೆ. ಇಂಜೆಕ್ಟ್ ಮಾಡಿಸಿಕೊಂಡ ನಂತರವೂ ಆರಾಮಾಗಿದ್ದೇನೆ. ಯಾವುದೇ ತೊಂದರೆಯಾಗ್ತಿಲ್ಲ ಎಂದು ಹೇಳಿದ್ರು.

ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಮೊದಲ ದಿನವೇ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಮೂರ್ತಿ ಕೋ ವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ಬಳಿಕ ಅರ್ಧಗಂಟೆ ನಿಗಾ ವಹಿಸಿ ಯಾವುದೇ ಅಡ್ಡಪರಿಣಾಮ ಇಲ್ಲದ ಕಾರಣ ಸೇಫಾಗಿ ತೆರಳಿದ್ರು. ಇಂದು ಜಿಲ್ಲೆಯಲ್ಲಿ ಒಟ್ಟು ಒಂದು ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 10 ಕೇಂದ್ರಗಳಲ್ಲಿ ಅರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತಿದೆ.

ಹಾಸನದಲ್ಲಿ ಲಸಿಕೆ ಪಡೆದ ವಾರಿಯರ್

ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ‌ಲಕ್ಷ್ಮಣ ಕೊಳೂರ (57) ಎಂಬುವವರು ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ವೇಳೆ ಜಿ.ಪಂ. ಸಿಇಓ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ ಮಹೇಂದ್ರ‌ ಕಾಪಸೆ, ಡಿಎಸ್ ಡಾ ಶರಣಪ್ಪ ಕಟ್ಟಿ ಸೇರಿದಂತೆ ಇತರರು ಹಾಜರಿದ್ರು.

ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡುವಿಕೆ ಆರಂಭವಾಗಿದೆ. ಮಂಗಳೂರಿನ ಗ್ರೂಪ್ ಡಿ ನೌಕರ ರೋಬಿನ್ ಗೆ ಮೊದಲ ಲಸಿಕೆ ಹಾಕಲಾಗಿದೆ. ಮಂಗಳೂರು, ಸುರತ್ಕಲ್, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿದ್ರು. ದಕ್ಷಿಣ ಕನ್ನಡ ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ 600 ಆರೋಗ್ಯ ಸಿಬ್ಬಂದಿಗಳಿಗೆ ಇಂದೇ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಂಡ ನೌಕರ

ಮಡಿಕೇರಿ ಆಸ್ಪತ್ರೆ ಡಿ‌ಗ್ರೂಪ್ ಸಿಬ್ಬಂದಿ ಧನಲಕ್ಷ್ಮೀ ಪ್ರಥಮ ಲಸಿಕೆ ಪಡೆದಿದ್ದಾರೆ. ಪ್ರಥಮ ಹಂತಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದು ಖುಷಿಯ ವಿಚಾರ. ವ್ಯಾಕ್ಸಿನ್ ಪಡೆದ ನನಗೆ ಏನೂ ಆಗಿಲ್ಲ. ಎಲ್ಲರೂ ಧೈರ್ಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೊನಾ ಸಮಯದಲ್ಲಿ ರಜೆ ಪಡೆಯದೇ ದುಡಿದಿದ್ದೇವೆ. ಆತಂಕದಲ್ಲೂ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಲಸಿಕೆ ಬಂದಿದ್ದು, ಇನ್ನೂ ಧೈರ್ಯವಾಗಿ ಕೆಲಸ ಮಾಡುತ್ತೇವೆ ಎಂದು ಧನಲಕ್ಷ್ಮೀ ಹೇಳಿದ್ರು.

Published On - 12:15 pm, Sat, 16 January 21

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್