AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೌರ ಕಾರ್ಮಿಕರಿಗೆ ಮೊದಲ ಲಸಿಕೆ: ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ! ಅಪಸ್ವರ ತೆಗೆದ ಯು.ಟಿ. ಖಾದರ್

ಬೇರೆ ಸಂದರ್ಭಗಳಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆಯಬೇಕಿತ್ತು.

ಪೌರ ಕಾರ್ಮಿಕರಿಗೆ ಮೊದಲ ಲಸಿಕೆ: ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ! ಅಪಸ್ವರ ತೆಗೆದ ಯು.ಟಿ. ಖಾದರ್
ಯು.ಟಿ.ಖಾದರ್ (ಸಂಗ್ರಹ ಚಿತ್ರ)
Skanda
| Edited By: |

Updated on:Jan 16, 2021 | 4:52 PM

Share

ಮಂಗಳೂರು: ಕೊರೊನಾ ಲಸಿಕೆಯನ್ನು ಮೊದಲು ಡಿ ಗ್ರೂಪ್​ ನೌಕರರಿಗೆ ನೀಡುವ ನಿರ್ಧಾರಕ್ಕೆ ಕಾಂಗ್ರೆಸ್​ ನಾಯಕ ಯು.ಟಿ.ಖಾದರ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ, ಅದನ್ನು ಬಡಪಾಯಿ ಡಿ ಗ್ರೂಪ್​ ನೌಕರರ ಮೇಲೆ ಪ್ರಯೋಗಿಸುತ್ತಿರುವುದು ವಿಷಾದನೀಯ ಎಂದಿದ್ದಾರೆ.

ಬೇರೆ ಸಂದರ್ಭಗಳಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಆಡಂಬರದಿಂದ ಹೋಗುವ ಮಂತ್ರಿಗಳು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಮೊದಲು ಲಸಿಕೆ ಪಡೆಯಬೇಕಿತ್ತು. ಬೇರೆ ವಿಚಾರಗಳಲ್ಲಿ ಮುಂದೆ ಹೋಗುವವರು ಲಸಿಕೆ ಪಡೆಯುವಲ್ಲಿ ಮಾತ್ರ ಹಿಂದೆ ಉಳಿದಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಕೆಲವರು ಟೀಕಿಸುತ್ತಿದ್ದು, ಬೇರೆ ದೇಶಗಳಲ್ಲಿ ಅಲ್ಲಿನ ಪ್ರಧಾನಿ, ಅಧ್ಯಕ್ಷರು ಲಸಿಕೆ ತೆಗೆದುಕೊಂಡು ಜನರಿಗೆ ಧೈರ್ಯ ತುಂಬಿದ್ದಾರೆ. ಆದರೆ, ಭಾರತದಲ್ಲಿ ಮಾತ್ರ ತಮ್ಮ ಹಿತಾಸಕ್ತಿಗಾಗಿ ರಾಜಕಾರಣಿಗಳು ಸಾಮಾನ್ಯರನನ್ನು ಬಾವಿಗೆ ನೂಕುತ್ತಿದ್ದಾರೆ ಎಂದು ಅಪಸ್ವರ ತೆಗೆದಿದ್ದಾರೆ.

Published On - 11:39 am, Sat, 16 January 21