3ನೇ ಅಲೆ ಬರುತ್ತೆ, ಎಲ್ಲರೂ ಉಳಿಯಬೇಕು. ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ. ನಾನಂತೂ ಉಳಿಯಬೇಕು- ಹೀಗ್ಯಾಕಂದ್ರು ಸಚಿವ ಕತ್ತಿ!?

Umesh Katti : ಸರ್ಕಾರಕ್ಕೆ ಸ್ಥಳೀಯರೊಬ್ಬರು ಉಚಿತ ಸಲಹೆ ನೀಡುತ್ತಿದ್ದಂತೆ ಸಚಿವ ಕತ್ತಿ ಅವರು ಕೊರೊನಾ 3ನೇ ಅಲೆಗೆ ನೋಡೋಣ ಎಂದು ನಗೆಯಾಡಿದರು. ಮುಂದುವರಿದು.. ಹಾಗೆಯೇ ಮೂರನೇ ಅಲೆಯೂ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವ ವಿಚಾರ ಹೇಳಿಕೊಂಡ್ರು. ನೀವು ಉಳಿತಿರಿಲ್ವೊ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದೂ ಸೇರಿಸಿದರು.

3ನೇ ಅಲೆ ಬರುತ್ತೆ, ಎಲ್ಲರೂ ಉಳಿಯಬೇಕು. ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ. ನಾನಂತೂ ಉಳಿಯಬೇಕು- ಹೀಗ್ಯಾಕಂದ್ರು ಸಚಿವ ಕತ್ತಿ!?
3ನೇ ಅಲೆ ಬರುತ್ತೆ, ಎಲ್ಲರೂ ಉಳಿಯಬೇಕು. ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ. ನಾನಂತೂ ಉಳಿಯಬೇಕು- ಹೀಗ್ಯಾಕಂದ್ರು ಸಚಿವ ಕತ್ತಿ!?

Updated on: May 08, 2021 | 3:36 PM

ಬಾಗಲಕೋಟೆ: ಕೊರೊನಾ 3ನೇ ಅಲೆ ಬರುತ್ತೆ, ಎಲ್ಲರೂ ಉಳಿಯಬೇಕು. ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದು ಕೊರೊನಾ ಬಗ್ಗೆ ಜಾಗ್ರತೆ ವಹಿಸುವಂತೆ ಬಾಗಲಕೋಟೆಯ ನೂತನ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹಾಸ್ಯಧಾಟಿಯಲ್ಲಿ ಜನರನ್ನು ಬಡಿದೆಬ್ಬಿಸಿದರು. ಆ ವೇಳೆ ಅಲ್ಲೇ ಇದ್ದ ಸಂಸದ ಗದ್ದಿಗೌಡರ್ ಅವರು ಸಚಿವ ಕತ್ತಿ ಮಾತಿಗೆ ಹಣೆ ಚಚ್ಚಿಕೊಂಡರು.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮದಲ್ಲಿಟ್ಟುಕೊಂಡು ನೂತನ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿದರು. ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸ ಹಮ್ಮಿಕೊಂಡಿರುವ ಸಚಿವ ಕತ್ತಿ ಜಿಲ್ಲೆಯ ಬನಹಟ್ಟಿ ಪಟ್ಟಣಕ್ಕೆ ಭೇಟಿ ನೀಡಿದರು.

ಕೊವೀಡ್ ಕೇರ್ ಸೆಂಟರ್ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಸಚಿವ ಕತ್ತಿ, ಇತರೆ ಸೋಂಕಿತರಿಗೆ ಬೆಡ್ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಮೇಶ್ ಕತ್ತಿಗೆ ತೇರದಾಳ ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ. ಗದ್ದಿಗೌಡರ್, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಸಾಥ್ ನೀಡಿದರು. ಕೊವಿಡ್ ಸಂಬಂಧ ಅಧಿಕಾರಿಗಳು, ವೈದ್ಯರ ಜತೆ ಸಭೆ ನಡೆಸಿದರು.

ಸಚಿವ ಕತ್ತಿ ಭೇಟಿ ವೇಳೆ ಸ್ಥಳೀಯರೊಬ್ಬರು 1 ಆಕ್ಸಿಜನ್ ಸಾಂದ್ರಕ ದೇಣಿಗೆ ನೀಡಿದರು

ಸಚಿವರ ಭೇಟಿ ವೇಳೆ ಸ್ಥಳೀಯರೊಬ್ಬರು 1 ಆಕ್ಸಿಜನ್ ಸಾಂದ್ರಕ ದೇಣಿಗೆ ನೀಡಿದರು. ಜೊತೆಗೆ, ಸರ್ಕಾರದಿಂದ ಇಂಥ ಯಂತ್ರ ಹೆಚ್ಚೆಚ್ಚು ಒದಗಿಸಲು ಅವರು ಸಲಹೆ ನೀಡಿದರು. ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ಬರುತ್ತಿದ್ದಂತೆ ಸಚಿವ ಕತ್ತಿ ಅವರು ಕೊರೊನಾ 3ನೇ ಅಲೆಗೆ ನೋಡೋಣ ಎಂದು ನಗೆಯಾಡಿದರು. ಮುಂದುವರಿದು.. ಹಾಗೆಯೇ ಮೂರನೇ ಅಲೆಯೂ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವ ವಿಚಾರ ಹೇಳಿಕೊಂಡ್ರು. ನೀವು ಉಳಿತಿರಿಲ್ವೊ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದು ಹೇಳಿದರು.

ಆಕ್ಸಿಜನ್ ಕೊರತೆ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯರಿಂದ ಪ್ರಸ್ತಾಪ ಬಂದಾಗ ಅಗತ್ಯ ಇರುವ ಆಕ್ಸಿಜನ್ ಪೂರೈಸುವುದಾಗಿ ಉಮೇಶ್ ಕತ್ತಿ ಭರವಸೆ ನೀಡಿದರು. ಸ್ಥಳದಲ್ಲೇ ಇದ್ದ ಎಸ್ಪಿ ಲೋಕೇಶ್ ಜಗಲಾಸರ್ ಸಮಸ್ಯೆ ಇಲ್ಲ, ಅಗತ್ಯ ಇರುವ ಸಿಲಿಂಡರ್ ಕಳುಹಿಸುವುದಾಗಿ ಹೇಳಿದ್ರು.

(coronavirus 3rd wave certain protect yourself i want to live says bagalkot incharge minister umesh katti)

‘ನಾನು ಹಾಗೆ ಹೇಳಬಾರದಿತ್ತು’; ಸಾವಿನ ಮಾತಿಗೆ ಕ್ಷಮೆ ಕೇಳಿದ ಸಚಿವ ಉಮೇಶ ಕತ್ತಿ

Published On - 3:35 pm, Sat, 8 May 21