ಕೊವಿಡ್ ವಾರ್ಡ್​ನಲ್ಲಿ ಹಾಡು, ನೃತ್ಯ; ಮಾನಸಿಕ ಖಿನ್ನತೆ ಕಡಿಮೆಯಾಗಿ ಸಂತಸದ ವಾತಾವರಣ ನಿರ್ಮಾಣ: ವಿಡಿಯೋ ನೋಡಿ

| Updated By: ganapathi bhat

Updated on: Aug 23, 2021 | 12:43 PM

ಆಕ್ಸಿಜನ್ ಬೆಡ್​ನಲ್ಲಿರುವ ಕೋವಿಡ್ ಸೋಂಕಿತರು ಹಾಡು, ನೃತ್ಯಕ್ಕೆ ಸಾಥ್ ನೀಡಿದ್ದಾರೆ. ಬೆಡ್​ನಲ್ಲಿ ಕುಳಿತೇ ರೋಗಿಗಳು ಹಾಡಿಗೆ ಸಾಥ್ ನೀಡಿದ್ದಾರೆ. ರೋಗಿಗಳ ಮಾನಸಿಕ ಖಿನ್ನತೆ ಕಡಿಮೆ ಮಾಡಲು ನೃತ್ಯ ಮಾಡಿಸಲಾಗಿದೆ.

ಕೊವಿಡ್ ವಾರ್ಡ್​ನಲ್ಲಿ ಹಾಡು, ನೃತ್ಯ; ಮಾನಸಿಕ ಖಿನ್ನತೆ ಕಡಿಮೆಯಾಗಿ ಸಂತಸದ ವಾತಾವರಣ ನಿರ್ಮಾಣ: ವಿಡಿಯೋ ನೋಡಿ
ಕೊವಿಡ್​ ವಾರ್ಡ್​ (ಸಾಂದರ್ಭಿಕ ಚಿತ್ರ)
Follow us on

ತುಮಕೂರು: ನಗರದ ಕೊವಿಡ್ ವಾರ್ಡ್​ನಲ್ಲಿ ಸೋಂಕಿತರು ‘ಒಂದಾಗಿದ್ದರೆ ಎಲ್ಲಾ’ ಹಾಡಿಗೆ ನೃತ್ಯ ಮಾಡಿದ್ದಾರೆ. ಸೋಂಕಿತರು ಮನಶ್ಶಾಂತಿ ಪಡೆಯುವಂತೆ, ಧೈರ್ಯಗೆಡದಂತೆ ಮಾಡಲು ಹೀಗೆ ನೃತ್ಯ ಮಾಡಲಾಗಿದೆ. ಒಟ್ಟಾಗಿ ಹಾಡು ಹಾಡಿದ್ದರಿಂದ ಸೋಂಕಿತರಲ್ಲಿ ಉಲ್ಲಾಸ ತುಂಬಿದೆ. ವಾರ್ಡ್ ನರ್ಸ್​ ಕೂಡ ನೃತ್ಯ ಮಾಡಿದ್ದಾರೆ.

ಆಕ್ಸಿಜನ್ ಬೆಡ್​ನಲ್ಲಿರುವ ಕೋವಿಡ್ ಸೋಂಕಿತರು ಹಾಡು, ನೃತ್ಯಕ್ಕೆ ಸಾಥ್ ನೀಡಿದ್ದಾರೆ. ಬೆಡ್​ನಲ್ಲಿ ಕುಳಿತೇ ರೋಗಿಗಳು ಹಾಡಿಗೆ ಸಾಥ್ ನೀಡಿದ್ದಾರೆ. ರೋಗಿಗಳ ಮಾನಸಿಕ ಖಿನ್ನತೆ ಕಡಿಮೆ ಮಾಡಲು ನೃತ್ಯ ಮಾಡಿಸಲಾಗಿದೆ. ಇದರಿಂದ, ಜಿಲ್ಲಾಸ್ಪತ್ರೆಯ ಕೊವಿಡ್ ವಾರ್ಡ್​ನಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದೇ ರೀತಿಯ ಘಟನೆ ಬೆಂಗಳೂರು, ಬಸವಕಲ್ಯಾಣ ಮುಂತಾದೆಡೆ ನಡೆದಿದೆ.

ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಸಮಾಲೋಚನೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪಂಜಾಬ್​, ಕರ್ನಾಟಕ, ಬಿಹಾರ್ ಮತ್ತು ಉತ್ತಾರಖಂಡ್​ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ರಾಜ್ಯಗಳ ಕೊವಿಡ್​ -19 ಸ್ಥಿತಿಗತಿಯನ್ನು ಚರ್ಚಿಸಿದರು.

ಕೊವಿಡ್ 2ನೇ ಅಲೆ ಉಲ್ಬಣ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿಯವರು ಪ್ರತಿದಿನ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಟ್ಟಿಗೆ ವರ್ಚ್ಯುವಲ್ ಆಗಿ ಸಮಾಲೋಚನೆ ನಡೆಸುತ್ತಿದ್ದಾರೆ. ಆಂಧ್ರಪ್ರದೇಶ, ಜಾರ್ಖಂಡ, ತೆಲಂಗಾಣ, ಒಡಿಶಾ ಮುಖ್ಯಮಂತ್ರಿಗಳೊಟ್ಟಿಗೆ ಈಗಾಗಲೇ ಮಾತನಾಡಿ, ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಭೆಯಲ್ಲಿ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉತ್ತರಾಖಂಡ ಸಿಎಂ ತೀರಥ್​ ಸಿಂಗ್​ ರಾವತ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿ, ನಿಯಂತ್ರಣಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಫಲಿಸಲಿಲ್ಲ ಬಡ ಕ್ರಿಕೆಟಿಗನ ಪ್ರಾರ್ಥನೆ; ಯುವ ಕ್ರಿಕೆಟಿಗ ಚೇತನ್ ಸಕಾರಿಯಾ ತಂದೆ ಕೊರೊನಾ ಸೋಂಕಿನಿಂದ ನಿಧನ

ಆಶಾದಾಯಕ ಸುದ್ದಿ: ಈಗಲೇ ಕಠಿಣ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯನ್ನು ತಡೆಗಟ್ಟಬಹುದು

Published On - 5:33 pm, Sun, 9 May 21